ಅಪರೂಪದ ʼಸ್ವರ್ಣ ನಾಗʼ ಪತ್ತೆ..! ಭಾರತದಲ್ಲಿ ಈ ʼಗೋಲ್ಡನ್ ಕೋಬ್ರಾʼ ಇರುವುದೇ ಶಾಕಿಂಗ್‌.. ಏಕೆ ಗೊತ್ತೆ..?

Gold snake found : ವಿಶಾಖಪಟ್ಟಣಂನ ಡಾಲ್ಫಿನ್ ಹಿಲ್ಸ್ ಬೆಟ್ಟದ ಮೇಲಿರುವ ನೌಕಾಪಡೆಯ ಕ್ವಾರ್ಟರ್ಸ್‌ನಲ್ಲಿ ಉದ್ಯೋಗಿಗಳು ವಾಸಿಸುತ್ತಿದ್ದಾರೆ. ನೌಕಾಪಡೆಯ ಉದ್ಯೋಗಿಯೊಬ್ಬರು, ತಮ್ಮ ಕಾರನ್ನು ಶೆಡ್‌ನಿಂದ ಹೊರತರಲು ಪ್ರಯತ್ನಿಸುತ್ತಿದ್ದರು. ಆಗ ಅವರಿಗೆ ಕತ್ತಲ್ಲಿ ಬೆಳಕು ಮೂಡಿತು... ಕೈಯಿಂದ ಕಣ್ಣು ಉಜ್ಜಿಕೊಂಡು ನೋಡಿದರೆ...

Written by - Krishna N K | Last Updated : Nov 13, 2024, 04:58 PM IST
    • ಸೃಷ್ಟಿಯಲ್ಲಿ ಹಲವು ರೀತಿಯ ಜೀವಿಗಳಿವೆ..
    • ಅಪರೂಪದ ಜೀವಿಗಳನ್ನು ಕಂಡರೆ ಆಗುವ ಖುಷಿ
    • ಗೋಲ್ಡನ್ ಕೋಬ್ರಾ ಅಪರೂಪದ ಜಾತಿಯಾಗಿದೆ.
ಅಪರೂಪದ ʼಸ್ವರ್ಣ ನಾಗʼ ಪತ್ತೆ..! ಭಾರತದಲ್ಲಿ ಈ ʼಗೋಲ್ಡನ್ ಕೋಬ್ರಾʼ ಇರುವುದೇ ಶಾಕಿಂಗ್‌.. ಏಕೆ ಗೊತ್ತೆ..? title=

Gold snake viral video : ಸೃಷ್ಟಿಯಲ್ಲಿ ಹಲವು ರೀತಿಯ ಜೀವಿಗಳಿವೆ.. ಜಲಚರಗಳು.. ಸರೀಸೃಪಗಳು.. ಹೀಗೆ ಸಾಕಷ್ಟು... ಅವುಗಳಲ್ಲಿ ಅಪರೂಪದ ಜೀವಿಗಳನ್ನು ಕಂಡರೆ ಆಗುವ ಖುಷಿಯೇ ಬೇರೆ.. ಈ ರೀತಿಯ ಘಟನೆ ವಿಶಾಖದಲ್ಲಿ ನಡೆದಿದೆ...  ಹೌದು.. ನಾಗರಾಜ್ ಎಂಬ ಉರಗ ರಕ್ಷಕನಿಗೆ ಫೋನ್ ಬಂತು... ತಕ್ಷಣ ಹೊರಟು ಹೋದ.. ಹಾವು ಹೊಳೆಯುತ್ತಿತ್ತು... ಬಂಗಾರದ ಬಣ್ಣದಲ್ಲಿ ಮಿನುಗುತ್ತಿತ್ತು. ಸಾಮಾನ್ಯವಾಗಿ ನಾಗರಹಾವುಗಳಲ್ಲಿ ಹಲವು ವಿಧಗಳಿವೆ. ಬಿಳಿ ನಾಗರಹಾವು, ಸಾಮಾನ್ಯ ನಾಗರಹಾವು, ಕಂದು ನಾಗರಹಾವು.. ಆದರೆ.. ಗೋಲ್ಡನ್ ಕೋಬ್ರಾ ಅಪರೂಪದ ಜಾತಿಯಾಗಿದೆ. ಭಾರತದಲ್ಲಿ ಕಾಣುವುದೂ ಅಪರೂಪ.

