ನವದೆಹಲಿ: 2019 ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಈಗ ಸಣ್ಣ ಉದ್ದಿಮೆದಾರರ ತೃಪ್ತಿ ಪಡಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ವಿಮಾ ಯೋಜನೆಯೊಂದನ್ನು ಜಾರಿಗೆ ತರುವ ಯೋಜನೆಯನ್ನು ರೂಪಿಸಲಾಗುತ್ತಿದೆ.
ಸುದ್ದಿಮೂಲಗಳ ಪ್ರಕಾರ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮಾದರಿಯಲ್ಲಿ ಈಗ ಕನಿಷ್ಠ ದರದಲ್ಲಿ ಜಿಎಸ್ಟಿ ನೊಂದಾಯಿತ ಸಣ್ಣ ಉದ್ದಿಮೆದಾರರಿಗೆ ಅಪಘಾತ ವಿಮೆಯನ್ನು ನೀಡಲು ಚಿಂತಿಸುತ್ತಿದೆ.ಮೂಲಗಳು ಹೇಳುವಂತೆ ಉದ್ದಿಮೆದಾರ ವ್ಯಾಪಾರದ ಅನುಗುಣವಾಗಿ 10 ಲಕ್ಷದ ವರೆಗೆ ಅಪಘಾತ ವಿಮೆ ಸೌಲಭ್ಯವನ್ನು ನೀಡಲಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಈ ಯೋಜನೆ ಸರ್ಕಾರ ಒಪ್ಪಿಗೆ ನೀಡಿದ್ದೆ ಆದಲ್ಲಿ ಈ ತಿಂಗಳಾಂತ್ಯಕ್ಕೆ ಅಂದ್ರೆ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮುನ್ನ ಈ ಯೋಜನೆಯನ್ನು ಸರ್ಕಾರ ಘೋಷಿಸುತ್ತದೆ ಎಂದು ತಿಳಿದುಬಂದಿದೆ.
ಸದ್ಯ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವಾರ್ಷಿಕ 2 ಲಕ್ಷ ರೂ ಗಳನ್ನು ಒಳಗೊಂಡಿದೆ ಅದಕ್ಕೆ ಕೇವಲ 12 ರೂಗಳನ್ನು ಮಾತ್ರ ಪಾವತಿಸಲಾಗುತ್ತಿದೆ. ವಿಶೇಷವೆಂದರೆ ಉದ್ದಿಮೆದಾರಿಗೆ ರಿಯಾಯಿತಿ ದರದಲ್ಲಿ ಸಹಾಯದನವನ್ನು ನೀಡುವ ಯೋಜನೆಯನ್ನು ಸರ್ಕಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.ಈ ಯೋಜನೆ ಪ್ರಮುಖವಾಗಿ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.