ಮಮತಾ ಬ್ಯಾನರ್ಜೀ ಚಿಕಾಗೋ ಭೇಟಿಗೆ ಕೇಂದ್ರ ಸರ್ಕಾರ ಅಡ್ಡಿ-ತೃಣಮೂಲ ಆರೋಪ

ಮಮತಾ ಬ್ಯಾನರ್ಜಿಯವರ  ಚಿಕಾಗೋ ಭೇಟಿಗೆ ಕೇಂದ್ರ ಸರ್ಕಾರ ಅಡ್ಡಿಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

Last Updated : Sep 13, 2018, 05:27 PM IST
ಮಮತಾ ಬ್ಯಾನರ್ಜೀ ಚಿಕಾಗೋ ಭೇಟಿಗೆ ಕೇಂದ್ರ ಸರ್ಕಾರ ಅಡ್ಡಿ-ತೃಣಮೂಲ ಆರೋಪ title=

ನವದೆಹಲಿ: ಮಮತಾ ಬ್ಯಾನರ್ಜಿಯವರ  ಚಿಕಾಗೋ ಭೇಟಿಗೆ ಕೇಂದ್ರ ಸರ್ಕಾರ ಅಡ್ಡಿಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ತೃಣಮೂಲ ಪಕ್ಷದ ನಾಯಕ ಡೆರೆಕ್ ಒಬ್ರೇನ್ ಮಾತನಾಡಿ "ವಿವೇಕಾನಂದ ವೇದಾಂತ ಸೊಸೈಟಿ ಮಮತಾ ಬ್ಯಾನರ್ಜಿಯವರನ್ನು ಸಮ್ಮೇಳನಕ್ಕೆ ಆಹ್ವಾನಿಸಿತ್ತು, ಅದಕ್ಕೆ ಮಮತಾ ಅವರು ಸಹಿತ ಒಪ್ಪಿಗೆ ನೀಡಿದ್ದರು. ಆದರೆ ಕಾರ್ಯಕ್ರಮದ ಸಂಘಟನಾಕಾರರು ಸರ್ಕಾರದ ಒತ್ತಡದಿಂದಾಗಿ ಆ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ ಎಂದು ಡೆರೆಕ್ ಆರೋಪಿಸಿದ್ದಾರೆ. 

ಇನ್ನು ಮುಂದುವರೆದು ಬಿಜೆಪಿ ಮತ್ತು ಆರೆಸ್ಸೆಸ್ಸ್ ಗೆ ಕೇವಲ ಗ್ಲೋಬಲ್ ಹಿಂದು ಕಾಂಗ್ರೆಸ್ ವೇದಿಕೆ ಅಡಿಯಲ್ಲಿ ಮಾತ್ರ ಚಿಕಾಗೊದಲ್ಲಿ ಕಾರ್ಯಕ್ರಮ ನಡೆಯಬೇಕು,ಈ ಕಾರ್ಯಕ್ರಮದಲ್ಲಿ ಆರೆಸೆಸ್ಸ್ ನ ಮೋಹನ್ ಭಾಗವತ್ ಅವರು ಭಾಗವಹಿಸುತ್ತಿದ್ದರು.ಆದ್ದರಿಂದ ಚಿಕಾಗೋ ವಿವೇಕಾನಂದ ವೇದಾಂತ ಮಿಶನ್ ಗೆ ಕಾರ್ಯಕ್ರಮವನ್ನು ರದ್ದುಪಡಿಸಲು ಒತ್ತಡ ಹಾಕಲಾಗಿದೆ ಎಂದು ಡೆರೆಕ್ ಒಬ್ರೇನ್ ತಿಳಿಸಿದ್ದಾರೆ.  

ಮಂಗಳವಾರದಂದು ಮಮತಾ ಬ್ಯಾನರ್ಜಿ ಮಾತನಾಡುತ್ತಾ" ನಾನು ಚಿಕಾಗೋಗೆ ಹೋಗಬೇಕಾಗಿತ್ತು. ಆದರೆ ಕೆಲವು ಜನರ ಅಪಾದನೆಯಿಂದಾಗಿ ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ.ಈ ಘಟನೆ ನನಗೆ ನೋವನ್ನುಂಟು ಮಾಡಿದೆ"ಎಂದು ತಿಳಿಸಿದಿದ್ದರು.

Trending News