ಜಗ್ಗೇಶ್ ಜೊತೆ ಅರ್ಜುನ; ತಾತನೊಂದಿಗೆ ಮೊಮ್ಮಗನ ಜುಗಲಬಂಧಿ!

ಜಗ್ಗೇಶ್ ಅವರ ಮೊಮ್ಮಗ ತಾತನ ಬಳಿ ಬಂದು ಏನ್ ಕೇಳ್ತಾನಂತೆ ಗೊತ್ತಾ?  

Last Updated : Apr 1, 2019, 12:58 PM IST
ಜಗ್ಗೇಶ್ ಜೊತೆ ಅರ್ಜುನ; ತಾತನೊಂದಿಗೆ ಮೊಮ್ಮಗನ ಜುಗಲಬಂಧಿ!  title=
Pic: Instagram@actor_jaggesh

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಮಕ್ಕಳು ಅಜ್ಜ-ಅಜ್ಜಿಯ ಜೊತೆಗಿರುವುದಿರಲಿ ಅಪ್ಪ-ಅಮ್ಮನ ಜೊತೆಗೆ ಸಮಯ ಕಳಿಯುವುದೇ ಅತಿ ವಿರಳ. ಕೆಲಸ ಮುಗಿಸಿ ಮನೆಗೆ ಬಂದ ಮೇಲೂ ಅಥವಾ ಮನೆಯಲ್ಲೇ ಇದ್ದರೂ ದೊಡ್ಡವರಾಗಲಿ, ಚಿಕ್ಕವರಾಗಲಿ ಸ್ಮಾರ್ಟ್ ಫೋನ್, ಕಂಪ್ಯೂಟರ್, ವಿಡಿಯೋ ಗೇಮ್, ಟಿವಿ ಹೀಗೆ ತಮ್ಮದೇ ಜಗತ್ತಿನಲ್ಲಿರುತ್ತಾರೆ.

ಹಿಂದೆ ಅಜ್ಜಿ ಕಥೆ ಹೇಳಿ, ಹಾಡು ಹೇಳಿ ಮಕ್ಕಳನ್ನು ಮಲಗಿಸುತ್ತಿದ್ದರು. ಆದರೆ ಈಗ ಮೊಬೈಲ್ ಒಂದಿದ್ದರೆ ಸಾಕು ಹಾಡು, ಕಥೆ, ಆಟ ಎಲ್ಲವೂ ಅದರಲ್ಲೇ...

ಏತನ್ಮಧ್ಯೆ, ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ, ತಾತನ ಜೊತೆ ಮೊಮ್ಮಗನ ಸಂಗತಿಗಳ ಆರೋಹಣ ಅವರೋಹಣ ಜುಗಲಬಂಧಿ! ಎಂದು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

ಸಿನಿಮಾ, ರಾಜಕೀಯ, ರಿಯಾಲಿಟಿ ಶೋಗಳು ಹೀಗೆ ಸದಾ ಬ್ಯುಸಿಯಾಗಿರುವ ನವರಸ ನಾಯಕ ತಾತನ ಕರ್ತವ್ಯವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ ಈ ವಿಡಿಯೋ.

 
 
 
 

 
 
 
 
 
 
 
 
 

