ಇದು ಪ್ರೀತಿನಾ! ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಿಯಕರ.. ಬ್ರೇಕ್ ಅಪ್ ಬಳಿಕ ಪ್ರೇಯಸಿಗೆ ಮಾಡಿದ್ದೇನು?

Man tries to hang girlfriend: ಕೆಲ ಸಮಯದ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಯುವಕನ ಜತೆ ಪ್ರೇಯಸಿ ಮಾತನಾಡುವುದನ್ನು ನಿಲ್ಲಿಸಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Edited by - Zee Kannada News Desk | Last Updated : Dec 12, 2021, 09:25 AM IST
  • ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಿಯಕರ
  • ಮನೆಗೆ ನುಗ್ಗಿ ಸೀಲಿಂಗ್‌ಗೆ ನೇಣು ಹಾಕಿ ಕೊಲ್ಲಲು ಯತ್ನ
  • ರಕ್ಷಣೆಗೆ ಬಂದ ಯುವತಿಯ ಸೋದರ ಸಂಬಂಧಿ
  • ಅವರನ್ನು ಕಂಡ ತಿರ್ಪುಡೆ ಸ್ಥಳದಿಂದ ಪರಾರಿಯಾದ ಯುವಕ
  • ನಾಗ್ಪುರದ ಕೊರಾಡಿ ಬಡಾವಣೆಯಲ್ಲಿ ಈ ಘಟನೆ
ಇದು ಪ್ರೀತಿನಾ! ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಿಯಕರ.. ಬ್ರೇಕ್ ಅಪ್ ಬಳಿಕ ಪ್ರೇಯಸಿಗೆ ಮಾಡಿದ್ದೇನು? title=
ಬ್ರೇಕ್ ಅಪ್ ಬಳಿಕ ಪ್ರೇಯಸಿಗೆ ಮಾಡಿದ್ದೇನು?

ನಾಗ್ಪುರ (ಮಹಾರಾಷ್ಟ್ರ): ಪ್ರೀತಿ.. ಪ್ರೇಮ.. ಪ್ರಣಯ ಇದು ಹೇಳಿಕೇಳಿ ಹುಟ್ಟುವುದಲ್ಲ. ಎರಡು ಮನಸುಗಳು ಒಂದಾಗಲು ಕೆಲವೊಮ್ಮೆ ನಿಮಿಷಗಳು ಸಾಕು. ಪ್ರೆಮಿಸಿದವರನ್ನೇ ವರಿಸಬೇಕೆಂಬುದು ಎಲ್ಲರ ಬಯಕೆ. ಪ್ರೀತಿ ಸಿಗದಿದ್ದಾಗ ಮನುಷ್ಯ ಹುಚ್ಚನಂತೆ ವರ್ತಿಸುತ್ತಾನೆ ಎಂಬುದಕ್ಕೆ ಈ ಘಟನೆ ಉದಾಹರಣೆಯಂತಿದೆ.

23 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಆಕೆಯ ಮನೆಯ ಸೀಲಿಂಗ್‌ಗೆ ನೇಣು ಹಾಕಿ ಕೊಲ್ಲಲು ಯತ್ನಿಸಿದ್ದಾನೆ (Man tries to hang girlfriend) ಎಂದು ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ. ನಗರದ ಕೊರಾಡಿ ಬಡಾವಣೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಇದನ್ನೂ ಓದಿ: Covid Test: ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್.!

ಘಟನೆ ಬಳಿಕ ಆರೋಪಿ ಆದೇಶ್ ದುರ್ಗಾದಾಸ್ ತಿರ್ಪುಡೆ (23) ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತಿರ್ಪುಡೆಯ ಗೆಳತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು.  ಇಬ್ಬರ ನಡುವೆ ಈ ಇಡೀ ವಿಚಾರಕ್ಕೆ ಮನಸ್ತಾಪ ಬೆಳೆದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಐದು ದಿನಗಳಲ್ಲಿ ಈ 8 ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ

ಶುಕ್ರವಾರ ಆತ ಆಕೆಯ ಮನೆಗೆ ನುಗ್ಗಿ, ಕಪಾಳಕ್ಕೆ ಹೊಡೆದಿದ್ದಾನೆ. ಸೀಲಿಂಗ್ ಗೆ ಸ್ಕಾರ್ಫ್‌ನಿಂದ ನೇಣು ಹಾಕಲು ಯತ್ನಿಸಿದ್ದಾನೆ ಎಂದು ತಿಳಿಸಿದ್ದಾರೆ.

ಅದೃಷ್ಟವಶಾತ್ ಇದನ್ನು ಕಂಡ ಯುವತಿಯ ಸೋದರ ಸಂಬಂಧಿ ರಕ್ಷಣೆಗೆ ಧಾವಿಸಿದ್ದಾರೆ. ಅವರನ್ನು ಕಂಡ ತಿರ್ಪುಡೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Trending News