Maharashtra Political Crisis : ಮಹಾರಾಷ್ಟ್ರದಲ್ಲಿ ಕಳೆದ ಐದು ದಿನಗಳಿಂದ ಭಾರಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ರಾಜ್ಯದಲ್ಲಿ ಶಿವಸೇನೆ ಶಾಸಕರ ಶಿಂಧೆ ಬಣ ಮತ್ತು ಉದ್ಧವ್ ಬಣ ತಾವೇ ನಿಜವಾದ ಶಿವಸೇನೆ ಎಂದು ಸಾಬೀತುಪಡಿಸಲು ತೊಡಗಿದ್ದಾರೆ. ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆಗೆ 40 ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಲಾಗಿದೆ. ಇದೇ ವೇಳೆ ಮಾತನಾಡಿದ ಬಂಡಾಯ ಶಿವಸೇನೆ ಬಣದ ಶಾಸಕ ದೀಪಕ್ ಕೇಸರ್ಕರ್, ನಾವೇ ನಿಜವಾದ ಶಿವಸೇನೆ, ನಮಗೆ ಮೂರನೇ ಎರಡರಷ್ಟು ಬಹುಮತವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್-ಎನ್ಸಿಪಿ ಶಿವಸೇನೆಯನ್ನು ಹೈಜಾಕ್ ಮಾಡಿದೆ ಎಂಬ ಆರೋಪ
ಉದ್ಧವ್ ಠಾಕ್ರೆ ಪಕ್ಷದ ಸಭೆಯ ನಂತರ, ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೇಸರ್ಕರ್, ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ, ಅದರ ಅಗತ್ಯವಿಲ್ಲ. ನಾವು ಮೂರನೇ ಎರಡರಷ್ಟು ಬಹುಮತವನ್ನು ಸಾಬೀತುಪಡಿಸುತ್ತವೆ. ಕಾಂಗ್ರೆಸ್ ಮತ್ತು ಎನ್ಸಿಪಿ ಶಿವಸೇನೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸಿದವು. ಶಿವಸೇನೆ ಅಸ್ತಿತ್ವ ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Maharashtra Crisis : ಠಾಕ್ರೆಗೆ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾದ ಶಿಂಧೆ, ಹೊಸ ಪಕ್ಷ ಕಟ್ಟಲು ನಿರ್ಧಾರ!
'ನಾವು ಬಾಳಾಸಾಹೇಬರ ಶಿವಸೈನಿಕರು'
ಇನ್ನು ಮುಂದುವರೆದು ಮಾತನಾಡಿದ ಬಂಡಾಯ ಬಣದ ವಕ್ತಾರ ದೀಪಕ್ ಕೇಸರ್ಕರ್ , ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಮುಂದುವರಿದಿದ್ದಾರೆ. ನಾವು ಬಾಳಾಸಾಹೇಬರ ಶಿವಸೈನಿಕರು. ನಾವು ಶಿವಸೇನೆ ಬಿಟ್ಟಿಲ್ಲ. ನಾವು ಶಿವಸೇನೆ ಟಿಕೆಟ್ನಿಂದ ಆಯ್ಕೆಯಾದ ಶಾಸಕರು. ಉಪಸಭಾಪತಿಯವರು ನಮ್ಮನ್ನು ಗುರುತಿಸಬೇಕು. ಸಭೆಗೆ ಹಾಜರಾಗದ ಕಾರಣ ನಮ್ಮನ್ನು ಅನರ್ಹಗೊಳಿಸಬಾರದು. ಉದ್ಧವ್ ಠಾಕ್ರೆ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು ಎಂದರು.
ನ್ಯಾಯಾಲಯದ ಮೇಟ್ಟಿಲೇರಿದ ವಿವಾದ
ಶಿಂಧೆ ಬಂಡಾಯದಿಂದ ಎರಡೂ ಕಡೆಯಿಂದ ವಾದ ಮತ್ತು ಪ್ರತಿವಾದಗಳು ನಡೆಯುತ್ತಿವೆ. ಈ ವಿವಾದ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಮತ್ತೊಂದೆಡೆ, ಪಕ್ಷದಲ್ಲಿನ ಒಡಕಿನಿಂದಾಗಿ, ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಕೂಡ ಪಕ್ಷದ ಸಂಘಟನೆಯನ್ನು ಕಾಪಾಡಿಕೊಳ್ಳಲು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾಗಲಿದೆಯೇ ಮತ್ತು ಮಹಾ ವಿಕಾಸ್ ಅಘಾಡಿಯಲ್ಲಿ ಸರ್ಕಾರ ಉಳಿಯುತ್ತದೆಯೇ ಎಂಬುದು ಮುಖ್ಯವಾಗಿದೆ.
ಇದನ್ನೂ ಓದಿ : "ಮೋದಿ, ಶಿವನು ವಿಷ ಕುಡಿದಂತೆ ನೋವು ಸಹಿಸಿಕೊಂಡಿದ್ದರು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.