ಇನ್ಮುಂದೆ WhatsApp ಡಿಪಿ ಸೇವ್ ಮಾಡಲು ಸಾಧ್ಯವಿಲ್ಲ ! ಏಕೆ ಗೊತ್ತೇ ?

ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ವಿಶಿಷ್ಟ ಅಪ್ಡೇಟ ನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ನೀವು ಇನ್ನೊಬ್ಬರ ವಾಟ್ಸಪ್‌ನ ಡಿಸ್‌ಪ್ಲೇ ಪಿಕ್ಚರ್ ಅನ್ನು ಇನ್ನು ನೀವು ಸೇವ್ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ತಿಳಿದುಬಂದಿದೆ.

Last Updated : May 31, 2019, 06:35 PM IST
 ಇನ್ಮುಂದೆ WhatsApp ಡಿಪಿ ಸೇವ್ ಮಾಡಲು ಸಾಧ್ಯವಿಲ್ಲ ! ಏಕೆ ಗೊತ್ತೇ ? title=

ನವದೆಹಲಿ: ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ವಿಶಿಷ್ಟ ಅಪ್ಡೇಟ ನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ನೀವು ಇನ್ನೊಬ್ಬರ ವಾಟ್ಸಪ್‌ನ ಡಿಸ್‌ಪ್ಲೇ ಪಿಕ್ಚರ್ ಅನ್ನು ಇನ್ನು ನೀವು ಸೇವ್ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ತಿಳಿದುಬಂದಿದೆ.

ಇದನ್ನು ಈಗ ವಾಟ್ಸಪ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆ ನಾವು ವಾಟ್ಸಪ್ ಬಳಕೆದಾರರ ಫೋಟೋವನ್ನು ಸೇವ್ ಮಾಡಿಕೊಳ್ಳುವ ಅಥವಾ ಸ್ಕ್ರೀನ್ ಶಾಟ್ ಮೂಲಕ ಅದನ್ನು ಸೇವ್ ಮಾಡಿಕೊಳ್ಳುವ ಆಯ್ಕೆ ಇತ್ತು.ವಾಬೀಟಾ ಇನ್ಫೋ ಪ್ರಕಾರ, ಹೊಸ 2.19.60 ಅಪ್‌ಡೇಟ್ ಈ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಇದರಲ್ಲಿ ಬಳಕೆದಾರರ ಭದ್ರತೆ ಮತ್ತು ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ವೈಶಿಷ್ಟವನ್ನು ಬಿಡುಗಡೆ ಮಾಡಿದೆ.

ಸದಾ ಒಂದಿಲ್ಲೊಂದು ವಿಶೇಷತೆಗಳನ್ನೂ ಬಿಡುಗಡೆ ಮಾಡುತ್ತಲೇ ಇರುವ ವಾಟ್ಸಪ್ ಈ ವೈಶಿಷ್ಟದ ಮೂಲಕ ಬಳಕೆದಾರರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಿದೆ.

Trending News