LPG ಗ್ರಾಹಕರಿಗೆ ‘ಶಾಕಿಂಗ್ ನ್ಯೂಸ್’! ಇನ್ಮುಂದೆ ವಾರಕ್ಕೊಮ್ಮೆ ಬದಲಾಗುತ್ತೆ ಸಿಲೆಂಡರ್ ಬೆಲೆ ?

ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಆಧರಿಸಿ ಪ್ರತಿ ವಾರವೂ ಬೆಲೆ ನಿಗದಿ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿವಾರವೂ ಎಲ್‌ಪಿಜಿ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ.

Last Updated : Dec 23, 2020, 07:59 PM IST
  • 2021ರಿಂದಲೇ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರ
  • ಪ್ರಸ್ತುತ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾದ ದರ ಅನ್ವಯ
  • ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಆಧರಿಸಿ ಪ್ರತಿ ವಾರವೂ ಬೆಲೆ ನಿಗದಿ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿವಾರವೂ ಎಲ್‌ಪಿಜಿ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ.
LPG ಗ್ರಾಹಕರಿಗೆ ‘ಶಾಕಿಂಗ್ ನ್ಯೂಸ್’! ಇನ್ಮುಂದೆ ವಾರಕ್ಕೊಮ್ಮೆ ಬದಲಾಗುತ್ತೆ ಸಿಲೆಂಡರ್ ಬೆಲೆ ? title=

ನವದೆಹಲಿ: ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆಗಳು ಪ್ರತಿದಿನವೂ ಪರಿಷ್ಕರಣೆಯಾಗುವ ಮಾದರಿಯಲ್ಲೇ ಎಲ್‌ಪಿಜಿ ಸಿಲಿಂಡರ್‌ ಬೆಲೆ ಕೂಡ ವಾರಕ್ಕೊಮ್ಮೆ ಪರಿಷ್ಕರಣೆಯಾಗಲಿದೆ. 2021ರಿಂದಲೇ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ.

ಪ್ರಸ್ತುತ ಪೆಟ್ರೋಲ್, ಡಿಸೇಲ್(Diesel-Petrol), ಬೆಲೆಯನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾದ ದರ ಅನ್ವಯವಾಗುತ್ತದೆ.

DTH ಮಾರ್ಗಸೂಚಿಗಳ ಪರಿಷ್ಕರಣೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ

ಪ್ರಸ್ತುತ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿಂಗಳ ಆರಂಭದಲ್ಲೇ ತೈಲ ಬೆಲೆ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪೆನಿಗಳು ತಿಂಗಳು ಪೂರ್ತಿಯಾಗಿ ಭರಿಸಬೇಕಿತ್ತು. ಹೀಗಾಗಿ ಪ್ರತಿ ವಾರವೂ ಎಲ್‌ಪಿಜಿ ಬೆಲೆ ಪರಿಷ್ಕರಣೆ ಮಾಡುವ ಕುರಿತು ತೈಲ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ.

'ಸರ್ಕಾರಿ ಶಾಲೆ, ಮದರಸಾ ಮಕ್ಕಳ ಖಾತೆಗೆ ₹ 10 ಸಾವಿರ ಜಮಾ'

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಆಗಾಗ್ಗೆ ಏರಿಳಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಆಧರಿಸಿ ಪ್ರತಿ ವಾರವೂ ಬೆಲೆ ನಿಗದಿ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿವಾರವೂ ಎಲ್‌ಪಿಜಿ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ.

Big Announcement: ಅನ್ನದಾತನ ಖಾತೆಗೆ 18 ಸಾವಿರ ಕೋಟಿ ರೂ. ವರ್ಗಾಯಿಸಲು ಮುಂದಾದ Modi Government

ಪೆಟ್ರೋಲ್, ಡಿಸೇಲ್ ದರವನ್ನು ಪ್ರತಿದಿನ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಗೆ ಬಂದ ಬಳಿಕ ಬಹುತೇಕ ದರ ದುಪ್ಪಟ್ಟು ಏರಿಕೆಯಾಗಿದೆ. ಡೀಲರ್ ಕಮಿಷನ್ ಮತ್ತು ಅಬಕಾರಿ ಸುಂಕ ಸೇರ್ಪಡೆಯಾಗಿರುವುದರಿಂದ ಪೆಟ್ರೋಲ್, ಡಿಸೇಲ್ ದರ ಕಡಿಮೆಯಾಗುತ್ತಿಲ್ಲ.

Farmers' Day: ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಹೆಸರಿನಲ್ಲಿ ರೈತ ದಿನಾಚರಣೆ ಆಚರಿಸುವುದೇಕೆ ಗೊತ್ತೇ?

ವಾಹನ ಸವಾರರು ಪ್ರತಿದಿನವೂ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಕಂಡು ಹೌಹಾರುವಂತೆಯೇ, ಮುಂದಿನ ವರ್ಷದಿಂದ ಎಲ್‌ಪಿಜಿ ಗ್ರಾಹಕರು ಪ್ರತಿ ವಾರವೂ ಟೆನ್ಷನ್ ಅನುಭವಿಸಬೇಕಿದೆ.

COVID-19 ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ಆಚರಣೆಗೆ ತಮಿಳುನಾಡು ಸರ್ಕಾರದ ಅನುಮತಿ

Trending News