ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮನ್ನು ಕೇಂದ್ರ ಸರ್ಕಾರವು ರಜೆ ಮೇರೆಗೆ ಕಳುಹಿಸಿದ ನಿರ್ಧಾರವನ್ನು ಪ್ರಶ್ನಿಸಿ ಸುರ್ಪ್ರಿಂಕೋರ್ಟ್ ಗೆ ಮೊರೆ ಹೋಗಿದ್ದಾರೆ.
ಈಗ ಈ ವಿಚಾರವಾಗಿ ಇದೇ ನವಂಬರ್ 29ಕ್ಕೆ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.ಇದಕ್ಕೂ ಮೊದಲು ಸಿವಿಸಿ ತನಿಖೆಯ ವಿಚಾರವಾಗಿ ವರ್ಮಾ ಅವರು ನೀಡಿರುವ ಹೇಳಿಕೆಗಳು ಈಗ ಬಹಿರಂಗಗೊಂಡು ವೆಬ್ ಸೈಟ್ ವೊಂದರಲ್ಲಿ ಪ್ರಕಟಿಸಲಾಗಿದೆ.ಸಿವಿಸಿ ವರದಿ ಮತ್ತು ವರ್ಮಾ ಪ್ರತಿಕ್ರಿಯೆ ಲೀಕ್ ಆಗಿರುವ ಹಿನ್ನಲೆಯಲ್ಲಿ ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅಲೋಕ್ ವರ್ಮಾ ಪರವಾಗಿ ವಾದಿಸುತ್ತಿರುವ ವಕೀಲರು ಸೋಮವಾರದಂದು ಹೆಚ್ಚಿನ ಕಾಲಾವಧಿ ಕೇಳಿರುವ ಬಗ್ಗೆ ನ್ಯಾಯಪೀಠ ಪ್ರಸ್ತಾಪಿಸಿದೆ.ಇದಾದ ನಂತರ ಅಲೋಕ್ ವರ್ಮಾ ಪರವಾಗಿ ವಾದಿಸಿದ ಫಾಲಿ ನಾರಿಮನ್ ಸೋಮವಾರದಂದು ತಮ್ಮ ಅರ್ಜಿದಾರ ತಮ್ಮ ಹೇಳಿಕೆಯನ್ನು ದಾಖಲಿಸಲು ಹೆಚ್ಚಿನ ಸಮಯ ಕೇಳಿಲ್ಲ ಎಂದು ತಿಳಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನಾಯಮೂರ್ತಿ ರಂಜನ್ ಗೋಗಯ್ " ನನಗನಿಸುತ್ತೆ ನೀವ್ಯಾರು ಕೂಡ ಇಂದಿನ ವಿಚಾರಣೆಗೆ ಅರ್ಹರಲ್ಲ" ಎಂದು ಉತ್ತರಿಸಿದ್ದಾರೆ.ಇದಕ್ಕೆ ಅಲ್ಲಿ ನೆರದಿದ್ದ ವಕೀಲರು ಅಚ್ಚರಿ ವ್ಯಕ್ತಪಡಿಸಿದ್ದಾರೆ.