ನವದೆಹಲಿ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ವಿಚಾರದ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪುಣೆ ಲೋಕಸಭಾ ಕ್ಷೇತ್ರದಿಂದ ಮಾಧುರಿಯವರನ್ನು ಕಣಕ್ಕಿಳಿಸುವ ವಿಚಾರವಾಗಿ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಬಂದಿತ್ತು,ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಧುರಿ ದೀಕ್ಷಿತ್ ವಕ್ತಾರ "ಈ ಸುದ್ದಿ ಸುಳ್ಳು ಇದು ಊಹಾತ್ಮಕವಾಗಿ ಎಂದು ತಿಳಿಸಿದ್ದರು
ಈ ವರ್ಷದ ಜೂನ್ ತಿಂಗಳಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮುಂಬೈ ನಿವಾಸದಲ್ಲಿ ಸಂಪರ್ಕ ಫಾರ್ ಸಮರ್ಥನ್ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿದ್ದರು.ಇನ್ನೊಂದೆಡೆಗೆ ಹಿರಿಯ ಮಹಾರಾಷ್ಟ್ರ ಬಿಜೆಪಿ ನಾಯಕ ಮಾಧುರಿ ದೀಕ್ಷಿತ್ ಅವರ ಹೆಸರನ್ನು ಪುಣೆ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪಿಟಿಐಗೆ ತಿಳಿಸಿದ್ದರು.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ರನ್ನು ಪುಣೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡುವ ವಿಚಾರವಾಗಿ ಪಕ್ಷ ಗಂಭೀರವಾಗಿ ಪರಿಗಣಿಸಿದೆ.ಪುಣೆ ಲೋಕಸಭಾ ಕ್ಷೇತ್ರವು ಅವರಿಗೆಗೆ ಉತ್ತಮವೆಂದು ನಾವು ಭಾವಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
"ಹಲವು ಲೋಕಸಭಾ ಕ್ಷೇತ್ರಗಳ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸುವುದರಲ್ಲಿ ಪಕ್ಷ ನಿರತವಾಗಿದೆ. ಈ ವೇಳೆ ಪುಣೆ ಲೋಕಸಭಾ ಕ್ಷೇತ್ರಕ್ಕೆ ದೀಕ್ಷಿತ್ ಹೆಸರನ್ನು ಆಯ್ಕೆ ಮಾಡಲಾಗಿದೆ" ಎಂದು ಅವರು ಹೇಳಿದರು.
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ 1984 ರಲ್ಲಿ "ಅಬೋಧ್" ನೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು "ತೆಜಾಬ್", "ರಾಮ್ ಲಖನ್", "ದಿಲ್", "ಬೀಟಾ", "ಹಮ್ ಆಪ್ಕೆ ಹೈ ಕೌನ್ ..!", "ಅಂಜಾಮ್", "ಮೃತ್ಯುದಾಂಡ್", "ಪುಕರ್", " ದಿಲ್ ತೋ ಪಾಗಲ್ ಹೈ "ಮತ್ತು" ದೇವದಾಸ್ ".ಚಿತ್ರಗಳಲ್ಲಿ ನಟಿಸಿದ್ದಾರೆ.