ತಾತನ ಜೊತೆ ಮೊಮ್ಮಗನ ಸಂಗತಿಗಳ ಆರೋಹಣ ಅವರೋಹಣ ಜುಗಲಬಂಧಿ! 3.5ವರ್ಷದ ಅರ್ಜುನನಿಗೆ ನನ್ನ ತಾತನಂತೆ ನನ್ನಂತೆ ಅವನಲ್ಲಿಯು ಕಲೆಯ ಆಸಕ್ತಿ ಬಹಳವಿದೆ!ಅವನು ನನ್ನ ಬಳಿ ಬಂದರೆ ಸಾಕು ಜಗ್ಗಿತಾತ ಬನ್ನಿ ನಾವಿಬ್ಬರು ಮಹಡಿಯ ನಿಮ್ಮ ಜಾಗಕ್ಕೆ ಹೋಗಿ music ಕಲಿಯುವ ಎನ್ನುತ್ತಾನೆ! History repeats ನಾನು ತಾತನ ಜೊತೆ ಹೇಗೆ ಸಮಯಕಳೆದು ಸಂತೋಷಪಡುತ್ತಿದ್ದೆನೋ ಅರ್ಜುನ ಕೂಡ ಹಾಗೆ ನನ್ನಜೊತೆ ಇರಲು ಇಷ್ಟಪಡುತ್ತಾನೆ! ಪ್ರಪಂಚದ ನಿಯಮವಿಷ್ಟೆ ನಾವು ಹಿರಿಯರ ಜೊತೆ ಹೇಗಿರುತ್ತೇವೆ ನಮ್ಮ ಮುಂದಿನ ಪೀಳಿಗೆ ನಮ್ಮ ಜೊತೆ ಹಾಗಿರುತ್ತಾರೆ! ಹಾಗಾಗಿ ಯುವಮಿತ್ರರೆ ಸಾಧ್ಯವಾದಷ್ಟು ನಿಮ್ಮ ಹಿರಿಯರ ಸಂಗಡ ಬೆರೆತು ಹರ್ಷಿಸಿ ಬೆಳೆಯಿರಿ ಮುಂದೆ ನೀವು ಹಿರಿಯರಾದಾಗ ಹೇಳಲು ಕಥೆಯಿರುತ್ತದೆ!ಹೇಳಿಕೊಳ್ಳಲು ಕಥೆ ನೆನಪು ಇಲ್ಲದ ಜೀವನ ವ್ಯೆರ್ಥ! ಕೂಡಿಬಾಳಿದರೆ ಸ್ವರ್ಗ ಸುಖ...

A post shared by Jaggesh Shivalingappa (@actor_jaggesh) on

ಯಾರಿಗೆ ಆಗಲಿ ತಮ್ಮ ಚಿಕ್ಕ ವಯಸ್ಸಿನ ಸವಿ ನೆನಪು ಸದಾ ಹಸಿರು. ತಮ್ಮ ಮೂರೂವರೆ ವರ್ಷದ ಮೊಮ್ಮಗ ಅರ್ಜುನನ ಬಗ್ಗೆ ಜಗ್ಗೇಶ್ ಸಾಲುಗಳಿವು...

3.5 ವರ್ಷದ ಅರ್ಜುನನಿಗೆ ನನ್ನ ತಾತನಂತೆ ನನ್ನಂತೆ ಅವನಲ್ಲಿಯು ಕಲೆಯ ಆಸಕ್ತಿ ಬಹಳವಿದೆ! ಅವನು ನನ್ನ ಬಳಿ ಬಂದರೆ ಸಾಕು ಜಗ್ಗಿತಾತ ಬನ್ನಿ ನಾವಿಬ್ಬರು ಮಹಡಿಯ ನಿಮ್ಮ ಜಾಗಕ್ಕೆ ಹೋಗಿ music ಕಲಿಯುವ ಎನ್ನುತ್ತಾನೆ! 

History repeats ನಾನು ತಾತನ ಜೊತೆ ಹೇಗೆ ಸಮಯಕಳೆದು ಸಂತೋಷಪಡುತ್ತಿದ್ದೆನೋ ಅರ್ಜುನ ಕೂಡ ಹಾಗೆ ನನ್ನಜೊತೆ ಇರಲು ಇಷ್ಟಪಡುತ್ತಾನೆ!

ಪ್ರಪಂಚದ ನಿಯಮವಿಷ್ಟೆ ನಾವು ಹಿರಿಯರ ಜೊತೆ ಹೇಗಿರುತ್ತೇವೆ ನಮ್ಮ ಮುಂದಿನ ಪೀಳಿಗೆ ನಮ್ಮ ಜೊತೆ ಹಾಗಿರುತ್ತಾರೆ! ಹಾಗಾಗಿ ಯುವಮಿತ್ರರೆ ಸಾಧ್ಯವಾದಷ್ಟು ನಿಮ್ಮ ಹಿರಿಯರ ಸಂಗಡ ಬೆರೆತು ಹರ್ಷಿಸಿ 
ಬೆಳೆಯಿರಿ ಮುಂದೆ ನೀವು ಹಿರಿಯರಾದಾಗ ಹೇಳಲು ಕಥೆಯಿರುತ್ತದೆ! ಹೇಳಿಕೊಳ್ಳಲು ಕಥೆ ನೆನಪು ಇಲ್ಲದ ಜೀವನ ವ್ಯರ್ಥ!
ಕೂಡಿಬಾಳಿದರೆ ಸ್ವರ್ಗ ಸುಖ... ಎಂಬ ಸಂದೇಶವನ್ನು ರವಾನಿಸಿದ್ದಾರೆ.
 

Trending News