ನವದೆಹಲಿ: ಬಿಜೆಪಿ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕೈಲಾಶ್ ಚಂದ್ರ ಜೋಶಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಭೂಪಾಲ್ ನಲ್ಲಿನ ಬನ್ಸಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಮಗ ಮತ್ತು ಮಾಜಿ ರಾಜ್ಯ ಸಚಿವ ದೀಪಕ್ ಜೋಶಿ ಪಿಟಿಐಗೆ ತಿಳಿಸಿದರು.ಮಾಜಿ ಸಿಎಂಗೆ ಮೂವರು ಗಂಡು ಮತ್ತು ಮೂವರು ಪುತ್ರಿಯರಿದ್ದಾರೆ. ಅವರ ಪತ್ನಿ ಕೆಲವು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಅಂತಿಮ ವಿಧಿ ವಿಧಾನಗಳನ್ನು ಸೋಮವಾರದಂದು ದೇವಾಸ್ ಜಿಲ್ಲೆಯ ಅವರ ಪೂರ್ವಜ ಪಟ್ಟಣ ಹಟ್ಪಿಪಲ್ಯದಲ್ಲಿ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಸಂಸದ ಅಲೋಕ್ ಸಂಜರ್ ತಿಳಿಸಿದ್ದಾರೆ.
Kailash Joshi Ji was a stalwart who made a strong contribution towards Madhya Pradesh’s growth. He worked hard to strengthen Jan Sangh and BJP in Central India. He made a mark as an effective legislator. Pained by his demise. Condolences to his family and supporters. Om Shanti.
— Narendra Modi (@narendramodi) November 24, 2019
ಜುಲೈ 14, 1929 ರಂದು ಜನಿಸಿದ ಜೋಶಿ ಅವರನ್ನು ‘ರಾಜಕೀಯದ ಸಂತ’ ಎಂದು ಕರೆಯಲಾಗುತ್ತದೆ. ಅವರು 1977 ರಿಂದ 1978 ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಇದಾದ ನಂತರ ಅವರು 1997-98ರಲ್ಲಿ ಜನತಾ ಪಕ್ಷದ ಸದಸ್ಯರಾಗಿದ್ದಾಗ ಆರು ತಿಂಗಳು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಲೋಕಸಭೆಯಲ್ಲಿ 2004 ರಿಂದ 2014 ರವರೆಗೆ ಭೋಪಾಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಜೋಶಿ 1962 ರಿಂದ 1998 ರವರೆಗೆ ಬಾಗ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರು. 2000 ರಿಂದ 2004 ರವರೆಗೆ ರಾಜ್ಯಸಭೆಯ ಸದಸ್ಯರಾಗಿಯೂ ಅವರು ಸಂಕ್ಷಿಪ್ತ ಅವಧಿಗೆ ಸೇವೆ ಸಲ್ಲಿಸಿದರು.