ಈ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಕೂದಲು ಉದುರುವುದಕ್ಕೆ ಬೀಳುವುದು ಫುಲ್ ಸ್ಟಾಪ್ ! ಉದ್ದ, ಗಾಢ, ಕಡು ಕಪ್ಪು ಕೂದಲಿಗೆ ಇದೇ ಟಾನಿಕ್ !

Foods for strong and healthy hair:ಸರಿಯಾದ ರೀತಿಯ ಆಹಾರವನ್ನು ಸೇವಿಸಿದರೆ, ಕೂದಲಿಗೆ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ ಕೂದಲಿನ ಒಳಭಾಗ ಮತ್ತು ಹೊರಗಿನ ಆರೋಗ್ಯವನ್ನು ಸುಧಾರಿಸುತ್ತದೆ.  

Written by - Ranjitha R K | Last Updated : Oct 2, 2024, 03:46 PM IST
  • ನಾವು ಸೇವಿಸುವ ಆಹಾರದ ಬಗ್ಗೆಯೂ ಕಾಳಜಿ ವಹಿಸಬೇಕು.
  • ಕೂದಲಿಗೆ ಇದುವೇ ಬೆಸ್ಟ್ ಆಹಾರ
  • ಕೂದಲಿಗೆ ನೀಡುತ್ತದೆ ಉತ್ತಮ ಪೋಷಣೆ
ಈ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಕೂದಲು ಉದುರುವುದಕ್ಕೆ ಬೀಳುವುದು ಫುಲ್ ಸ್ಟಾಪ್ ! ಉದ್ದ, ಗಾಢ, ಕಡು ಕಪ್ಪು ಕೂದಲಿಗೆ ಇದೇ ಟಾನಿಕ್ ! title=

Foods for strong and healthy hair : ಕೂದಲನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು,ನಾವು ಸೇವಿಸುವ ಆಹಾರದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವು ಪೋಷಕಾಂಶಗಳ ಕೊರತೆಯು ಕೂದಲು ಉದುರುವಿಕೆ,ಕೂದಲು ತೆಳುವಾಗುವುದು, ಕೂದಲು ದುರ್ಬಲಗೊಳ್ಳುವುದು ಮತ್ತು ಒಡೆಯುವಿಕೆಯಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.ಸರಿಯಾದ ರೀತಿಯ ಆಹಾರವನ್ನು ಸೇವಿಸಿದರೆ, ಕೂದಲಿಗೆ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ ಕೂದಲಿನ ಒಳಭಾಗ ಮತ್ತು ಹೊರಗಿನ ಆರೋಗ್ಯವನ್ನು ಸುಧಾರಿಸುತ್ತದೆ.

ಶುಂಠಿ : 
ಜಿಂಜರಾಲ್‌ನಲ್ಲಿ ಸಮೃದ್ಧವಾಗಿರುವ ಶುಂಠಿಯನ್ನು ಸೇವಿಸುವುದು ಕೂದಲಿಗೆ ತುಂಬಾ ಪ್ರಯೋಜನಕಾರಿ. ಶುಂಠಿ ತಿನ್ನುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. 

ಇದನ್ನೂ ಓದಿ : ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ

ಹಸಿರು ಎಲೆಗಳ ತರಕಾರಿಗಳು : 
ಹಸಿರು ಎಲೆ ತರಕಾರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು,ಫೋಲೇಟ್ ಮತ್ತು ವಿಟಮಿನ್ ಸಿ ಯಂತಹ ಅಂಶಗಳು ಕಂಡುಬರುತ್ತವೆ.ಎಲೆಕೋಸು, ಪಾಲಕ್,ಬೇಬಿ ಪಾಲಕ್ ಮತ್ತು ಕೆಂಪು ಹರಿವೆ ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಇದು ನಿಮ್ಮ ಕೂದಲಿಗೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಅಗಸೆಬೀಜಗಳು : 
ಒಮೆಗಾಸ್, ವಿಟಮಿನ್ ಇ ಮತ್ತು ಇತರ ರೀತಿಯ ಆರೋಗ್ಯಕರ ಕೊಬ್ಬುಗಳು ಅಗಸೆ ಬೀಜಗಳಲ್ಲಿ ಕಂಡುಬರುತ್ತವೆ.ಇವು ಕೂದಲಿನ ರಚನೆಯನ್ನು ಸುಧಾರಿಸುತ್ತದೆ. ಇದರೊಂದಿಗೆ,ಕೂದಲಿನ ಶಕ್ತಿ ಮತ್ತು ಹೊಳಪು ಹೆಚ್ಚಾಗುತ್ತದೆ.

ಕುಂಬಳಕಾಯಿ ಬೀಜಗಳು :
ಒಮೆಗಾ ಕೊಬ್ಬಿನಾಮ್ಲಗಳು ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುತ್ತವೆ.ಇದಲ್ಲದೆ, ಅವುಗಳಲ್ಲಿ ಸತುವಿನ್ ಪ್ರಮಾಣ ಕೂಡಾ ಅಧಿಕವಾಗಿದೆ. ಕುಂಬಳಕಾಯಿಯನ್ನು ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಇದನ್ನೂ ಓದಿ : ಬಿಸಿ ನೀರಿಗೆ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಪಥ್ಯ ಮಾತ್ರೆ ಎಲ್ಲವನ್ನೂ ಪಕ್ಕಕ್ಕಿಡಿ

ಬಾದಾಮಿ :
ವಿಟಮಿನ್ ಇ ಕೂದಲಿನ ಆರೋಗ್ಯಕ್ಕೆ ಅತ್ಯ್ನತ ಅಗತ್ಯವಾಗಿರುವ ಅಂಶವಾಗಿದೆ. ಬಾದಾಮಿಯು ವಿಟಮಿನ್ ಇ ಯ ಉತ್ತಮ ಮೂಲವಾಗಿದ್ದು, ಇದನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಕೂದಲಿಗೆ ಹೊಸ ಹೊಳಪು ಸಿಗುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News