Nitin Gadkari on Electric Vehicle: ಕಾರ್-ಬೈಕ್ ಖರೀದಿಸುವವರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿತೀನ್ ಗಡ್ಕರಿ

Nitin Gadkari on Electric Vehicle : ನೀವು ಸಹ ಎಲೆಕ್ಟ್ರಿಕ್ ವಾಹನವನ್ನು (E-Vehicles) ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು, ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್ ವಾಹನಗಳಿಗೆ ಸರಿಸಮಾನವಾಗಲಿದೆ ಎಂದು ಮಂಗಳವಾರ ಹೇಳಿದ್ದಾರೆ.  

Written by - Nitin Tabib | Last Updated : Mar 22, 2022, 07:20 PM IST

    ಮುಂದಿನ ಎರಡು ವರ್ಷಗಳಲ್ಲಿ ಇ-ವಾಹನಗಳ ಬೆಲೆ ಪೆಟ್ರೋಲ್ ವಾಹನಗಳಿಗೆ ಸಮಾನ

  • ಲೋಕಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆ
  • ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಜನರಿಗೂ ಕೂಡ ಸಂತಸದ ಸುದ್ದಿ ಪ್ರಕಟಿಸಿದ ನಿತಿನ್ ಗಡ್ಕರಿ
Nitin Gadkari on Electric Vehicle: ಕಾರ್-ಬೈಕ್ ಖರೀದಿಸುವವರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿತೀನ್ ಗಡ್ಕರಿ title=
Nitin Gadkari (Courtesy - Twitter)

ನವದೆಹಲಿ: Nitin Gadkari on Electric Vehicle: ನೀವು ಸಹ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್ ವಾಹನಗಳಿಗೆ ಸರಿಸಮಾನವಾಗಲಿದೆ ಎಂದು ಮಂಗಳವಾರ ಹೇಳಿದ್ದಾರೆ. ಈ ಸುದ್ದಿ ಕಾರು, ಬೈಕ್ ಸವಾರರಿಗೆ ನೆಮ್ಮದಿಯ ಸುದ್ದಿ ಎಂದೇ ಹೇಳಬಹುದು

ಇಲೆಕ್ಟ್ರಿಕ್ ಆಟೋಮೊಬೈಲ್ ಮೇಲಿನ ಹೂಡಿಕೆ ತಗ್ಗಲಿದೆ
ತಂತ್ರಜ್ಞಾನ ಮತ್ತು ಹಸಿರು ಇಂಧನದಲ್ಲಿನ ತ್ವರಿತ ಪ್ರಗತಿಯು ಎಲೆಕ್ಟ್ರಿಕ್ ಆಟೋಮೊಬೈಲ್‌ಗಳ ಬೆಲೆಯನ್ನು ಕಡಿಮೆ ಮಾಡಲಿದೆ ಎಂದು ಕೇಂದ್ರ ಸಚಿವರು (MoTH) ಹೇಳಿದ್ದಾರೆ. ಇದರೊಂದಿಗೆ ಇನ್ನೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಚಾಲಿತ ವಾಹನಗಳಿಗೆ ಸರಿಸಮವಾಗಲಿದೆ. ದೇಶಾದ್ಯಂತ ಇದನ್ನು ಒಂದು ಕ್ರಾಂತಿಯಂತೆಯೇ ನೋಡಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-West Bengal: ಬಿರ್ಭೂಮ್ ನಲ್ಲಿ ಹಿಂಸಾಚಾರ 8 ಜನರ ಸಾವು, ಗೃಹ ಸಚಿವ ಶಾ ಭೇಟಿಯಾದ BJP ಸಂಸದರು

ವಾಯು ಮಾಲಿನ್ಯದ ಮಟ್ಟ ಕೂಡ ಕಡಿಮೆಯಾಗಲಿದೆ
ಮಂಗಳವಾರ ಲೋಕಸಭೆಯಲ್ಲಿ 2022-23ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (Ministry Of Road Transport And Highway) ಅನುದಾನದ ಬೇಡಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಗಡ್ಕರಿ. ಪರಿಣಾಮಕಾರಿ ಸ್ವದೇಶಿ ಇಂಧನದತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ, ವಿದ್ಯುತ್ ಇಂಧನವು ಶೀಘ್ರದಲ್ಲೇ ನಿಜವಾಗಲಿದೆ ಎಂದು ಭರವಸೆಯನ್ನು ಅವರು ವ್ಯಕ್ತಪಡಿಸಿದ್ದು, ಇದು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ! ಟಾಪ್ 5 ಕಲುಷಿತ ರಾಷ್ಟ್ರಗಳಲ್ಲಿ ಭಾರತಕ್ಕೆ ಯಾವ ಸ್ಥಾನ?

ಇ-ವಾಹನಗಳ (E-Vehicles) ಬೆಲೆ ಪೆಟ್ರೋಲ್ ವಾಹನಗಳಿಗೆ ಸಮನಾಗಿರುತ್ತದೆ
'ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆ ವೇಗವಾಗಿ ಇಳಿಯುತ್ತಿದೆ. ನಾವು ಜಿಂಕ್-ಐಯಾನ್, ಅಲ್ಯೂಮಿನಿಯಂ-ಐಯಾನ್, ಸೋಡಿಯಂ-ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಹೀಗಾಗಿ ಗರಿಷ್ಠ ಎರಡು ವರ್ಷಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್, ಕಾರು, ಆಟೋ ರಿಕ್ಷಾಗಳ ಬೆಲೆ ಪೆಟ್ರೋಲ್ ಚಾಲಿತ ಸ್ಕೂಟರ್, ಕಾರು, ಆಟೋ ರಿಕ್ಷಾಗಳಿಗೆ ಸಮನಾಗಿರುತ್ತದೆ' ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-ದೆಹಲಿಯ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರು : ಸಿಎಂ ಕೇಜ್ರಿವಾಲ್ ಘೋಷಣೆ

ಟೋಲ್ ಪ್ಲಾಜಾಗಳ ಬಳಿ ಇರುವ ಜನರಿಗೆ ಸಂತಸದ ಸುದ್ದಿ
ಟೋಲ್ ಪ್ಲಾಜಾ ಬಳಿ ವಾಸಿಸುವ ಜನರಿಗೆ ವಿಶೇಷ ರಿಯಾಯಿತಿ ನೀಡಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ನಿರ್ಧರಿಸಿದೆ ಎಂದು ಗಡ್ಕರಿ ಹೇಳಿದ್ದಾರೆ. ಆಧಾರ್ ಕಾರ್ಡ್ ಹೊಂದಿರುವ ಮತ್ತು ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯ ಜನರಿಗೆ ಸರ್ಕಾರ ಪಾಸ್‌ಗಳನ್ನು ಒದಗಿಸಲಿದೆ ಎಂದು ಗಡ್ಕರಿ ಲೋಕಸಭೆಗೆ (Lok Sabha) ತಿಳಿಸಿದ್ದಾರೆ. ಇದಲ್ಲದೆ, 60 ಕಿ.ಮೀ.ಗಿಂತ ಕಡಿಮೆ ದೂರದ ಸ್ಥಳದಲ್ಲಿ ಮತ್ತೊಂದು ಟೋಲ್ ಪ್ಲಾಜಾ ಇದ್ದರೆ, ಮುಂದಿನ ಮೂರು ತಿಂಗಳೊಳಗೆ ಎರಡನೇ ಟೋಲ್ ಪ್ಲಾಜಾ ಅನ್ನು  ಮುಚ್ಚಲಾಗುವುದು ಎಂದೂ ಕೂಡ ಗಡ್ಕರಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News