ಭಾರತದ 'ತಾಪ' ನಗರಗಳಲ್ಲಿ ಈ ನಗರಕ್ಕೆ ನಂಬರ್ 1 ಪಟ್ಟ ....!

ಬೇಸಿಗೆ ಈಗ ಕಾವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈಗ  ಭಾರತದ ಈಗ ನಗರ ಅತಿ ಹೆಚ್ಚಿನ ತಾಪಮಾನ ಹೊಂದಿರುವ ನಗರದಲ್ಲಿ  ನಂಬರ್ 1 ಸ್ಥಾನವನ್ನು ಪಡೆದಿದೆ.ಅಷ್ಟಕ್ಕೂ ಈಗ ನಗರ ಮರಳುಗಾಡಿನ ರಾಜಸ್ತಾನದಲ್ಲೇನೂ ಇಲ್ಲ, ಹಾಗಾದರೆ ಯಾವುದು ಈ ನಗರ ಅಂತೀರಾ? ಅದ್ಯಾವುದು ಅಲ್ಲ, ಅದುವೇ ಮಹಾರಾಷ್ಟ್ರದ ನಾಗಪುರ್ ! ಹೌದು ಈಗ ಈ ನಗರ 44.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ತಾಪಮಾನವನ್ನು ಹೊಂದಿರುವ ನಗರ ಎನ್ನುವ  ಖ್ಯಾತಿಯನ್ನು ಪಡೆದಿದೆ.

Last Updated : Apr 10, 2019, 03:36 PM IST
ಭಾರತದ 'ತಾಪ' ನಗರಗಳಲ್ಲಿ ಈ ನಗರಕ್ಕೆ ನಂಬರ್ 1 ಪಟ್ಟ ....! title=
Representational Image

ನವದೆಹಲಿ: ಬೇಸಿಗೆ ಈಗ ಕಾವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈಗ  ಭಾರತದ ಈಗ ನಗರ ಅತಿ ಹೆಚ್ಚಿನ ತಾಪಮಾನ ಹೊಂದಿರುವ ನಗರದಲ್ಲಿ  ನಂಬರ್ 1 ಸ್ಥಾನವನ್ನು ಪಡೆದಿದೆ.ಅಷ್ಟಕ್ಕೂ ಈಗ ನಗರ ಮರಳುಗಾಡಿನ ರಾಜಸ್ತಾನದಲ್ಲೇನೂ ಇಲ್ಲ, ಹಾಗಾದರೆ ಯಾವುದು ಈ ನಗರ ಅಂತೀರಾ? ಅದ್ಯಾವುದು ಅಲ್ಲ, ಅದುವೇ ಮಹಾರಾಷ್ಟ್ರದ ನಾಗಪುರ್ ! ಹೌದು ಈಗ ಈ ನಗರ 44.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ತಾಪಮಾನವನ್ನು ಹೊಂದಿರುವ ನಗರ ಎನ್ನುವ  ಖ್ಯಾತಿಯನ್ನು ಪಡೆದಿದೆ.

ಇದರ ಎರಡನೇ ಸ್ಥಾನವನ್ನು ಉತ್ತರ ಪ್ರದೇಶದ ಬಂದಾ 43.8 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ. ನಂತರದ ಸ್ಥಾನಗಳನ್ನು ಮಧ್ಯಪ್ರದೇಶದ ಖಾರ್ಗೋನ್ (43.5 ಡಿಗ್ರಿ ಸೆಲ್ಸಿಯಸ್), ತೆಲಂಗಾಣದ ಅದಿಲಾಬಾದ್ (43.3 ° ಸಿ) ವಾರ್ಧಾ (43.2 ಡಿಗ್ರಿ ಸೆಲ್ಸಿಯಸ್) ಮತ್ತು ಮಹಾರಾಷ್ಟ್ರದ ಅಕೋಲಾ (43.1 ಡಿಗ್ರಿ ಸೆಲ್ಸಿಯಸ್) ತಾಪಮಾನವನ್ನು ಹೊಂದಿದೆ. ಇನ್ನು ಮಹಾರಾಷ್ಟ್ರದ ಬರ್ಹ್ಮಾಪುರಿ, ಕರ್ನಾಟಕದ ಕಲಬುರ್ಗಿ, ಮಧ್ಯಪ್ರದೇಶದ ಖಾಜುರಾವೋ ಹಾಗೂ ರಾಜಸ್ತಾನದ ಫಲೋಡಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿವೆ.

ಈಗ ದೇಶದ ಟಾಪ್ ಶಾಖ ನಗರಿಗಳ ಪಟ್ಟಿಯನ್ನು ಸ್ಕೆಯ್ ಮೆಟ್ ವೆದರ್ ಎನ್ನುವ ಸಂಸ್ಥೆ ಬಿಡುಗಡೆ ಮಾಡಿದೆ.ಅಚ್ಚರಿಎಂದರೆ ದೆಹಲಿ ಟಾಪ್ 10 ಪಟ್ಟಿಯಲ್ಲಿ ಇಲ್ಲದೆ ಇರುವುದು.

Trending News