ಮೇ 28 ರಂದು 10 ರಾಜ್ಯಗಳಲ್ಲಿ ಲೋಕಸಭಾ,ವಿಧಾನಸಭಾ ಉಪ ಚುನಾವಣೆ

    

Last Updated : Apr 26, 2018, 10:53 PM IST
ಮೇ 28 ರಂದು 10 ರಾಜ್ಯಗಳಲ್ಲಿ ಲೋಕಸಭಾ,ವಿಧಾನಸಭಾ ಉಪ ಚುನಾವಣೆ title=

ನವದೆಹಲಿ: ಚುನಾವಣಾ ಆಯೋಗವು ಗುರುವಾರದಂದು ಖಾಲಿ ಉಳಿದಿರುವ ಲೋಕಸಭಾ ಮತ್ತು ವಿಧಾನಸಭಾ  ಹುದ್ದೆಗಳನ್ನು ತುಂಬುವುದಕ್ಕಾಗಿ ಉಪ ಚುನಾವಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚುನಾವಣಾ ಆಯೋಗವು ಮಹಾರಾಷ್ಟ್ರ, ನಾಗಾಲ್ಯಾಂಡ್, ಉತ್ತರ ಪ್ರದೇಶ ಮತ್ತು ಬಿಹಾರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ  ಚುನಾವಣೆಯನ್ನು ನಡೆಸಲು ನಿರ್ಧರಿಸಿದೆ.

ಮಹಾರಾಷ್ಟ್ರದಲ್ಲಿ  ಉಪಚುನಾವಣೆಯು ಭಂಡರಾ-ಗೊಂಡಿಯಾ ಮತ್ತು ಪಾಲ್ಗರ್ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಏತನ್ಮಧ್ಯೆ, ಉತ್ತರ ಪ್ರದೇಶದ ಕೈರನಾ ಕ್ಷೇತ್ರ ಮತ್ತು ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆ ನಡೆಯಲಿದೆ.

ಉಪಚುನಾವಣೆಯ ಚುನಾವಣೆ ಮೇ 28 ರಂದು ನಡೆಯಲಿದ್ದು, ಮತಗಳ ಎಣಿಕೆಯು ಮೇ 31 ರಂದು ನಡೆಯಲಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

Trending News