ಗ್ಯಾಂಗ್ ರೇಪ್ ನಂತರ ಬೆಂಕಿ ಹಚ್ಚಿಕೊಂಡು ಅಪ್ರಾಪ್ತ ಬಾಲಕಿ ಆತ್ಮಹತ್ಯೆ

ಶುಕ್ರವಾರ ರಾತ್ರಿ ಆಚೆ ತೆರಳಿದ್ದ ಬಾಲಕಿಯನ್ನು ದೂರ ಕರೆದೊಯ್ದು ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. 

Updated: Sep 11, 2018 , 02:59 PM IST
ಗ್ಯಾಂಗ್ ರೇಪ್ ನಂತರ ಬೆಂಕಿ ಹಚ್ಚಿಕೊಂಡು ಅಪ್ರಾಪ್ತ ಬಾಲಕಿ ಆತ್ಮಹತ್ಯೆ

ಆಲಿಗಡ್: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಎರಡು ದಿನಗಳ ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಉತ್ತರ ಪ್ರದೇಶದ ಆಲಿಗಡ್'ನಲ್ಲಿ ಸೋಮವಾರ ನಡೆದಿದೆ. 

ಶುಕ್ರವಾರ ರಾತ್ರಿ ಆಚೆ ತೆರಳಿದ್ದ ಬಾಲಕಿಯನ್ನು ದೂರ ಕರೆದೊಯ್ದು ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಆದರೆ ಆಕೆ ಈ ವಿಚಾರ ಮನೆಯವರಿಗೆ ತಿಳಿಸಿರಲಿಲ್ಲ. ಸೋಮವಾರ ಈ ವಿಚಾರ ಮನೆಯವರಿಗೆ ತಿಳಿಸಿದ್ದಾಳೆ ಎನ್ನಲಾಗಿದ್ದು, ನಂತರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.