ಕೇರಳ ಹಾಗೂ ಪ.ಬಂಗಾಳದಲ್ಲಿ 9 ಶಂಕಿತ Al-Qaeda ಉಗ್ರರ ಬಂಧನ, NIAಗೆ ಸಿಕ್ಕ ದೊಡ್ಡ ಯಶಸ್ಸು

ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಮುಖ ದಾಳಿಯಲ್ಲಿ 9 ಮಂದಿ ಶಂಕಿತ  ಭಯೋತ್ಪಾದಕರನ್ನು ಕೇಂದ್ರ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಗ್ಗೆ  ಬಂಧಿಸಿದೆ.

Last Updated : Sep 19, 2020, 12:24 PM IST
  • NIA ಅಧಿಕಾರಿಗಳ ದೊಡ್ಡ ಕಾರ್ಯಾಚರಣೆ.
  • ಕೇರಳ ಹಾಗೂ ಪ.ಬಂಗಾಳದಿಂದ 9 ಶಂಕಿತ ಉಗ್ರರ ಬಂಧನ.
  • ಪಾಕ್ ಮೂಲದ ಅಲ್ ಕೈದಾ ಉಗ್ರರ ಜೊತೆಗೆ ನೇರ ಸಂಪರ್ಕ ಹೊಂದಿದ ಆರೋಪ
ಕೇರಳ ಹಾಗೂ ಪ.ಬಂಗಾಳದಲ್ಲಿ 9 ಶಂಕಿತ Al-Qaeda ಉಗ್ರರ ಬಂಧನ, NIAಗೆ ಸಿಕ್ಕ ದೊಡ್ಡ ಯಶಸ್ಸು title=

ನವದೆಹಲಿ: ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಮುಖ ದಾಳಿಯಲ್ಲಿ 9 ಮಂದಿ ಶಂಕಿತ  ಭಯೋತ್ಪಾದಕರನ್ನು ಕೇಂದ್ರ ತನಿಖಾ ಸಂಸ್ಥೆ (NIA) ಇಂದು ಬೆಳಗ್ಗೆ  ಬಂಧಿಸಿದೆ. ಪ್ರಮುಖವಾಗಿ ಕೇರಳದ ಎರ್ನಾಕುಲಂ ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ.

Also Read- ರಾಜ್ಯಕ್ಕೆ ಅಲ್ ಖೈದಾ ಉಗ್ರರ ದಾಳಿ ಭೀತಿ-ವಿಶ್ವಸಂಸ್ಥೆ ವರದಿ

ಈ ಕುರಿತು ಮಾಹಿತಿ ನೀಡಿರುವ NIA ಅಧಿಕಾರಿಗಳು  ಈ ಶಂಕಿತ ಭಯೋತ್ಪಾದಕರು ಅಲ್-ಖೈದಾ ಉಗ್ರ ಸಂಘಟನೆ (Al-Qaeda Terrorist Organization)ಯ ಅನೇಕ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಸಿದ ನಂತರ, ಶೋಧ ಕಾರ್ಯಾಚರಣೆ ನಡೆಸುವ ವೇಳೆ 9 ಜನರನ್ನು ಬಂಧಿಸಲಾಗಿದೆ. ಈ ಉಗ್ರರು ನೇರವಾಗಿ ಪಾಕಿಸ್ತಾನದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

Also Read- ಪುಲ್ವಾಮಾ ದಾಳಿ: 5000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ NIA, ಪಾಕ್ ಕುತಂತ್ರ ಬಹಿರಂಗ

ತನಿಖಾ ಸಂಸ್ಥೆ ಎನ್‌ಐಎ ಹೇಳುವುದನ್ನು ಒಂದು ವೇಳೆ ಪರಿಗಣನೆಗೆ ತೆಗೆದುಕೊಂಡರೆ ಈ ಜನರು ಭಾರತದೊಳಗೆ ಒಂದು ದೊಡ್ಡ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಆದರೆ ಆ ಭಯೋತ್ಪಾದಕರು ತಮ್ಮ ಸಂಚಿನಲ್ಲಿ ಯಶಸ್ವಿಯಾಗುವ ಮೊದಲೇ ಆಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ 6 ಜನರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದ್ದರೆ, ಮೂವರನ್ನು ಕೇರಳದಿಂದ ಬಂಧಿಸಲಾಗಿದೆ.

NIA ಬಂಧಿಸಿರುವ ಶಂಕಿತರ ಹೆಸರು ಇಂತಿವೆ
1. ಮುರ್ಷಿದ್ ಹಸನ್
2. ಯಾಕೂಬ್ ಬಿಸ್ವಾಸ್
3. ಮುಸಾಫ್ ಹುಸೇನ್
4. ನಜ್ಮಸ್ ಶಕೀಬ್
5. ಅಬು ಸುಫಿಯಾನ್
6. ಮನುಲ್ ಮಂಡಲ್
7. ಲೇವು ಅಹ್ಮದ್
8. ಅಲ್ ಮಾಮುನ್ ಕಮಲ್
9. ಅತಿರ್ ರಹಮಾನ್

Trending News