Mumbai in Landslide : ಭಾರೀ ಮಳೆಯಿಂದ ಮುಂಬೈನಲ್ಲಿ ಭೂಕುಸಿತ : ಮೃತರ ಸಂಖ್ಯೆ 23 ರಕ್ಕೆ ಏರಿಕೆ!

ಎನ್‌ಡಿಆರ್‌ಎಫ್ ತಂಡದಿಂದ 11 ಶವಗಳನ್ನು ಅವಶೇಷಗಳಿಂದ ಹೊರತೆಗೆದಿದ್ದು. ಇನ್ನೂ 6 ರಿಂದ 8 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Channabasava A Kashinakunti | Last Updated : Jul 18, 2021, 11:48 AM IST
  • ಮುಂಬೈನ ಚೆಂಬೂರಿನ ನಾಕಾ ಪ್ರದೇಶದಲ್ಲಿ ಭೂಕುಸಿತ
  • ಈ ಅವಘಡದಲ್ಲಿ 11 ಜನ ಪ್ರಾಣ ಕಳೆದುಕೊಂಡಿದ್ದಾರೆ
  • ಮುಂದಿನ 48 ಗಂಟೆಗಳು ಮಳೆ ಮುಂಬೈಗೆ ಸವಾಲಿನ ಸಂಗತಿ
Mumbai in Landslide : ಭಾರೀ ಮಳೆಯಿಂದ ಮುಂಬೈನಲ್ಲಿ ಭೂಕುಸಿತ : ಮೃತರ ಸಂಖ್ಯೆ 23 ರಕ್ಕೆ ಏರಿಕೆ! title=

ಮುಂಬೈ : ಬೆಳಗ್ಗೆ ಧಾರಾಕಾರ ಮಳೆಯಿಂದಾಗಿ ಮುಂಬೈನ ಚೆಂಬೂರಿನ ನಾಕಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಈ ಅವಘಡದಲ್ಲಿ 11 ಜನ ಪ್ರಾಣ ಕಳೆದುಕೊಂಡಿದ್ದರು. ಆದ್ರೆ ಸದ್ಯೆ ಮೃತರ ಸಂಖ್ಯೆ 23 ರಕ್ಕೆ ಏರಿಕೆ ಆಗಿದೆ. ಅವಶೇಷಗಳ ಅಡಿ ಸಿಲುಕಿರುವ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಎನ್‌ಡಿಆರ್‌ಎಫ್ ತಂಡ(NDRF Team)ದಿಂದ 11 ಶವಗಳನ್ನು ಅವಶೇಷಗಳಿಂದ ಹೊರತೆಗೆದಿದ್ದು. ಇನ್ನೂ 6 ರಿಂದ 8 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Good News: SSLCಯಲ್ಲಿ ಫೇಲಾಗಿದ್ದೀರಾ? ಚಿಂತೆ ಬಿಟ್ಟು ನೈಯ್ಯಾ ಪೈಸೆ ಕೂಡ ಖರ್ಚು ಮಾಡದೆ ಗಿರಿಧಾಮಗಳಿಗೆ ಭೇಟಿ ನೀಡಿ

ಮುಂಬೈ(Mumbai)ನ ಜಿಯಾನ್ ಪ್ರದೇಶ ಮತ್ತು ಗಾಂಧಿ ಮಾರುಕಟ್ಟೆಯಲ್ಲಿ ಪ್ರವಾಹ ಉಂಟಾಗಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತವಾಗಿವೆ. ನಗರದ ಎಲ್ಲೆಡೆ ಕಾರುಗಳು ನೀರಿನಲ್ಲಿ ಸಿಲುಕಿಕೊಂಡಿವೆ. ಈ ಕಾರಣದಿಂದಾಗಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಬಿಎಂಸಿ ಉದ್ಯೋಗಿಗಳು ಎಲ್ಲೆಡೆ ಇದ್ದಾರೆ, ಅವರು ಇನ್ನಷ್ಟು ಅಪಾಯ ಎದುರಿಸುವ ಸಂಭವವಿದೆ ಎಂದು ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಲಾಗಿದೆ.

ಮುಂಬೈ ಸಮೀಪದ ಈ ಪ್ರದೇಶಗಳಲ್ಲಿ ನೀರು ಪ್ರವೇಶ :

ಕಳೆದ ರಾತ್ರಿಯಿಂದ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ(Heavy Rain)ಯಾಗುತ್ತಿದೆ. ಮುಂಬೈ ಹೊರತುಪಡಿಸಿ, ಥಾಣೆ, ರಾಯಗಡ್, ನವೀ ಮುಂಬೈ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ತಡರಾತ್ರಿ ಭಾರೀ ಮಳೆಯಾಗಿದೆ. ಸತತ ಭಾರಿ ಮಳೆಯಿಂದಾಗಿ, ಮುಂಬಯಿಯ ಬಹುತೇಕ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಯಾನ್, ಚೆಂಬೂರ್, ಕುರ್ಲಾ, ಚುನ್ನಭಟ್ಟಿ, ಭಂಡಪ್, ಕುರ್ಲಾ, ಅಂಧೇರಿ, ಮಲಾಡ್, ಬೊರಿವಾಲಿ ಮತ್ತು ಕಂಡಿವಲಿ ಪ್ರವಾಹಕ್ಕೆ ಸಿಲುಕಿರುವ ಪ್ರಮುಖ ಪ್ರದೇಶಗಳಾಗಿವೆ.

ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನಸಭೆ ಸಚಿವಾಲಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದಕ್ಕೆ ನಿಷೇಧ

ಮುಂದಿನ 48 ಗಂಟೆ ಮುಂಬೈಗೆ ಸವಾಲು : 

ತಗ್ಗು ಪ್ರದೇಶಗಳ ಜೊತೆಗೆ, ಮುಂಬೈನ ಸ್ಥಳೀಯ ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಲಾಗಿಂಗ್ ಇದೆ. ಮುಂದಿನ 48 ಗಂಟೆಗಳು ಮಳೆ(Rain) ಮುಂಬೈಗೆ ಸವಾಲಿನ ಸಂಗತಿಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಈಗಾಗಲೇ ಆತಂಕ ವ್ಯಕ್ತಪಡಿಸಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಆರೆಂಜ್ ಅಲರ್ಟ್(Orange Alert) ಘೋಷಿಸಲಾಗಿದೆ. ಜನರಿಗೆ ತುರ್ತು ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು, ಇಲ್ಲದಿದ್ದರೆ ಮನೆ ಬಿಟ್ಟು ಹೊರಬರಬೇಡಿ  ಎಂದು ಎಚ್ಚರಿಕೆ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News