ಒಂದೇ ದಿನದಲ್ಲಿ 20 ಲಕ್ಷ ಕೊರೊನಾ ಪರೀಕ್ಷೆ ಕೈಗೊಂಡ ಭಾರತ

ಒಂದೇ ದಿನದಲ್ಲಿ ಭಾರತ 20 ಲಕ್ಷ COVID-19 ಪರೀಕ್ಷೆಗಳನ್ನು ನಡೆಸುವ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

Last Updated : May 19, 2021, 05:30 PM IST
  • ಒಂದೇ ದಿನದಲ್ಲಿ ಭಾರತ 20 ಲಕ್ಷ - COVID-19 ಪರೀಕ್ಷೆಗಳನ್ನು ನಡೆಸುವ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಒಂದೇ ದಿನದಲ್ಲಿ 20 ಲಕ್ಷ ಕೊರೊನಾ ಪರೀಕ್ಷೆ ಕೈಗೊಂಡ ಭಾರತ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಒಂದೇ ದಿನದಲ್ಲಿ ಭಾರತ 20 ಲಕ್ಷ COVID-19 ಪರೀಕ್ಷೆಗಳನ್ನು ನಡೆಸುವ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ (ಭಾರತದಲ್ಲಿ ಒಂದೇ ದಿನದಲ್ಲಿ ನಡೆಸಿದ ಅತಿ ಹೆಚ್ಚು), ಆದರೆ ದೈನಂದಿನ ಸಕಾರಾತ್ಮಕತೆ ಪ್ರಮಾಣವು ಶೇಕಡಾ 13.31 ಕ್ಕೆ ಇಳಿದಿದೆ" ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ."ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆಸಿದ 20.08 ಲಕ್ಷ ಪರೀಕ್ಷೆಗಳು ಸಹ ಜಾಗತಿಕ ದಾಖಲೆಯಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್

COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದೇಶಾದ್ಯಂತ ಈವರೆಗೆ 32 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಏತನ್ಮಧ್ಯೆ, ಭಾರತದ ದೈನಂದಿನ ಚೇತರಿಕೆ ಸತತ ಆರನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿದೆ, ಕಳೆದ 24 ಗಂಟೆಗಳಲ್ಲಿ 3,89,851 ಜನರು ಚೇತರಿಸಿಕೊಂಡಿದ್ದಾರೆ.ಭಾರತದ ಸಂಚಿತ ಚೇತರಿಕೆ ಪ್ರಮಾಣವು ಬುಧವಾರ 2,19,86,363 ಕ್ಕೆ ತಲುಪಿದೆ, ಮತ್ತು ರಾಷ್ಟ್ರೀಯ ಚೇತರಿಕೆ ದರವು ಶೇ 86.23 ಕ್ಕೆ ತಲುಪಿದೆ.

ಇದನ್ನೂ ಓದಿ : WhatsApp Earning: ಮೂಲಕ ಹಣ ಸಂಪಾದಿಸಬಹುದೇ? ಇಲ್ಲಿದೆ ಮಾಹಿತಿ

58,395 ಪ್ರಕರಣಗಳ ಮೂಲಕ ಕರ್ನಾಟಕ ಅಗ್ರಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (52,898), ಕೇರಳ (45,926), ರಾಜಸ್ಥಾನ (25,160), ತಮಿಳುನಾಡು (21,362), ಆಂಧ್ರಪ್ರದೇಶ (21,274), ಉತ್ತರಪ್ರದೇಶ 21,108), ಪಶ್ಚಿಮ ಬಂಗಾಳ (19,050), ಹರಿಯಾಣ (14,897) ಮತ್ತು ಚಂಡೀಗಡ (12,098) ಸೇರಿವೆ.

ಭಾರತ ಸತತ ಮೂರು ದಿನಗಳವರೆಗೆ 3 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಕಳೆದ 24 ಗಂಟೆಗಳಲ್ಲಿ 2,67,334 ಹೊಸ ಪ್ರಕರಣಗಳು ದಾಖಲಾಗಿವೆ.ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳು 74.46 ರಷ್ಟು ಹೊಸ ಪ್ರಕರಣಗಳನ್ನು ವರದಿ ಮಾಡಿವೆ.ತಮಿಳುನಾಡಿನಲ್ಲಿ ದೈನಂದಿನ ಅತಿ ಹೆಚ್ಚು ಹೊಸ ಪ್ರಕರಣಗಳು 33,059, ಕೇರಳದಲ್ಲಿ 31,337 ಹೊಸ ಪ್ರಕರಣಗಳು ದಾಖಲಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News