ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಮೇನಕಾ ಗಾಂಧಿ ಆಯ್ಕೆ ಸಾಧ್ಯತೆ

ಸುಲ್ತಾನ್ ಪುರ ಸಂಸದೆ ಮತ್ತು ಬಿಜೆಪಿ ನಾಯಕಿ ಮೇನಕಾ ಗಾಂಧಿ 17 ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಲೋಕಸಭಾ ಸದಸ್ಯೆಯಾಗಿರುವ ಮೇನಕಾ ಗಾಂಧಿ ಎಂಟನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

Last Updated : May 30, 2019, 09:14 PM IST
 ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಮೇನಕಾ ಗಾಂಧಿ ಆಯ್ಕೆ ಸಾಧ್ಯತೆ  title=
file photo

ನವದೆಹಲಿ: ಸುಲ್ತಾನ್ ಪುರ ಸಂಸದೆ ಮತ್ತು ಬಿಜೆಪಿ ನಾಯಕಿ ಮೇನಕಾ ಗಾಂಧಿ 17 ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಲೋಕಸಭಾ ಸದಸ್ಯೆಯಾಗಿರುವ ಮೇನಕಾ ಗಾಂಧಿ ಎಂಟನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಮತ್ತು ಹೊಸ ಸರಕಾರದ ರಚನೆಯ ನಂತರ, ಶಾಸನಸಭೆ ಸಿದ್ಧಪಡಿಸಿದ ಹಿರಿಯ ಲೋಕಸಭೆಯ ಸದಸ್ಯರ ಪಟ್ಟಿಯನ್ನು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾಗುತ್ತದೆ, ಇವರು ಹಂಗಾಮಿ ಸ್ಪೀಕರ್ ಆಯ್ಕೆಮಾಡುತ್ತಾರೆ. ಇದಕ್ಕೆ ರಾಷ್ಟ್ರಪತಿ ಅನುಮೋದನೆ ನೀಡುತ್ತಾರೆ.ಸದನಕ್ಕೆ ಸೇರಿದ ನಂತರ ಲೋಕಸಭೆಯು ಪೂರ್ಣಾವಧಿಯ ಸ್ಪೀಕರ್ ಆಗಿ ಆಯ್ಕೆ ಮಾಡುತ್ತದೆ.

2014 ರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದರು. ನಂತರ ಸಂಸತ್ತಿನ ಕೆಳಮನೆ ಸ್ಪೀಕರ್ ಆಗಿ ಸುಮಿತ್ರಾ ಮಹಾಜನ್ ಅವರನ್ನು ಆಯ್ಕೆ ಮಾಡಿತು. ಒಂದು ವೇಳೆ ಅವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ,  ಅಂತಹ ಸಂದರ್ಭದಲ್ಲಿ ಇತರ ಹೆಸರುಗಳನ್ನು ಈ ಹುದ್ದೆಗೆ ಪರಿಗಣಿಸಲಾಗುವುದು. 
 

Trending News