ಭೋಪಾಲ್: ಶಿವರಾತ್ರಿ ಪ್ರಸಾದ ಸೇವಿಸಿ ಬಳಿಕ ಮಧ್ಯಪ್ರದೇಶದ ಹಳ್ಳಿಯಲ್ಲಿ 1500ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
At least 1500 villagers fell ill, complaining of stomach ache & vomiting after consuming 'prasad' (khichdi) of Shivratri at an ashram in Barwani #MadhyaPradesh pic.twitter.com/2tRnhtXyqP
— ANI (@ANI) February 13, 2018
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಆಶ್ರಮದಲ್ಲಿ ಶಿವರಾತ್ರಿ ದಿನದಂದು ಪ್ರಸಾದ ಸ್ವಿಕರಿಸಿದ ಗ್ರಾಮಸ್ಥರು ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುವಂತಾಗಿದೆ. ಏತನ್ಮಧ್ಯೆ, ಅಸ್ವಸ್ಥ ಭಕ್ತಾದಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಮಾಡಲಾಗಿದೆ.
1500 villagers complained of stomach ache & vomiting after consuming 'prasad' (khichdi) of Shivratri at an ashram in Barwani #MadhyaPradesh pic.twitter.com/7DAXmq4xO6
— ANI (@ANI) February 13, 2018
"ಅಸ್ವಸ್ಥರಾದವರನ್ನು ಗುರುತಿಸಿ ಆಸ್ಪತ್ರೆಗೆ ದಾಖಲಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 2 ಖಾಸಗಿ ಆಸ್ಪತ್ರೆಗಳೂ ಈ ಕಾರ್ಯಕ್ಕೆ ಕೈ ಜೋಡಿಸಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಜಿಲ್ಲಾಧಿಕಾರಿ ತೇಜಸ್ವಿ ಎಸ್. ನಾಯಕ್ ತಿಳಿಸಿದ್ದಾರೆ.