ನವದೆಹಲಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಮೇಲೆ ನಡೆದಿರುವ ಗ್ಯಾಂಗ್ ರೇಪ್ ಹಾಗೂ ಕೊಲೆಯಿಂದ ತೀವ್ರವಾಗಿ ಮನನೊಂದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದು, ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮಕ್ಕಳ ಅತ್ಯಾಚರಿಗಳಿಗೆ ಮರಣದಂಡನೆಗೆ ಆಗ್ರಹಿಸಿದ್ದಾರೆ.
12 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ಶಿಕ್ಷೆ ವಿಧಿಸುವುದಕ್ಕಾಗಿ ಪೋಕ್ಸೋ ಕಾಯಿದೆಯಲ್ಲಿ ಬದಲಾವಣೆ ತರಲು ತಮ್ಮ ಸಚಿವಾಲಯದಿಂದ ಮನವಿ ಮಾಡುವುದಾಗಿ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ.
Aap log(media) chaahte hain ki 2 minute mein karyavahi ho jaye, action is being taken by state govts. Also, we are contemplating an amendment in law which awards death penalty to rapists of minors below 12 years of age: Maneka Gandhi,Union Minister #UnnaoCase #KathuaCase pic.twitter.com/o0Xwtuo0f5
— ANI (@ANI) April 13, 2018
ಜನವರಿಯಲ್ಲಿ ಕಥುವಾದ ರಸಾನಾ ಗ್ರಾಮದ ಬಕರವಾಲ್ ಸಮುದಾಯದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ದೇವಸ್ಥಾನದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದು, ಎಂಟು ದಿನಗಳ ಕಾಲ ಆಕೆಗೆ ಔಷಧಿ ಮತ್ತು ಮಾದಕವಸ್ತುಗಳನ್ನು ನೀಡುವ ಮೂಲಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದಕ್ಕೂ ಮೊದಲು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರನ್ನು ಕಾನೂನಿನಡಿ ಕಠಿಣವಾಗಿ ಶಿಕ್ಷಿಸಲು ಹೊಸ ಕಾನೂನೊಂದನ್ನು ತಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದ್ದರು. ಕಥುವಾ ಜಿಲ್ಲೆಯ ನಂಬೋಶಿಶ್ ಬಕರವಾಲ್ ಸಮುದಾಯದ ಎಂಟು ವರ್ಷದ ಹುಡುಗಿಯ ಅತ್ಯಾಚಾರದ ನಂತರ ಕೊಲೆ ಘಟನೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಯವರು ತಮ್ಮ ಸರ್ಕಾರವು ಈ ವಿಷಯದಲ್ಲಿ ಕಾನೂನನ್ನು ತಡೆಯುವುದಿಲ್ಲ ಮತ್ತು ನ್ಯಾಯವು ಹುಡುಗಿಯೊಂದಿಗೆ ಇರುತ್ತದೆ ಎಂದು ಹೇಳಿದರು.
"ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ನಿಟ್ಟಿನಲ್ಲಿ ನಾವು ಕಾನೂನನ್ನು ರೂಪಿಸುತ್ತೇವೆ, ಈ ಮುಗ್ಧ ಮಗುವಿನ ಪ್ರಕರಣವು ಈ ರೀತಿಯ ಕೊನೆಯ ವಿಷಯವಾಗಿರಬೇಕು" ಎಂದು ಮೆಹಬೂಬಾ ಅವರು ಟ್ವೀಟ್ ಮಾಡಿದರು. ಕಾನೂನುಬಾಹಿರ ಕೃತ್ಯಗಳು ಮತ್ತು ಗುಂಪಿನ ಹೇಳಿಕೆಗಳು ಕಾನೂನು ಅಡಚಣೆಗೆ ಅವಕಾಶ ನೀಡುವುದಿಲ್ಲ. ಸರಿಯಾದ ವಿಧಾನವನ್ನು ಅನುಸರಿಸಲಾಗುತ್ತಿದೆ, ತನಿಖೆ ವೇಗವಾಗಿ ನಡೆಯುತ್ತಿದೆ ಮತ್ತು ಬಾಲಕಿಗೆ ನ್ಯಾಯ ಸಿಗಲಿದೆ" ಎಂದು ಮೆಹಬೂಬ ತಿಳಿಸಿದ್ದರು.