ವಿಶಾಖಪಟ್ಟಣಂನ ಡಾಲ್ಫಿನ್ ಹಿಲ್ಸ್ ಬೆಟ್ಟದ ಮೇಲಿರುವ ನೌಕಾಪಡೆಯ ಕ್ವಾರ್ಟರ್ಸ್‌ನಲ್ಲಿ ಉದ್ಯೋಗಿಗಳು ವಾಸಿಸುತ್ತಿದ್ದಾರೆ. ಉದ್ಯೋಗಿಯೊಬ್ಬರು ತಮ್ಮ ಕಾರನ್ನು ಶೆಡ್‌ನಿಂದ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ, ಆ ಕ್ಷಣದಲ್ಲಿ ಅವರಿಗೆ ಬಂಗಾರದ ಬೆಳಕು ಕಂಡಿದೆ.. ಥಟ್ಟನೆ ಬೆಚ್ಚಿಬಿದ್ದ ಅವರು ಕೈಯಿಂದ ಕಣ್ಣು ಉಜ್ಜಿಕೊಂಡು ನೋಡಿದಾಗ.. ಕಣ್ಣೆದುರು ಸ್ವರ್ಣ ನಾಗ..

ಇದನ್ನೂ ಓದಿ:ಅರೇ, ಬ್ರೋ.. ಅದು ಮಾರುತಿ ಕಾರ್‌, ಲಾರಿ ಅಲ್ಲ..! ʼIndia is not for beginners...ʼ ವಿಡಿಯೋ ನೋಡಿ..   

ತಲೆಯಿಂದ ಬಾಲದವರೆಗೆ ಚಿನ್ನದ ಬಣ್ಣದ ಹಾವು.. ಅಪರೂಪದ ಹಾವು ಎಂದು ಭಾವಿಸಿದ ನೌಕಾಪಡೆ ಅಧಿಕಾರಿ ಹಾವು ಹಿಡಿಯುವವ ನಾಗರಾಜುಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಲೇ ಅಲ್ಲಿಗೆ ಬಂದ ನಾಗರಾಜು ತಮ್ಮ ಚಾಕಚಕ್ಯತೆಯಿಂದ ಹಾವನ್ನು ರಕ್ಷಣೆ ಮಾಡಿದ್ದಾರೆ. ಅತಿ ಅಪರೂಪದ ಹಾವನ್ನು ಕಂಡು ಅವರಿಗೂ ಸಹ ಆಶ್ಚರ್ಯವಾಯಿತು. 

ವಿಶಾಖಪಟ್ಟಣಂನಲ್ಲಿ ಐದರಿಂದ ಆರು ಸಾವಿರ ಹಾವುಗಳನ್ನು ರಕ್ಷಿಸಿದ್ದೇನೆ. ಆದರೆ ಅಂತಹ ಹಾವುಗಳು ಬಹಳ ಅಪರೂಪ. ವಿಶಾಖದಲ್ಲಿ ಎಲ್ಲಿಯೂ ಈ ರೀತಿ ಹಾವು ಕಂಡುಬರುವುದಿಲ್ಲ. ಈ ಹಾವುಗಳು ಅತ್ಯಂತ ವಿಷಕಾರಿ ಮತ್ತು ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತವೆ ಎಂದು ಉರಗ ರಕ್ಷಕ ಮಾಹಿತಿ ನೀಡಿದರು..

ಇದನ್ನೂ ಓದಿ:ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿ

ಗೋಲ್ಡನ್ ಕೋಬ್ರಾ ಎಂದು ಕರೆಯಲ್ಪಡುವ ಈ ಹಾವು ಮರುಭೂಮಿ ಪ್ರದೇಶದಲ್ಲಿ ವಾಸಿಸುತ್ತದೆ. ಈ ಜಾತಿಯ ಹಾವುಗಳು ಮುಖ್ಯವಾಗಿ ಆಫ್ರಿಕಾದಲ್ಲಿ ಕಂಡುಬರುತ್ತವೆ. ಇದರ ವೈಜ್ಞಾನಿಕ ಹೆಸರು ಕೇಪ್ ಕೋಬ್ರಾ. ಹಳದಿ ನಾಗರಹಾವು ಎಂದೂ ಕರೆಯಲ್ಪಡುವ ಇದು ದಕ್ಷಿಣ ಆಫ್ರಿಕಾದ ಮರುಭೂಮಿ ಮತ್ತು ಅರೆ ಮರುಭೂಮಿ ಪ್ರದೇಶಗಳಲ್ಲಿ ವಾಸಿಸುವ ನಾಗರಹಾವಿನ ಅತ್ಯಂತ ವಿಷಕಾರಿ ಜಾತಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News