ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಂಜನ್ ಗೊಗೊಯ್ ಅವರು ಸಿಜೆಐ ಅಧಿಕಾರಾವಧಿಯಲ್ಲಿ ಹೈಕೋರ್ಟ್ಗಳಿಗೆ ಮತ್ತು ಸುಪ್ರೀಂ ಕೋರ್ಟ್ಗೆ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಯಾವುದೇ ಸರ್ಕಾರಿ ಹಸ್ತಕ್ಷೇಪವನ್ನು ಎದುರಿಸಲಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಸೋಮವಾರದಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಭಾರತದ ಮಾಜಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಮಂಗಳವಾರ (ಮಾರ್ಚ್ 17) ಮೇಲ್ಮನೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಾಮಪತ್ರ ಸ್ವೀಕರಿಸುವ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿದರು.
ನಿರ್ಗಮಿತ ಸಿಜೆಐ ರಂಜನ್ ಗೊಗೊಯ್ ಅವರು ಅಕ್ಟೋಬರ್ 18 ರಂದು ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನ್ಯಾಯಮೂರ್ತಿ ಬೊಬ್ಡೆ ಸುಪ್ರೀಂ ಕೋರ್ಟ್ನ ಎರಡನೇ ಹಿರಿಯ-ನ್ಯಾಯಾಧೀಶರು. ಸಂಪ್ರದಾಯದ ಪ್ರಕಾರ, ಮುಂದಿನ ಮುಖ್ಯ ನ್ಯಾಯಮೂರ್ತಿ ಅವರ ಉತ್ತರಾಧಿಕಾರಿಯ ಹೆಸರನ್ನು ಸರ್ಕಾರಕ್ಕೆ ಬರೆದು ಶಿಫಾರಸು ಮಾಡಬೇಕು.
ಮುಖ್ಯ ನ್ಯಾಯಮೂರ್ತಿ ಗೊಗೊಯ್ ಅವರು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ, ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ವಿವಾದಿತ ರಾಮಜನ್ಮ ಭೂಮಿ ಪ್ರಕರಣ ಕುರಿತಂತೆ ಅಂತಿಮ ಗಡುವು ನೀಡಿರುವ ಸುಪ್ರೀಂಕೋರ್ಟ್, ಅಗತ್ಯವಿದ್ದರೆ ಪ್ರತಿದಿನ ಮತ್ತು ಪ್ರತಿ ಶನಿವಾರ ಒಂದು ಗಂಟೆ ಹೆಚ್ಚುವರಿ ವಿಚಾರಣೆ ನಡೆಸಲು ಸಿದ್ಧ ಎಂದು ತಿಳಿಸಿದೆ.
ಆಗಸ್ಟ್ 5 ರಿಂದ ಜಾರಿಯಲ್ಲಿರುವ ಭದ್ರತಾ ನಿರ್ಬಂಧಗಳ ಮಧ್ಯೆ ಅಲ್ಲಿ ಹೈಕೋರ್ಟ್ಗೆ ಪ್ರವೇಶಿಸುವುದು ಕಷ್ಟ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಪೀಠ ಸೋಮವಾರದಂದು ಜಮ್ಮು ಮತ್ತು ಹೈಕೋರ್ಟ್ ನಿಂದ ವರದಿ ಕೇಳಿದೆ.
ಪ್ರಸ್ತುತ ಕಾಲಘಟ್ಟವು ಕೆಲವು ವ್ಯಕ್ತಿ ಮತ್ತು ಗುಂಪುಗಳಿಂದಾಗಿ ಯುದ್ಧೋನ್ಮಾದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಳವಳ ವ್ಯಕ್ತ ಪಡಿಸಿದರು. ಆದರೆ ಇಂತಹ ಬೆಳವಣಿಗೆಗಳು ದೇಶದ ಕಾನೂನು ಸಂಸ್ಥೆಗಳ ಶಕ್ತಿಯುತ ಸಂಪ್ರದಾಯಗಳಿಂದ ಸೋಲಿಸಲ್ಪಡುತ್ತವೆ ಎನ್ನುವ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.
ಸಮಿತಿಯ ವರದಿಯ ನಂತರ, ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾರ್ಯವಿಧಾನದ ಪ್ರಕಾರ, ನ್ಯಾಯಮೂರ್ತಿ ಶುಕ್ಲಾ ಅವರಿಗೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಸಿಜೆಐ ರಂಜನ್ ಗೋಗಯ್ ವಿರುದ್ಧ ಬಂದಿರುವ ಲೈಂಗಿಕ ಕಿರುಕುಳ ಆರೋಪದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಅಲ್ಲದೆ ಸಿಜೆಐ ವಿರುದ್ಧ ಬಂದಿರುವ ಆರೋಪಗಳೆಲ್ಲವೂ ಕೂಡ ಆಧಾರರಹಿತ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಣ ವಿರುದ್ಧ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಕೆ ಪಟ್ನಾಯಕ್ ಅವರು ತನಿಖೆ ನಡೆಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಿಳಿಸಿದ್ದಾರೆ.
ತುರ್ತು ವಿಚಾರಣೆಯ ಅಗತ್ಯವಿಲ್ಲದ ಪ್ರಕರಣಗಳನ್ನು ಸುಪ್ರಿಂಕೋರ್ಟ್ ಬಳಿ ತಂದಿದ್ದೆ ಆದಲ್ಲಿ ಮುಂದೊಂದು ದಿನ ವಕೀಲರು ತುರ್ತು ಕೇಸ್ ಗಳನ್ನು ಉಲ್ಲೇಖಿಸುವ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.