ಭಾರತದಾದ್ಯಂತ ಪಠ್ಯಕ್ರಮದಲ್ಲಿ ತಮಿಳನ್ನು ಐಚ್ಛಿಕ ಭಾಷೆಯಾಗಿ ಕಲಿಸಿ -ಪ್ರಧಾನಿಗೆ ತಮಿಳು ಸಿಎಂ ಮನವಿ

 ಹಿಂದಿಯನ್ನು ಈಗ ತ್ರಿಭಾಷಾ ಸೂತ್ರದ ಕಲಿಕೆಯಲ್ಲಿ ಕಡ್ಡಾಯಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದಕ್ಷಿಣ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಡಪಾದಿ ಕೆ ಪಳನಿಸ್ವಾಮಿ ಬುಧವಾರದಂದು ಭಾರತದಾದ್ಯಂತ ಪಠ್ಯಕ್ರಮದಲ್ಲಿ ತಮಿಳನ್ನು ಐಚ್ಛಿಕ ಭಾಷೆಯಾಗಿ ಸೇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

Last Updated : Jun 5, 2019, 05:43 PM IST
 ಭಾರತದಾದ್ಯಂತ ಪಠ್ಯಕ್ರಮದಲ್ಲಿ ತಮಿಳನ್ನು ಐಚ್ಛಿಕ ಭಾಷೆಯಾಗಿ ಕಲಿಸಿ -ಪ್ರಧಾನಿಗೆ ತಮಿಳು ಸಿಎಂ ಮನವಿ  title=
file photo

ನವದೆಹಲಿ:  ಹಿಂದಿಯನ್ನು ಈಗ ತ್ರಿಭಾಷಾ ಸೂತ್ರದ ಕಲಿಕೆಯಲ್ಲಿ ಕಡ್ಡಾಯಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದಕ್ಷಿಣ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಡಪಾದಿ ಕೆ ಪಳನಿಸ್ವಾಮಿ ಬುಧವಾರದಂದು ಭಾರತದಾದ್ಯಂತ ಪಠ್ಯಕ್ರಮದಲ್ಲಿ ತಮಿಳನ್ನು ಐಚ್ಛಿಕ ಭಾಷೆಯಾಗಿ ಸೇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

"ಇತರ ರಾಜ್ಯಗಳಲ್ಲಿ ಅಧ್ಯಯನ ಮಾಡಲು ತಮಿಳನ್ನು ಐಚ್ಛಿಕ ಭಾಷೆಯಾಗಿ ಸೇರಿಸಿಕೊಳ್ಳಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿನಂತಿಸಿಕೊಳ್ಳುತ್ತೇನೆ, ಆ ಮೂಲಕ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಈ ಭಾಷೆಗೆ ಸೇವೆ ಮಾಡಿದ ಹಾಗೆ ಆಗುತ್ತದೆ" "ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹೊಸ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಷ್ಕರಿಸಲು ಕೇಂದ್ರದ ಮೇಲೆ ಒತ್ತಡ ಬಂದಿರುವ ಹಿನ್ನಲೆಯಲ್ಲಿ ಈಗ ಸಿಎಂ ಟ್ವೀಟ್ ಮಾಡಿದ್ದಾರೆ.ಈ ಕರುಡಿನಲ್ಲಿ ಇದು ಹಿಂದಿಯೇತರ ರಾಜ್ಯಗಳಲ್ಲಿ ಇಂಗ್ಲಿಶ್ ಜೊತೆಗೆ ಹಿಂದಿಯನ್ನು ಸಹಿತ ಕಡ್ಡಾಯವಾಗಿ ಸೇರಿರುವ ಪ್ರಸ್ತಾವವನ್ನು ಉಲ್ಲೇಖಿಸಿದೆ.ಈ ನೀತಿಗೆ ಕರ್ನಾಟಕ ಸೇರಿ ದಕ್ಷಿಣದ ಎಲ್ಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಇನ್ನೊಂದೆಡೆಗೆ ತಮಿಳುನಾಡಿನಲ್ಲಿ ಪಕ್ಷಾತೀತವಾಗಿ ಹಿಂದಿ ಹೇರಿಕೆ ವಿಚಾರವಾಗಿ ಖಂಡನೆ ವ್ಯಕ್ತವಾಗಿದೆ.

Trending News