ನಮ್ಮ ಪಕ್ಷ ಬಿಜೆಪಿಯ 'ಬಿ ಟೀಂ' ಅಲ್ಲ, ತಮಿಳುನಾಡಿನ 'ಎ ಟೀಂ': ಕಮಲ್ ಹಾಸನ್

ಪಕ್ಷದ ಏಳಿಗೆ ಸಹಿಸಲಾರದೆ ನಮ್ಮ ಪಕ್ಷವನ್ನು ಗುರಿಮಾಡಲಾಗುತ್ತಿದೆ ಎಂದು ಕಮಲ್ ಹಾಸನ್ ಗುಡುಗಿದ್ದಾರೆ.

Last Updated : Feb 25, 2019, 09:55 AM IST
ನಮ್ಮ ಪಕ್ಷ ಬಿಜೆಪಿಯ 'ಬಿ ಟೀಂ' ಅಲ್ಲ, ತಮಿಳುನಾಡಿನ 'ಎ ಟೀಂ': ಕಮಲ್ ಹಾಸನ್ title=

ತಮಿಳುನಾಡು: ನಮ್ಮ ಪಕ್ಷ ಬಿಜೆಪಿಯ 'ಬಿ ಟೀಂ' ಅಲ್ಲ ಬದಲಿಗೆ ತಮಿಳುನಾಡಿನ 'ಎ ಟೀಂ' ಎಂದು ಖ್ಯಾತ ನಟ ಮತ್ತು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ.

ಭಾನುವಾರ ತಿರುನಲ್ವೇಲಿಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ನಮ್ಮ ಪಕ್ಷದ ಏಳಿಗೆ ಸಹಿಸಲಾರದೆ ಕೆಲವರು ಉದ್ದೇಶ ಪೂರ್ವಕವಾಗಿ ನಮ್ಮ ಪಕ್ಷವನ್ನು ಗುರಿಮಾಡುತ್ತಿದ್ದಾರೆ ಎಂದಿದ್ದಾರೆ.

'ಮಕ್ಕಳ್ ನೀಧಿ ಮಯ್ಯಂ' ತಮಿಳುನಾಡಿನ ಎ ಟೀಂ:
ತಡರಾತ್ರಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಯಾವುದೇ ಸಂಘಟನೆಯ ಹೆಸರನ್ನೂ ತೆಗೆದುಕೊಳ್ಳದೆ, ನಮ್ಮ ಪಕ್ಷದ ಏಳಿಗೆ ಸಹಿಸಲಾರದೆ ಕೆಲವರು ಉದ್ದೇಶ ಪೂರ್ವಕವಾಗಿ ನಮ್ಮ ಪಕ್ಷವನ್ನು ಗುರಿಮಾಡುತ್ತಿದ್ದಾರೆ. ತಮ್ಮ ಪಕ್ಷ ಬಿಜೆಪಿಯ 'ಬಿ ಟೀಂ' ಎಂದು ಆರೋಪಿಸಲಾಗುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ನಮ್ಮ ಪಕ್ಷದ ಯಾರ 'ಬಿ ಟೀಂ' ಅಲ್ಲ, 'ಮಕ್ಕಳ್ ನೀಧಿ ಮಯ್ಯಂ' ತಮಿಳುನಾಡಿನ ಎ ಟೀಂ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಸ್ಪರ್ಧೆ:
ನಮ್ಮ 'ಮಕ್ಕಳ್ ನೀಧಿ ಮಯ್ಯಂ' ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಸ್ಥಾನಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕಮಲ್ ಘೋಷಿಸಿದ್ದಾರೆ. ಈ ಮೂಲಕ ಯಾವುದೇ ಪಕ್ಷದ ಮೂಲಕ ಮೈತ್ರಿ ಮಾಡಿಕೊಳ್ಳುವ ಬಗೆಗಿನ ಊಹಾಪೋಹಕ್ಕೆ ಅವರು ತೆರೆಎಳೆದಿದ್ದಾರೆ. ಲೋಕಸಭೆ ಚುನಾವಣೆ ಹೋರಾಟವನ್ನು ವಿವರಿಸುತ್ತಾ, "ನಾವು ಜನರಿಗೆ ಸೇವೆ ಸಲ್ಲಿಸುವ ಸ್ಪಷ್ಟ ಉದ್ದೇಶದಿಂದ ಪ್ರಯತ್ನಿಸುತ್ತಿದ್ದೇವೆ, ಯಾವುದೇ ದ್ರಾವಿಡ ಪಕ್ಷದೊಂದಿಗೆ ಯಾವುದೇ ಮೈತ್ರಿ ಇಲ್ಲದೆಯೇ ಸ್ವಚ್ಛವಾದ ಚಿತ್ರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.
 

Trending News