Covid Test: ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್.!

Covid Test:ವಿಜ್ಞಾನಿ ಡಾ.ಬಿಸ್ವಜ್ಯೋತಿ ಬೋರ್ಕಕೋಟಿ (Dr Biswajyoti Borkakoty)ನೇತೃತ್ವದ ಈಶಾನ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡವು ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

Edited by - Zee Kannada News Desk | Last Updated : Dec 12, 2021, 08:40 AM IST
  • ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್
  • ಪರೀಕ್ಷಾ ಕಿಟ್ ಅನ್ನು ವಿನ್ಯಾಸಗೊಳಿಸಿದ ICMR
  • ಈಗಿನ ಪರೀಕ್ಷಾ ಪದ್ಧತಿಯಲ್ಲಿ ಕನಿಷ್ಠ 36 ಗಂಟೆಗಳ ಅಗತ್ಯವಿದೆ
  • ಹೈಡ್ರೋಲೈಸಿಸ್ ಆಧಾರಿತ ರಿಯಲ್ ಟೈಮ್ RT-PCR ವಿಶ್ಲೇಷಣೆ
  • ಓಮಿಕ್ರಾನ್ ಅನ್ನು ಒಂದೆರಡು ಗಂಟೆಗಳಲ್ಲಿ ಪತ್ತೆಹಚ್ಚುವ ಹೊಸ ಪರೀಕ್ಷಾ ವಿಧಾನ
Covid Test: ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್.! title=
Omicron ರೂಪಾಂತರ ಪತ್ತೆಹಚ್ಚುವ ಕಿಟ್

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವನ್ನು ಒಂದೆರಡು ಗಂಟೆಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗುವ ಪರೀಕ್ಷಾ ಕಿಟ್ ಅನ್ನು ವಿನ್ಯಾಸಗೊಳಿಸಿದೆ ಎಂದು ವರದಿಯೊಂದು ತಿಳಿಸಿದೆ.

ICMR-RMRC, Dibrugarh ಹೊಸ ರೂಪಾಂತರದ (B.1.1.529) SARS-CoV-2 (COVID-19) ಪತ್ತೆಗಾಗಿ ಹೈಡ್ರೋಲೈಸಿಸ್ ಆಧಾರಿತ ರಿಯಲ್ ಟೈಮ್ RT-PCR ವಿಶ್ಲೇಷಣೆಯನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಈ ಮೂಲಕ 2 ಗಂಟೆಗಳಲ್ಲಿ ಹೊಸ ರೂಪಾಂತರವನ್ನು ಪತ್ತೆಹಚ್ಚಬಹುದಾಗಿದೆ ಎಂದು ಡಾ.ಬಿಸ್ವಜ್ಯೋತಿ ಬೋರ್ಕಕೋಟಿ ಶನಿವಾರ ತಿಳಿಸಿದ್ದಾರೆ.

ಈಗಿನ ಪರೀಕ್ಷಾ ಪದ್ಧತಿಯಲ್ಲಿ ಕನಿಷ್ಠ 36 ಗಂಟೆಗಳ ಅಗತ್ಯವಿದೆ. ರೂಪಾಂತರವನ್ನು ಪತ್ತೆಹಚ್ಚಲು ಸಂಪೂರ್ಣ-ಜೀನೋಮ್ ಅನುಕ್ರಮಕ್ಕಾಗಿ 4 ರಿಂದ 5 ದಿನಗಳು ಅಗತ್ಯವಿದೆ. ಆದ್ದರಿಂದ ಈ ಹೊಸ ಪರೀಕ್ಷಾ ಪದ್ಧತಿಯು ಮುಖ್ಯವಾಗಿದೆ ಎಂದರು. 

ಇದನ್ನೂ ಓದಿ: Good News: Omicron ಆತಂಕದ ನಡುವೆ ಇಲ್ಲಿದೆ ಒಂದು ಭಾರಿ ನೆಮ್ಮದಿಯ ಸುದ್ದಿ

ಕೋಲ್ಕತ್ತಾ ಮೂಲದ ಕಂಪನಿ, GCC ಬಯೋಟೆಕ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಕಿಟ್ ಅನ್ನು ತಯಾರಿಸುತ್ತಿದೆ ಎಂದು ತಿಳಿದುಬಂದಿದೆ.

SARS-CoV-2 ನ ಓಮಿಕ್ರಾನ್ (Omicron) ರೂಪಾಂತರದ ನಿರ್ದಿಷ್ಟ ಸಿಂಥೆಟಿಕ್ ಜೀನ್ ತುಣುಕುಗಳ (synthetic gene fragments)ವಿರುದ್ಧ ಕಿಟ್ ಅನ್ನು ಪರೀಕ್ಷಿಸಲಾಗಿದೆ. ಪರೀಕ್ಷೆಗಳು ಶೇಕಡಾ 100 ರಷ್ಟು ನಿಖರವಾಗಿವೆ ಎಂದು ಆಂತರಿಕ ಮೌಲ್ಯಮಾಪನವು ತೋರಿಸಿದೆ ಎಂದು ಡಾ ಬೊರ್ಕಕೋಟಿ ಹೇಳಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಬೋರ್ಕಕೋಟಿ ನೇತೃತ್ವದ ವಿಜ್ಞಾನಿಗಳ ತಂಡವು SARS-CoV-2 ವೈರಸ್ ಅನ್ನು ಯಶಸ್ವಿಯಾಗಿ ಪ್ರತ್ಯೇಕಿಸಿತು. ICMR-RMRC ದಿಬ್ರುಗಢ್ ಈ ಸಾಧನೆಯನ್ನು ಸಾಧಿಸಿದ ದೇಶದ ಮೂರನೇ ಸರ್ಕಾರಿ ಪ್ರಯೋಗಾಲಯವಾಯಿತು.

ದೇಶಾದ್ಯಂತ ಹಲವಾರು ರಾಜ್ಯಗಳು ಓಮಿಕ್ರಾನ್ ಪ್ರಕರಣಗಳನ್ನು (Omicron cases) ವರದಿ ಮಾಡಿರುವುದರಿಂದ ಕಿಟ್ ಅನ್ನು ಒಂದೇ ಸಮಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ಗಳು ಹೊಸ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿದ್ದು, ಸೋಂಕುಗಳ ಸಂಖ್ಯೆಯನ್ನು 33 ಕ್ಕೆ ಏರಿಕೆಕಂಡಿದೆ.

Trending News