ನೂತನ ಕ್ಯಾಬಿನೆಟ್ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಒಡಿಶಾ ಸರ್ಕಾರ, ಯಾರಿಗೆ ಯಾವ ಖಾತೆ!

ಒಡಿಶಾದ ರಾಜ್ಯಪಾಲ ಪ್ರೊಫೆಸರ್ ಗನ್ಶಿ ಲಾಲ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪ್ರಮಾಣ ವಚನ ನೀಡಿದರು.

Updated: May 29, 2019 , 05:57 PM IST
ನೂತನ ಕ್ಯಾಬಿನೆಟ್ ಸಚಿವರ ಪಟ್ಟಿ ಬಿಡುಗಡೆ ಮಾಡಿದ ಒಡಿಶಾ ಸರ್ಕಾರ, ಯಾರಿಗೆ ಯಾವ ಖಾತೆ!

ಭುವನೇಶ್ವರ್: ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಬುಧವಾರ ಐದನೇ ಬಾರಿಗೆ ಒಡಿಶಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಶಪಥ-ಸಮಾರಂಭವು ಭುವನೇಶ್ವರದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ನಡೆಯಿತು. ಒಡಿಶಾದ ರಾಜ್ಯಪಾಲ ಪ್ರೊಫೆಸರ್ ಗನ್ಶಿ ಲಾಲ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪ್ರಮಾಣ ವಚನ ನೀಡಿದರು.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಬಿಜೆಡಿಯ ಹಲವು ನಾಯಕರೂ ಕೂಡ ಪ್ರಮಾಣವಚನ ಸ್ವೀಕರಿಸಿದರು. ಇದೇ ಮೊದಲ ಬಾರಿಗೆ ನವೀನ್ ಪಟ್ನಾಯಕ್ ಮತ್ತು ಅವರ ಸಚಿವ ಸಂಪುಟವು ರಾಜ ಭವನದ ಹೊರಗಡೆ ವಸ್ತುಪ್ರದರ್ಶನ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿತು. ನವೀನ್ ಪಟ್ನಾಯಕ್ ಅವರು 11 ಕ್ಯಾಬಿನೆಟ್ ಮಂತ್ರಿಗಳನ್ನು ಮತ್ತು 9 ರಾಜ್ಯ ಸಚಿವರನ್ನು ನೇಮಕ ಮಾಡಿದ್ದಾರೆ.  ನವೀನ್ ಪಟ್ನಾಯಕ್ ಹೊಸ ಕ್ಯಾಬಿನೆಟ್ 10 ಹೊಸ ಮುಖಗಳನ್ನು ಪಡೆದಿದೆ.

ಹೊಸದಾಗಿ ನೇಮಕಗೊಂಡ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿಯನ್ನು ಒಡಿಶಾ ಸರಕಾರ ಬಿಡುಗಡೆ ಮಾಡಿದೆ.