ಜಡ್ಜ್ ಗಳ ಮೇಲಿನ ಕೆಸರೆರಚಾಟ ಒಳ್ಳೆಯ ಬೆಳವಣಿಗೆಯಲ್ಲ- ಸಿಜೆಐ ರಂಜನ್ ಗೋಗಯ್

ನ್ಯಾಯಾಧೀಶರ ಮೇಲೆ ಕೆಸರೆರಚಾಟ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಿಜೆಐ ರಂಜನ್ ಗೋಗಯ್ ಅಭಿಪ್ರಾಯಪಟ್ಟಿದ್ದಾರೆ.

Last Updated : Feb 18, 2019, 11:33 AM IST
ಜಡ್ಜ್ ಗಳ ಮೇಲಿನ ಕೆಸರೆರಚಾಟ ಒಳ್ಳೆಯ ಬೆಳವಣಿಗೆಯಲ್ಲ- ಸಿಜೆಐ ರಂಜನ್ ಗೋಗಯ್ title=

ನವದೆಹಲಿ: ನ್ಯಾಯಾಧೀಶರ ಮೇಲೆ ಕೆಸರೆರಚಾಟ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಿಜೆಐ ರಂಜನ್ ಗೋಗಯ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು " ತೀರ್ಪುಗಳನ್ನು  ವಿಮರ್ಶಿಸಿ, ಕಾನೂನು ನೂನ್ಯತೆಗಳನ್ನು ಎತ್ತಿ ತೋರಿಸಿ, ಆದರೆ ಕೋರ್ಟ್ ತೀರ್ಪುಗಳನ್ನು ನೀಡಿದ ಜಡ್ಜ್ ಗಳ ಮೇಲೆ ಕೆಸರೆರಚುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಇದರಿಂದ ಪ್ರತಿಭಾನ್ವಿತ ಯುವಕರ ನ್ಯಾಯಾಧೀಶರಾಗಲು ಇಚ್ಚಿಸುವುದಿಲ್ಲ.ಇದರಿಂದ ಯುವಕರನ್ನು ಇಂತಹ ಹುದ್ದೆಗೆ ಆಕರ್ಷಿಸಿವುದು ಕಷ್ಟವಾಗಿದೆ ಎಂದು ರಂಜನ್ ಗೋಗಯ್ ಅಭಿಪ್ರಾಯ ವ್ಯಕ್ತಪಡಿಸಿದರು.

"ಯುವಕರು ನಾವು ಈಗಾಗಲೇ ಚೆನ್ನಾಗಿ ಸಂಪಾದಿಸುತ್ತಿದ್ದೇವೆ,ಆದ್ದರಿಂದ ನಾವೇಕೆ ಜಡ್ಜ್ ಆಗಿ ಕೆಸರೆರಚಿಕೊಳ್ಳಬೇಕು.ಇದರಿಂದ ನಮ್ಮ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.ಅಲ್ಲದೆ ಪ್ರತಿಭಾವಂತ ವ್ಯಕ್ತಿಗಳು ಜಡ್ಜ್ ಗಳಾಗುತ್ತಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

ಇದೇ ವೇಳೆ ಕೋರ್ಟ್ ರೂಂ ಗಳಲ್ಲಿ ಕೋಪಗೊಳ್ಳುತ್ತಿರುವ ಕುರಿತಾಗಿ ಕೇಳಿದಾಗ "ನಂಗೆ ಯಾರೊಬ್ಬರನ್ನು ಸಂತೈಸುವ ಅಗತ್ಯವಿಲ್ಲ, ನಾನು ರಾಜತಾಂತ್ರಿಕ ವ್ಯಕ್ತಿಯೂ ಅಲ್ಲ ರಾಜಕಾರಣಿಯೂ ಅಲ್ಲ ಯಾವಾಗಲು ನಗುತ್ತಾ ಎಲ್ಲರನ್ನು ಸಂತೈಸುವುದಕ್ಕೆ,ನನಗೆ ಯಾವುದು ಸರಿ ಎನಿಸುತ್ತೋ ಅದನ್ನು ಮಾಡುತ್ತೇನೆ,ಅದರಲ್ಲಿ ನಾನು ತಪ್ಪು ಇರಬಹುದು,ಯಾವನೋ ಒಬ್ಬ ಅನಗತ್ಯವಾಗಿ ಮಾತನಾಡಿದರೆ ನಾನೇನು ಮಾಡಲಿ" ಎಂದು ಹೇಳಿದರು.
   

Trending News