ಆಂಧ್ರದಿಂದ ಅಂಬಾನಿ ಮನೆಗೆ ಬಂತು 84 ಲಕ್ಷದ ಆಲಿವ್ ಮರ..ಮನೆಯ ಆವರಣದಲ್ಲಿ ಈ ಮರವಿದ್ದರೆ ಏನು ಫಲ?

Mukhesh Ambani:ಆಲಿವ್ ಮರ ಬೆಳೆಸಿದರೆ ಒಳ್ಳೆಯದಾಗುತ್ತದೆ ಎಂದು ನಂಬಿರುವ ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಈಗ ಎರಡು ಆಲಿವ್ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ನೆಡಲಿದ್ದಾರೆ.

Written by - ZH Kannada Desk | Last Updated : Nov 27, 2021, 03:54 PM IST
  • ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಹೊಸ ಮನೆಗೆ ಆಂಧ್ರದಿಂದ 84 ಲಕ್ಷದ ಆಲಿವ್ ಮರ ಬಂದಿದೆ.
ಆಂಧ್ರದಿಂದ ಅಂಬಾನಿ ಮನೆಗೆ ಬಂತು 84 ಲಕ್ಷದ ಆಲಿವ್ ಮರ..ಮನೆಯ ಆವರಣದಲ್ಲಿ ಈ ಮರವಿದ್ದರೆ ಏನು ಫಲ?

ರಾಜಮಂಡ್ರಿ (ಆಂಧ್ರಪ್ರದೇಶ): ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಹೊಸ ಮನೆಗೆ ಆಂಧ್ರದಿಂದ 84 ಲಕ್ಷದ  ಆಲಿವ್ ಮರ ಬಂದಿದೆ.

ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಮಾಲೀಕ ಮುಖೇಶ್ ಅವರ ಹೊಸ ಮನೆಗೆ ಸ್ಪೇನ್ ಮೂಲದ ಎರಡು ಆಲಿವ್ ಮರಗಳನ್ನು ಪೂರ್ವ ಗೋದಾವರಿಯ ಕಡಿಯಂ ನರ್ಸರಿಯಿಂದ ಕಳುಹಿಸಲಾಗಿದೆ.

ಅಂತಾರಾಷ್ಟ್ರೀಯ ಉದ್ಯಮಿ ಮುಕೇಶ್ ಅಂಬಾನಿ ಎರಡು ಆಲಿವ್ ಮರಗಳನ್ನು ಆರ್ಡರ್ ಮಾಡಿದ್ದಾರೆ ಮತ್ತು ಪ್ರತಿ ಮರಕ್ಕೆ 42 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.ಏಕೆಂದರೆ ಯಾವುದೇ ಮನೆಯ ಆವರಣದಲ್ಲಿ ಆ ಮರಗಳು ಇದ್ದರೆ ಅದನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಈ ಮರಗಳನ್ನು ಮನೆಯಲ್ಲಿ ಬೆಳೆಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ. 

ಇದನ್ನೂ ಓದಿ : '83' ಸಿನೆಮಾ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ, ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟೀಸರ್​

ಮರಗಳು 1,000 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಅಂಬಾನಿ ಮನೆಗೆ ಕಳುಹಿಸಲಾದ ಆಲಿವ್ ಮರಗಳು 100 ವರ್ಷಕ್ಕಿಂತ ಹಳೆಯವು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಈ ಎರಡು ಆಲಿವ್ ಮರಗಳನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂನಲ್ಲಿರುವ ಗೌತಮಿ ನರ್ಸರಿಯ ಮಾಲೀಕ ಮಾರ್ಗನಿ ಶೇಷು ಅವರು ಸ್ಪೇನ್‌ನಿಂದ ತಂದಿದ್ದಾರೆ.  

ವಿಶೇಷ ಟ್ರಾಲರ್ ಟ್ರಕ್‌ನಲ್ಲಿ ಕಡಿಯಂನಿಂದ ಜಾಮ್‌ನಗರಕ್ಕೆ ಮರಗಳನ್ನು ಕಳುಹಿಸಲಾಗಿದ್ದು, ಟ್ರಕ್‌ಗಾಗಿ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ದು, ಇದು ಕೇವಲ 30 ಕಿಮೀ ವೇಗದಲ್ಲಿ ಸಾಗುತ್ತದೆ. ನವೆಂಬರ್ 29 ರ ವೇಳೆಗೆ ಜಾಮ್‌ನಗರ ತಲುಪಲಿದೆ ಎಂದು ನರ್ಸರಿ ಮೂಲಗಳು ತಿಳಿಸಿವೆ. 

ಇದನ್ನೂ ಓದಿ : Priyanka Chopra: ಪತಿ ನಿಕ್ ಜೊತೆ ಮೋಹಕ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಆಲಿವ್ ಮರ ಬೆಳೆಸಿದರೆ ಒಳ್ಳೆಯದಾಗುತ್ತದೆ ಎಂದು ನಂಬಿರುವ ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಈಗ ಎರಡು ಆಲಿವ್ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ನೆಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News