Twitterಗೆ ನೀಡಲಾಗಿದ್ದ ಕಾನೂನು ಕ್ರಮ ವಿನಾಯ್ತಿ ಹಿಂಪಡೆತ, ಕೇಂದ್ರ ಸರ್ಕಾರದ ಮೊದಲ ಪ್ರತಿಕ್ರಿಯೆ ಇದು

Twitter Loses Legal Protection In India: ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ (Twitter India) ಗೆ ಭಾರತದಲ್ಲಿ ನೀಡಲಾಗಿದ್ದ ಕಾನೂನು ಕ್ರಮದಿಂದ ವಿನಾಯ್ತಿ ಹಿಂಪಡೆತದ ಬಳಿಕ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ (Union Law And IT Minister) ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 

Written by - Nitin Tabib | Last Updated : Jun 16, 2021, 02:03 PM IST
  • ಟ್ವಿಟ್ಟರ್ ಗೆ ಭಾರತದಲ್ಲಿ ನೀಡಲಾಗಿದ್ದ ಕಾನೂನು ಕ್ರಮದಿಂದ ವಿನಾಯ್ತಿ ಹಿಂಪಡೆತ
  • ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದೇನು.
  • ನೀತಿ ನಿಯಮಗಳ ಪಾಲನೆಗೆ ಟ್ವಿಟ್ಟರ್ ಗೆ ಹಲವು ಅವಕಾಶಗಳನ್ನು ನೀಡಲಾಗಿದೆ ಎಂದ ಪ್ರಸಾದ್.
Twitterಗೆ ನೀಡಲಾಗಿದ್ದ ಕಾನೂನು ಕ್ರಮ ವಿನಾಯ್ತಿ ಹಿಂಪಡೆತ, ಕೇಂದ್ರ ಸರ್ಕಾರದ ಮೊದಲ ಪ್ರತಿಕ್ರಿಯೆ ಇದು title=
Twitter Loses Legal Protection In India (File Photo)

Twitter Loses Legal Protection In India: ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ (Twitter India) ಗೆ ಭಾರತದಲ್ಲಿ ನೀಡಲಾಗಿದ್ದ ಕಾನೂನು ಕ್ರಮದಿಂದ ವಿನಾಯ್ತಿ ಹಿಂಪಡೆತದ ಬಳಿಕ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ (Union Law And IT Minister) ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿನ ಹೊಸ IT ನಿಯಮಗಳನ್ನು(New IT Rules In India) ಪರಿಪಾಲಿಸಲು ಟ್ವಿಟ್ಟರ್ ಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಆದರೆ, ಟ್ವಿಟ್ಟರ್ ತಿಳಿದು ತಿಳಿದು ಅವುಗಳ ಪರಿಪಾಲನೆ ಮಾಡದಿರುವ ದಾರಿಯನ್ನು ತುಳಿದಿದೆ ಎಂದಿದ್ದಾರೆ.  ಉತ್ತರ ಪ್ರದೇಶದಲ್ಲಿ ನಡೆಧ ಘಟನೆ ಫೇಕ್ ಸುದ್ದಿಗಳ (Fake News) ವಿರುದ್ಧ ಟ್ವಿಟ್ಟರ್ ನ ಅನಿಯಂತ್ರಿತತೆಗೆ ಉದಾಹರಣೆಯಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾನೂನು ಸಚಿವರು, 'ಭಾರತೀಯ ಸಂಸ್ಕೃತಿ (Indian Culture)ತನ್ನ ಭೌಗೋಲಿಕ ಗಾತ್ರಕ್ಕೆ ತಕ್ಕಂತೆ ನಿರಂತರ ಬದಲಾಗುತ್ತಿದೆ. ಕೆಲ ಪರಿಸ್ಥಿತಿಗಳಲ್ಲಿ ಸಾಮಾಜಿಕ ಮಾಧ್ಯಮಗಳ (Social Media) ಪ್ರಚಾರಗಳ ಕಾರಣ ಸಣ್ಣ ಸಣ್ಣ ಘಟನೆಗಳು ಕೂಡ ಕಿಡಿ ಹೊತ್ತಿಸುವ ಸಾಧ್ಯತೆ ಇರುತ್ತದೆ ಮತ್ತು ಅದರಲ್ಲೂ ವಿಶೇಷವಾಗಿ ಫೇಕ್ ಸುದ್ದಿ ಪ್ರಕರಣಗಳಲ್ಲಿ" ಎಂದಿದ್ದಾರೆ.

ಇದಕ್ಕೂ ಮುಂದುವರೆದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಪ್ರಸಾದ್, 'ಟ್ವಿಟ್ಟರ್ ತನ್ನ ಫ್ಯಾಕ್ಟ್ ಚೆಕಿಂಗ್ ಮೆಕ್ಯಾನಿಸಂಗಾಗಿ (Fact Checking Mechanism) ಹೆಸರುವಾಸಿಯಾಗಿದೆ. ಆದರೆ ಉತ್ತರ ಪ್ರದೇಶದಂತಹ ಹಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡ ಬಳಿಕ, ನಕಲಿ ಸುದ್ದಿಗಳ ವಿರುದ್ಧ ಹೋರಾಡುವ ಟ್ವಿಟ್ಟರ್ ನ ಅಯೋಗ್ಯತೆಯನ್ನು ಎತ್ತಿತೋರಿಸುತ್ತದೆ" ಎಂದಿದ್ದಾರೆ. 

