ನವದೆಹಲಿ: ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ತೀರದ ಹತ್ತಿರವಿರುವ ಸುಮಾರು 2,15,000 ಕ್ಕೂ ಅಧಿಕ ಜನರನ್ನು ಗುಜರಾತನಲ್ಲಿ ಕೆಳಮಟ್ಟದ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
"ತೀವ್ರ ಚಂಡಮಾರುತದ ಬಿರುಗಾಳಿ" ಆಗಿ ಪರಿವರ್ತನೆಗೊಂಡ 'ವಾಯು' ಚಂಡಮಾರುತವು ತನ್ನ ದಿಕ್ಕನ್ನು ಸ್ವಲ್ಪ ಮಟ್ಟಿಗೆ ಬದಲಿಸಿದೆ ಮತ್ತು ಇದೀಗ ದಕ್ಷಿಣದಲ್ಲಿ ವೆರಾವಲ್ ಮತ್ತು ಪಶ್ಚಿಮದಲ್ಲಿ ದ್ವಾರಕಾ ನಡುವಿನ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಇದುವರೆಗೆ ಕಳೆದ 24 ಗಂಟೆಗಳಲ್ಲಿ 2,15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
Grateful to @NDRFHQ for smooth and safe evacuation of people. pic.twitter.com/YYOlFXuGCT
— Vijay Rupani (@vijayrupanibjp) June 12, 2019
ಈಗ ಗುಜರಾತ್ ಕರಾವಳಿ ಪ್ರದೇಶದಲ್ಲಿ ಒಟ್ಟು 36 ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ, 11 ಹೆಚ್ಚುವರಿ ತಂಡಗಳು ಸಿದ್ಧವಾಗಿವೆ ಎಂದು ಗುಜರಾತ್ ರೆವಿನ್ಯೂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಒಂಬತ್ತು ಎಸ್ಡಿಆರ್ಎಫ್ ತಂಡಗಳು,14 ಎಸ್ಆರ್ಪಿ ಕಂಪೆನಿಗಳು ಮತ್ತು 300 ಸಾಗರ ಕಮಾಂಡೊಗಳನ್ನು ಸಹ ನಿಯೋಜಿಸಲಾಗಿದೆ.ಒಂಬತ್ತು ಹೆಲಿಕಾಪ್ಟರ್ಗಳು ಕಾರ್ಯತಂತ್ರದ ಸ್ಥಳಗಳಲ್ಲಿ ಇರಿಸಲಾಗಿದೆ ಮತ್ತು 10,000 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ" ಎಂದು ಅವರು ಹೇಳಿದರು.
ಗೃಹ ಕಾರ್ಯದರ್ಶಿ ರಾಜೀವ್ ಗೌಬ ಇಂದು ರಾಷ್ಟ್ರೀಯ ಬಿಕ್ಕಟ್ಟಿನ ನಿರ್ವಹಣಾ ಸಮಿತಿಯ (ಎನ್ಸಿಎಂಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿನ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.