JNU ಹಿಂಸಾಚಾರವನ್ನು ೨೬/೧೧ ಮುಂಬೈ ಉಗ್ರದಾಳಿಗೆ ಹೋಲಿಸಿದ ಮಹಾ CM

JNU ಹಿಂಸಾಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Last Updated : Jan 6, 2020, 03:42 PM IST
JNU ಹಿಂಸಾಚಾರವನ್ನು ೨೬/೧೧ ಮುಂಬೈ ಉಗ್ರದಾಳಿಗೆ ಹೋಲಿಸಿದ ಮಹಾ CM title=

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ JNU ಹಿಂಸಾಚಾರವನ್ನು ೨೬/೧೧ ಮುಂಬೈ ಉಗ್ರದಾಳಿಗೆ ಹೋಲಿಸಿದ್ದಾರೆ. ಸೋಮವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಭಾನುವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಘಟನೆ, ೨೬/೧೧ ರಲ್ಲಿ ನಡೆದ ಮುಂಬೈ ಉಗ್ರದಾಳಿಯಂತಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಯಾರೇ ಈ ಹಲ್ಲೆ ನಡೆಸಿದರು ಅಂತವರ ಮುಖವಾದ ಕಳಚುವ ಅಗತ್ಯವಿದ್ದು, ಮಹಾರಾಷ್ಟ್ರದಲ್ಲಿ ನಾವು ಇಂತಹ ಘಟನೆಗಳನ್ನು ಜರುಗಲು ಬಿಡುವುದಿಲ್ಲ ಎಂದಿದ್ದಾರೆ.

ಒಂದು ವೇಳೆ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಅವರಿಗೆ ಮುಖವಾದ ಧರಿಸುವ ಆಗತ್ಯೆವೆನಿತ್ತು? ಎಂದು ಪ್ರಶ್ನಿಸಿರುವ ಅವರು, ಈ ಘಟನೆ ನನಗೆ ೨೬/೧೧ರ ಮುಂಬೈ ಉಗ್ರದಾಳಿಯನ್ನು ನೆನಪಿಸಿದೆ ಮತ್ತು ನಾವು ಇಂತಹ ಘಟನೆಯನ್ನು ಮಹಾರಾಷ್ಟ್ರದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

JNUನಲ್ಲಿ ಜರುಗಿದ ಹಿಂಸಾಚಾರದ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯೆಗಳನ್ನು ನೀಡುತ್ತಲೇ ಇದ್ದು, ಪ್ರತಿಪಕ್ಷಗಳು ಆಡಳಿತಾರೂಢ ಪಕ್ಷವನ್ನು ಇದಕ್ಕಾಗಿ ಗುರಿಯಾಗಿಸಿವೆ. ಘಟನೆಯ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬ್ಬಲ್ "ಮುಸುಕುಧಾರಿ ಕಿಡಿಗೇಡಿಗಳು ಒಂದು ವಿಶ್ವವಿದ್ಯಾಲಯದ ವಿಚಾರವನ್ನು ನಷ್ಟಗೊಳಿಸುತ್ತಿದ್ದರೂ ಕೂಡ 'ಚೌಕಿದಾರ್' ಶಾಂತಿಯುತವಾಗಿ ವೀಕ್ಷಿಸುತ್ತಲೇ ಇದ್ದಾರೆ" ಎಂದಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್, ಮುಸುಕುಧಾರಿ ಗೂಂಡಾಗಳು ವಿವಿ ಪರಿಸರಕ್ಕೆ ಪ್ರವೇಶಿಸಿದ್ದಾರೆ ಎಂಬುದನ್ನು ಅರಿತೂ ಕೂಡ ಪೊಲೀಸರು ಆವರಣದೊಳಗೆ ಏಕೆ ಪ್ರವೇಶಿಸಲಿಲ್ಲ ಎಂದು ಪ್ರಶಿಸಿದ್ದಾರೆ. ಇದೇ ವೇಳೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು ಸರ್ಕಾರ, ಎಲ್ಲ ಸಂಸ್ಥೆಗಳನ್ನು ನಷ್ಟಗೊಳಿಸಲು ಬಯಸುತ್ತಿದ್ದು, JNU ಮೇಲೆ ತನ್ನ ವಿಶೇಷ ಗಮನ ಕೇಂದ್ರೀಕರಿಸಿದೆ ಮತ್ತು ಇದು ವಿಷಾಧನೀಯ ಎಂದಿದ್ದಾರೆ.

ಘಟನೆಗೆ ಪ್ರತಿಕ್ರಿಯೆ ನೀಡಿರುವ BSP ಅಧಿನಾಯಕಿ ಮಾಯಾವತಿ, ಇದೊಂದು ತಲೆತಗ್ಗಿಸುವ ಘಟನೆಯಾಗಿದೆ ಎಂದಿದ್ದಾರೆ. JNU ಆವರಣದಲ್ಲಿ ವಿಧಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ನಡೆದ ಹಲ್ಲೆ ಖಂಡನೀಯವಾಗಿದೆ ಹಾಗೂ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಘಟನೆಯ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Trending News