ಪಿಂಚಣಿದಾರರ ಗಮನಕ್ಕೆ: ಕರೆ ಮಾಡಿ... 72 ಗಂಟೆಯಲ್ಲಿ ಪೆನ್ಶನ್‌ ಪಡೆಯಿರಿ

ಕುಟುಂಬದ ವಾರ್ಷಿಕ ಆದಾಯ 32 ಸಾವಿರಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ಅವಿವಾಹಿತ ಅಥವಾ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಕರೆ ಮೂಲಕ ತಮ್ಮ ಆಧಾರ್‌ ಸಂಖ್ಯೆಯನ್ನು ಒದಗಿಸಿ ಮನವಿ ಸಲ್ಲಿಸಬಹುದು. 

Written by - Bhavishya Shetty | Last Updated : Apr 30, 2022, 02:41 PM IST
  • ಕಂದಾಯ ಇಲಾಖೆ ನೂತನ ಆಪ್‌ ಮೂಲಕ ಪಿಂಚಣಿ ವ್ಯವಸ್ಥೆ
  • 72 ಗಂಟೆಯಲ್ಲಿ ನಿಮ್ಮ ಪಿಂಚಣಿ ಮನೆ ಬಾಗಿಲಿಗೆ ಬರಲಿದೆ
  • ದೇಶದಲ್ಲೇ ಅನುಷ್ಠಾನಕ್ಕೆ ಬರುತ್ತಿರುವ ಮೊದಲ ಯೋಜನೆ
ಪಿಂಚಣಿದಾರರ ಗಮನಕ್ಕೆ: ಕರೆ ಮಾಡಿ... 72 ಗಂಟೆಯಲ್ಲಿ ಪೆನ್ಶನ್‌ ಪಡೆಯಿರಿ title=
Pension

ಪಿಂಚಣಿ ಪಡೆಯಲು ದಿನಗಟ್ಟಲೆ ಅಲೆಯಬೇಕಾದ ಪರಿಸ್ಥಿತಿಗೆ ಇನ್ನು ಮುಂದೆ ಫುಲ್‌ಸ್ಟಾಪ್‌ ಬೀಳಲಿದೆ. ಕಂದಾಯ ಇಲಾಖೆ ನೂತನ ಆಪ್‌ ಒಂದನ್ನು ಸಿದ್ಧಪಡಿಸಿದ್ದು, ಈ ಮೂಲಕ ಸಹಾಯವಾಣಿ ಕೇಂದ್ರ ತೆರೆಯಲಿದೆ. ಈ ಆಪ್‌ ಮೂಲಕ ಕರೆ ಮಾಡಿದ 72 ಗಂಟೆಯಲ್ಲಿ ನಿಮ್ಮ ಪಿಂಚಣಿ ಮನೆ ಬಾಗಿಲಿಗೆ ಬರಲಿದೆ. 

ಇದನ್ನು ಓದಿ: Tips For Marriage: ನಿಮ್ಮ ಮದುವೆಗೂ ವಿಳಂಬವಾಗುತ್ತಿದೆಯಾ? ಇಲ್ಲಿವೆ ಅದರ ಹಿಂದಿನ ಕಾರಣ

ಪ್ರಕ್ರಿಯೆ ಹೇಗೆ: 

  • ಕುಟುಂಬದ ವಾರ್ಷಿಕ ಆದಾಯ 32 ಸಾವಿರಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ಅವಿವಾಹಿತ ಅಥವಾ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಕರೆ ಮೂಲಕ ತಮ್ಮ ಆಧಾರ್‌ ಸಂಖ್ಯೆಯನ್ನು ಒದಗಿಸಿ ಮನವಿ ಸಲ್ಲಿಸಬಹುದು. 
  • ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನವೋದಯ ಮೊಬೈಲ್‌ ಆಪ್‌ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸಿಕೊಳ್ಳಲಾಗುತ್ತದೆ. 
  • ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್‌ ಕಾರ್ಡ್‌, ಬ್ಯಾಂಕ್‌ ಅಥವಾ ಅಂಚೆ ಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡತಕ್ಕದ್ದು, 
  • ಅರ್ಹರಿಗೆ 72 ಗಂಟೆಯೊಳಗೆ ನಾಡ ಕಛೇರಿ ಉಪತಹಶೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಲಾಗುತ್ತದೆ.
  • ಆದೇಶದ ಡೌನ್‌ಲೋಡ್‌ ಲಿಂಕ್‌ನ್ನು ಎಸ್‌ಎಂಎಸ್‌ ಮೂಲಕ ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ.  ಆ ಬಳಿಕ ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ಗ್ರಾಮ ಸಹಾಯಕರ ಮೂಲಕ ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಿಸಲಾಗುತ್ತದೆ. 

ಇದನ್ನು ಓದಿ: ʼವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಿಎಂ ತಕ್ಷಣ ಸಂಪುಟದಿಂದ ಕಿತ್ತುಹಾಕಲಿ'

ಇನ್ನು ಮನೆ ಬಾಗಿಲಿಗೆ ಪಿಂಚಣಿ ಯೋಜನೆ ನಂತರ 72 ಗಂಟೆಗಳಲ್ಲಿ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ಬರುತ್ತಿರುವುದು ದೇಶದಲ್ಲಿಯೇ ಮೊದಲು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News