ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ.
Mumbai Rain: ಮುಂಬೈನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಶನಿವಾರ ಚರಂಡಿಯಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದರು. ಮತ್ತೊಂದೆಡೆ, ಭಾನುವಾರ ಎರಡು ಪ್ರದೇಶಗಳಲ್ಲಿ ಕಟ್ಟಡ ಕುಸಿದ ಘಟನೆಗಳು ಬೆಳಕಿಗೆ ಬಂದಿವೆ.
Mumbai Building Collapse: ಬಿಎಂಸಿ ಪ್ರಕಾರ, ಮಲಾಡ್ನ ಮಾಲ್ವಾನಿ ಪ್ರದೇಶದಲ್ಲಿ ಈ ಘಟನೆಯಿಂದಾಗಿ, ಹತ್ತಿರದ ಇತರ ಎರಡು ವಸತಿ ಕಟ್ಟಡಗಳು ಸಹ ಹಾನಿಗೀಡಾಗಿವೆ, ಅವು ಈಗ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.
ಹವಾಮಾನ ಇಲಾಖೆ ಧಾರಾಕಾರ ಮಳೆಯಾಗುವ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಸೆಪ್ಟೆಂಬರ್ 23 ರಂದು ಬಿಎಂಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.
ಮುಂಬೈ ಭಾರೀ ಮಳೆಯಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿ ತೀವ್ರ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಮುಂಬೈ ನಗರದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಇಡೀ ನಗರವೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.