ಸೋಶಿಯಲ್ ಮೀಡಿಯಾ ದುರ್ಬಳಕೆಗೆ ಕ್ರಮ ಕೈಗೊಳ್ಳಲು ಸರ್ಕಾರದಿಂದ ಸೂಚನೆ

ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಸೈಬರ್ ಅಪರಾಧಗಳು ಮತ್ತು ಇತರ ಚಟುವಟಿಕೆಗಳು ಪ್ರಚೋದಿಸುವ ಸಂದೇಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಅವುಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ಗೂಗಲ್, ಟ್ವಿಟರ್, ವ್ಯಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರ್ಯಾಮ್ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಿದೆ.

Last Updated : Oct 26, 2018, 01:17 PM IST
ಸೋಶಿಯಲ್ ಮೀಡಿಯಾ ದುರ್ಬಳಕೆಗೆ ಕ್ರಮ ಕೈಗೊಳ್ಳಲು ಸರ್ಕಾರದಿಂದ ಸೂಚನೆ    title=

ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಸೈಬರ್ ಅಪರಾಧಗಳು ಮತ್ತು ಇತರ ಚಟುವಟಿಕೆಗಳು ಪ್ರಚೋದಿಸುವ ಸಂದೇಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಅವುಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ಗೂಗಲ್, ಟ್ವಿಟರ್, ವ್ಯಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರ್ಯಾಮ್ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಿದೆ.ಅಲ್ಲದೆ, ಈ ವೇದಿಕೆಗಳಲ್ಲಿ ತನಿಖಾ ಉದ್ದೇಶಗಳಿಗಾಗಿ ಕಾನೂನು ಜಾರಿ ಸಂಸ್ಥೆಯನ್ನು  ಮಾಹಿತಿಯ ಹಂಚಿಕೆಗಾಗಿ ರಚಿಸಬೇಕು ಎಂದು ಸರ್ಕಾರ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ವೇದಿಕೆಯನ್ನು ದ್ವೇಷಿಸುವ ಸಂದೇಶಗಳು ಮತ್ತು ವದಂತಿಗಳನ್ನು ಹರಡಲು ಬಳಸಲಾಗುತ್ತದೆ. ಆದರೆ  ಬಹುತೇಕ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಪ್ರಧಾನ ಕಛೇರಿಗಳು ಭಾರತದಿಂದ ಹೊರಗಡೆ ಇವೆ ಅಲ್ಲದೆ ಅವು ಗ್ರಾಹಕರ ಮಾಹಿತಿಯನ್ನು ನೀಡಲು ನಿರಾಕರಿಸುತ್ತವೆ.ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಕಲಿ ಸುದ್ದಿ ಹರಡುವಿಕೆ ಅವರ ಪ್ಲಾಟ್ಫಾರ್ಮ್ಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ  ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಭಾರತ ಮೂಲದ ಸಮಸ್ಯೆಗಳ ನಿಯಂತ್ರಣಕ್ಕಾಗಿ ಸ್ಥಳಿಯವಾಗಿ ಅಧಿಕಾರಿಗಳನ್ನು ನೇಮಿಸಲು ಮತ್ತು ಇತರ ಕಾರ್ಯಚಟುವಟಿಕೆಗಳ ಮೇಲ್ವಿಚಾರಣಾ ಉಸ್ತುವಾರಿಯನ್ನು ನೇಮಿಸಲು ಕೇಳಿಕೊಂಡರು. 
 

Trending News