ರಕ್ಷಣಾ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್

ಭಾರತದ ಮೊದಲ ಪೂರ್ಣ ಪ್ರಮಾಣದ ಮಹಿಳಾ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಗುರುವಾರ ಅಧಿಕಾರ ವಹಿಸಿಕೊಂಡರು. 

Last Updated : Sep 7, 2017, 01:35 PM IST
ರಕ್ಷಣಾ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ title=

ನವದೆಹಲಿ: ಭಾರತದ ಮೊದಲ ಪೂರ್ಣ ಪ್ರಮಾಣದ ಮಹಿಳಾ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸಶಸ್ತ್ರ ಪಡೆಗಳ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಭರವಸೆ ನೀಡಿದ ಅವರು ದೇಶದ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದಾಗಿ ತಿಳಿಸಿದ್ದಾರೆ.

ದೇಶದ ಕಲ್ಯಾಣಕ್ಕಾಗಿ ದೇಶವನ್ನು ರಕ್ಷಿಸುವ ಹೊಣೆ ಹೊತ್ತಿರುವ ಸೈನಿಕರು ಬಹಳ ನಿಷ್ಠೆಯಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ ಎಂದು ಹೊಸದಾಗಿ ಸೇರ್ಪಡೆಗೊಂಡ ರಕ್ಷಣಾ ಸಚಿವರು ಭರವಸೆ ನೀಡಿದ್ದಾರೆ.

ಇದೇ ವೇಳೆಯಲ್ಲಿ ಅವರ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ಹುಟ್ಟುಹಾಕಿದ ಪ್ರಧಾನಿ ಮೋದಿಯವರಿಗೆ  ಅವರು ತಮ್ಮ ಧನ್ಯವಾದ ಹೇಳಿದರು.

ತಮ್ಮಲ್ಲಿ ವಿಶ್ವಾಸ ಹೊಂದಿ ಇಂತಹ ನಿರ್ಣಾಯಕ ಹುದ್ದೆ ನೀಡಿರುವ ಪ್ರಧಾನಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸುಸಜ್ಜಿತ ಸಶಸ್ತ್ರ ಪಡೆಯೇ ನನ್ನ ಮೊದಲ ಆದ್ಯತೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ಕ್ಯಾಬಿನೇಟ್ ನಲ್ಲಿ ಸಚಿವರಾಗಿದ್ದ ಸೀತಾರಾಮನ್ ಅವರಿಗೆ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ ಮಂತ್ರಿ ಮಂಡಲದ ಪುನರ್ ರಚನೆಯಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ಬಡ್ತಿ ನೀಡಿದ್ದಾರೆ.

ಮನೋಹರ್ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ಪಡೆದಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ದ್ವಿಪಕ್ಷೀಯ ಸಂಭಾಷಣೆಗಾಗಿ ಜಪಾನ್ ಸಮಾರಂಭದಲ್ಲಿ ಪಾಲ್ಗೊಂಡರು. 

ಭಾನುವಾರ ಈ ಬಗ್ಗೆ ಮಾತನಾಡಿದ್ದ ಅರುಣ್ ಜೇಟ್ಲಿ ಜಪಾನ್ನಲ್ಲಿ ನಡೆಯಲಿರುವ ದ್ವಿಪಕ್ಷಿಯ ಮಾತುಕತೆಗೆ ನಿರ್ಮಾಲ ಸೀತಾರಾಮನ್ ಹಾಜರಾಗಬೇಕಿತ್ತು. ಆದರೆ, ಕೊನೆಯ ಕ್ಷಣಗಳಲ್ಲಿ ವ್ಯವಸ್ಥಾಪನಾ ವ್ಯವಸ್ಥೆಗಳು ಸಾಧ್ಯವಾಗದ ಕಾರಣ ತಾವು ಈ ಸಮಾರಂಭದಲ್ಲಿ ಪಾಲ್ಗೊಲ್ಲುತ್ತಿರುವುದಾಗಿ ತಿಳಿಸಿದ್ದರು. 

ಈ ಹಿಂದೆ, ಪ್ರಧಾನಿ ಇಂದಿರಾ ಗಾಂಧಿಯವರು ಡಿಸೆಂಬರ್ 19 ರಿಂದ 1975 ರವರೆಗೆ ಮತ್ತು ಜನವರಿ 14, 1980 ರಿಂದ ಜನವರಿ 15, 1982 ರವರೆಗೂ ಎರಡು ಬಾರಿ ರಕ್ಷಣಾ ಇಲಾಖೆಯನ್ನು ವಹಿಸಿಕೊಂಡಿದ್ದರು.

Trending News