ನವದೆಹಲಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ನೇಮಕವಾದ ನಂತರ ಮೊದಲ ಬಾರಿಗೆ ಶಾಂತಿ ಸಂಧಾನದ ಪ್ರಯತ್ನವಾಗಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಜೊತೆಗಿನ ಟೀ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Navjot Singh Sidhu: 62 ಶಾಸಕರ ಬೆಂಬಲ ತೋರಿಸಿದ ನವಜೋತ್ ಸಿಂಗ್ ಸಿಧು
ಪಕ್ಷದ ಎಲ್ಲಾ ಶಾಸಕರನ್ನು ಹಾಗೂ ಮುಖಂಡರನ್ನು ಟೀ ಪಾರ್ಟಿಗಾಗಿ ಆಹ್ವಾನಿಸಲಾಗಿದೆ.ಈ ಟೀ ಪಾರ್ಟಿ ಪಂಜಾಬ್ ಭವನದಲ್ಲಿ ನಡೆಯಲಿದೆ ಎನ್ನಲಾಗಿದೆ."ನನಗೆ ಯಾವುದೇ ವೈಯಕ್ತಿಕ ಕಾರ್ಯಸೂಚಿ ಇಲ್ಲ,ಜನರ ಪರವಾದ ಕಾರ್ಯಸೂಚಿ ಮಾತ್ರ ಇದೆ. ಹೀಗಾಗಿ, ನಮ್ಮ ಪಂಜಾಬ್ ಕಾಂಗ್ರೆಸ್ ಕುಟುಂಬದ ಹಿರಿಯರಾಗಿ, ದಯವಿಟ್ಟು ಬಂದು ಹೊಸ ಪ್ರದೇಶ ಕಾಂಗ್ರೆಸ್ ತಂಡವನ್ನು ಆಶೀರ್ವದಿಸಬೇಕೆಂದು ನಾನು ವಿನಂತಿಸುತ್ತೇನೆ" ಎಂದು ಸಿಧು (Navjot Singh Sidhu) ಹೇಳಿದ್ದಾರೆ.
Punjab CM @capt_amarinder has invited all @INCPunjab MLAs, MPs and senior party functionaries at Punjab Bhawan for tea at 10 am on Friday. They will all then go to Punjab Congress Bhawan together from there for the installation of the new PPCC team. pic.twitter.com/fdm2XXprlP
— Raveen Thukral (@RT_MediaAdvPBCM) July 22, 2021
ಮಧ್ಯಾಹ್ನ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್, "ಪಂಜಾಬ್ ಸಿಎಂ ಪಂಜಾಬ್ ಭವನದಲ್ಲಿ ಎಲ್ಲಾ ಶಾಸಕರು, ಸಂಸದರು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಹಾಕ್ಕಾಗಿ ಆಹ್ವಾನಿಸಿದ್ದಾರೆ.ನಂತರ ಅವರೆಲ್ಲರೂ ಒಟ್ಟಾಗಿ ಪಂಜಾಬ್ ಕಾಂಗ್ರೆಸ್ ಭವನಕ್ಕೆ ಹೋಗುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಅಮರಿಂದರ್ ಜೊತೆಗಿನ ಸಂಘರ್ಷದ ನಡುವೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಸಿಧು ನೇಮಕ
ಸಿಎಂ ಅಮರಿಂದರ್ ಸಿಧುಗೆ ಅವಹೇಳನಕಾರಿ ಟ್ವೀಟ್ಗಳಿಗಾಗಿ ಕ್ಷಮೆಯಾಚಿಸಬೇಕೆಂದು ಕೋರಿದ್ದರು, ಆದರೆ ಸಿಧು ಇನ್ನೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿಲ್ಲ ಎನ್ನಲಾಗಿದೆ.ಆದರೆ ಮೂಲಗಳು ಹೇಳುವಂತೆ ಇಬ್ಬರು ನಾಯಕರ ನಡುವೆ ಸ್ವಲ್ಪ ಹೊಂದಾಣಿಕೆ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