Metro-Man E Sreedharan : ಚುನಾವಣೆಯಲ್ಲಿ ಸೋತರು ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಂಡ 'ಮೆಟ್ರೋ ಮ್ಯಾನ್'!

ಚುನಾವಣೆ ಪ್ರಚಾರದ ವೇಳೆ ಅಲ್ಲಿನ ಮತದಾರರಿಗೆ ತಾನು ಗೆಲಲ್ಲಿ ಅಥವಾ ಸೋಲಲಿ, ಪಾಲಕ್ಕಡ್ ಮುನ್ಸಿಪಾಲಿಟಿಯ ಮದುರವೀರನ್ ಕಾಲೋನಿಯ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಮಾತು ಕೊಟ್ಟಿದ್ದರು.

Last Updated : May 20, 2021, 03:58 PM IST
  • ಇತ್ತೀಚಿಗೆ ನಡೆದ ಕೇರಳ ವಿಧಾನಸಭಾ ಚುನಾವಣೆ
  • ಪಾಲಕ್ಕಡ್ ಮತ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಇ ಶ್ರೀಧರನ್
  • ಸೋತ ಮೇಲೂ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
Metro-Man E Sreedharan : ಚುನಾವಣೆಯಲ್ಲಿ ಸೋತರು ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಂಡ 'ಮೆಟ್ರೋ ಮ್ಯಾನ್'! title=

ಕೇರಳ : ಇತ್ತೀಚಿಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಡ್ ಮತ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಎಂದೆ ಖ್ಯಾತರಾಗಿರುವ ಇ ಶ್ರೀಧರನ್ ಕಾಂಗ್ರೆಸ್ ಅಭ್ಯರ್ಥಿ  ಎದುರು ಕೇವಲ 4 ಸಾವಿರ ಮತಗಳ ಅಂತರದಿಂದ ಸೊತ್ತಿದ್ದಾರೆ. ಆದರೆ, ಸೋತ ಮೇಲೂ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಅಲ್ಲಿನ ಮತದಾರರಿಗೆ ತಾನು ಗೆಲಲ್ಲಿ ಅಥವಾ ಸೋಲಲಿ, ಪಾಲಕ್ಕಡ್ ಮುನ್ಸಿಪಾಲಿಟಿಯ ಮದುರವೀರನ್ ಕಾಲೋನಿ(Palakkad Municipality’s Maduraveeran colony)ಯ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಮಾತು ಕೊಟ್ಟಿದ್ದರು.

ಇದನ್ನೂ ಓದಿ : 'Black Fungus' ನ್ನು ಸಾಂಕ್ರಾಮಿಕ ಕಾಯ್ದೆ ಅಡಿ ತರಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಮುನ್ಸಿಪಾಲಿಟಿಯ ವಾರ್ಡ್ ನಂಬರ್ 3 ರಲ್ಲಿನ ಕೆಲ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮತ್ತೆ ಕೆಲವು ಮನೆಗಳ ವಿದ್ಯುತ್ ಶುಲ್ಕ ಬಾಕಿ ಇದುದ್ದರಿಂದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ನಿವಾಸಿಗಳ ಗುಂಪೊಂದು ಶ್ರೀಧರ್(E Sreedharan) ಅವರನ್ನು ಕೋರಿದ್ದಾಗ ವಿದ್ಯುತ್ ಸಂಪರ್ಕ ಒದಗಿಸುವುದಾಗಿ ಶ್ರೀಧರನ್ ಹೇಳಿದ್ದರು.

ಇದನ್ನೂ ಓದಿ : Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್

ಅದರಂತೆ ಮಂಗಳವಾರ ಈ ಕುಟುಂಬದ ಬಾಕಿ ವಿದ್ಯುತ್ ಬಾಕಿ ಪಾವತಿಗಾಗಿ 81,525 ರೂ. ಚೆಕ್(Cheque) ನ್ನು ಸಹಾಯಕ ಎಂಜಿನಿಯರ್, ಕೆಎಸ್‌ಇಬಿ ಕಲ್ಪತಿ ಇವರ ಹೆಸರಿಗೆ ಶ್ರೀಧರನ್ ಕಳುಹಿಸಿದ್ದಾರೆ. ಅಲ್ಲದೇ, ಪರಿಶಿಷ್ಟ ಜಾತಿಯ 11 ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಇದನ್ನೂ ಓದಿ : SARS-CoV-2 virus ಹರಡುವುದನ್ನು ಹೇಗೆ ತಪ್ಪಿಸಬಹುದು? ವಿಂಡೋ-ಡೋರ್-ಫ್ಯಾನ್‌ಗಳು ಮುಖ್ಯವೇ, ಇಲ್ಲಿದೆ ಮಾರ್ಗಸೂಚಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News