'ಐಟಿ ಕ್ಷೇತ್ರದ ಕಂಪನಿಗಳೇ (IT Companies) ಆಗಲಿ ಅಥವಾ ಫಾರ್ಮಾ ಕಂಪನಿಗಳೇ (Pharma Compnies) ಆಗಲಿ ಭಾರತೀಯ ಕಂಪನಿಗಳು (Indian Companies) ಒಂದೊಮ್ಮೆ ವ್ಯಾಪಾರಕ್ಕಾಗಿ ಅಮೆರಿಕಾಗೆ ಹೋದರೆ, ಖುದ್ದಾಗಿ ಅಲ್ಲಿನ ಕಾನೂನು, ನಿಯಮಗಳ (Law Of Land) ಪರಿಪಾಲನೆ ಮಾಡುತ್ತವೆ. ಹೀಗಿರುವಾಗ ಟ್ವಿಟರ್‌ನಂತಹ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನುಗಳನ್ನು ಪಾಲಿಸಲು ನಿರಾಕರಿಸಿ, ವೇದಿಕೆಗಳ ಮೇಲೆ ತಪ್ಪು ಮಾಹಿತಿಗೆ ಬಲಿಯಾದವರಿಗೆ ಧ್ವನಿ ನೀಡುವ ಗುರಿಯನ್ನು ಹೊಂದಿದೆ' ಎಂದು ಪ್ರಸಾದ್ ಹೇಳಿದ್ದಾರೆ.

'ಯಾವುದೇ ಒಂದು ವಿದೇಶಿ ಕಂಪನಿ ಭಾರತಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಾವುಟ ಹಾರಿಸುವ ನೆಪ ಹೇಳಿ ಇಲ್ಲಿನ ನೀತಿ ನಿಯಮಗಳ ಪರಿಪಾಲನೆ ಮಾಡದೆ ಹೋದಲ್ಲಿ, ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದು' ಎಂದು ಕೊನೆಗೆ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ- ಪ್ರಚೋದನಕಾರಿ ಭಾಷಣ ಮಾಡಿದ ಆರೋಪ - Mithun Chakraborty ವಿಚಾರಣೆ ನಡೆಸಿದ ಪೊಲೀಸರು

ಮೇ 25ರಿಂದ ಜಾರಿಯಾಗಿರುವ ನೂತನ ಐಟಿ ನಿಯಮಗಳನ್ನು ಟ್ವಿಟ್ಟರ್ ಇದುವರೆಗೆ ಪರಿಪಾಲನೆ ಮಾಡಿಲ್ಲ. ಹೀಗಾಗಿ  ಸರ್ಕಾರ ಐಟಿ ಕಾಯ್ದೆಯ ಸೆಕ್ಷನ್ 79ರ (IT Act Section 79) ಅಡಿ ಟ್ವಿಟ್ಟರ್ ನೀಡಿದ್ದ ಕಾನೂನು ಕ್ರಮ ವಿನಾಯ್ತಿಯನ್ನು ವಾಪಸ್ ಪಡೆದಿತ್ತು. ಇದಾದ ಬಳಿಕ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಟ್ವಿಟ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಯ ಮೇಲೆ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ (Viral Video) ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ದಾಡಿಗೆ ಕತ್ತರಿ ಹಾಕಲಾಗಿದೆ. ಈ ವಿಡಿಯೋ ವೈರಲ್ ಆಗದಂತೆ ತಡೆಯಲು ಟ್ವಿಟ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಾಜಿಯಾಬಾದ್ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ-Twitter Appoints Interim Chief Compliance Officer: ಕೊನೆಗೂ ಒತ್ತಡಕ್ಕೆ ಮಣಿದ Twitterನಿಂದ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ

ಪೊಲೀಸರು ಹೇಳುವ ಪ್ರಕಾರ, ಈ ಪ್ರಕರಣದ ಅಸಲಿ ಸತ್ಯಾಸತ್ಯತೆ ಬೇರೆಯೇ ಇದೆ. ಈ ಸಂತ್ರಸ್ತ ವೃದ್ಧ ಆರೋಪಿಗೆ ಕೆಲ ತಾಯತಗಳನ್ನು ನೀಡಿದ್ದರು, ಆ ತಾಯತುಗಳಿಂದ (Locket) ಯಾವುದೇ ಪರಿಣಾಮ ಕಂಡುಬಂದಿಲ್ಲ ಎಂಬ ಕಾರಣಕ್ಕೆ ಆರೋಪಿ ವೃದ್ಧನನ್ನು ಥಳಿಸಿದ್ದಾನೆ. ಆದರೆ, ಟ್ವಿಟ್ಟರ್ ಈ ವಿಡಿಯೋಗೆ ಮ್ಯಾನುಪಲೇಟೆಡ್ ಟ್ಯಾಗ್ ನೀಡಿಲ್ಲ. ಅಷ್ಟೇ ಅಲ್ಲ ವೃದ್ಧ ದಾಖಲಿಸಿರುವ FIR ನಲ್ಲಿ 'ಜೈ ಶ್ರೀರಾಮ್ ಘೋಷಣೆ ಹಾಗೂ ದಾಡಿ ಕಟಿಂಗ್ ಕುರಿತು ಏನನ್ನೂ ಹೇಳಿಲ್ಲ' ಎಂದು ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ-Whatsapp Number change : ಹೀಗೆ ಮಾಡಿದರೆ ಸುಲಭವಾಗಿ ಬದಲಾಯಿಸಬಹುದು ವಾಟ್ಸಾಪ್ ನಂಬರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News