close

News WrapGet Handpicked Stories from our editors directly to your mailbox

ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ನ್ಯಾಷನಲ್ ಕಾನ್ಫರೆನ್ಸ್ ಒಮರ್ ಅಬ್ದುಲ್ಲಾ  ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Updated: May 23, 2019 , 04:19 PM IST
ಪ್ರಧಾನಿ ಮೋದಿಯದ್ದು ವೃತ್ತಿಪರ ಪ್ರಚಾರ ಎಂದು ಮೆಚ್ಚುಗೆ ಸೂಚಿಸಿದ ಒಮರ್ ಅಬ್ದುಲ್ಲಾ

ನವದೆಹಲಿ:  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ನ್ಯಾಷನಲ್ ಕಾನ್ಫರೆನ್ಸ್ ಒಮರ್ ಅಬ್ದುಲ್ಲಾ  ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ " ಈಗ ಚುನಾವಣಾ ಸಮೀಕ್ಷೆಗಳು ಸರಿಯಾಗಿವೆ.ಬಿಜೆಪಿ ಮತ್ತು ಎನ್ ಡಿ ಎ ನ ಈ ಅದ್ಬುತ ಪ್ರದರ್ಶನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೆಲ್ಲವೂ ಈಗ ಸಾಧ್ಯವಾದದ್ದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವೃತ್ತಿಪರ ಪ್ರಚಾರ ಮತ್ತು ಒಕ್ಕೂಟವನ್ನು ಜೊತೆಯಾಗಿ ಇಟ್ಟುಕೊಂಡಿದ್ದು. ಮತ್ತೆ ಐದು ವರ್ಷಗಳ ಕಾಲ ಅಧಿಕಾರಕ್ಕೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯದ ಟ್ರೆಂಡ್ ಗಳನ್ನು ಗಮಿಸಿದರೆ 2014 ರಲ್ಲಿ ಬಿಜೆಪಿ ಹಾಗೂ ಎನ್ ಡಿ ಎ ನೀಡಿದ ಪ್ರದರ್ಶನಕ್ಕಿಂತಲೂ ಅಭೂತಪೂರ್ವ ಪ್ರದರ್ಶನವನ್ನು ಈ ಬಾರಿ ನೀಡಿದೆ.ಸದ್ಯ ಬಿಜೆಪಿ 288 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿರುವ ಬಿಜೆಪಿ ಸರಳ ಬಹುಮತದ ಸಂಖ್ಯೆಯನ್ನು ದಾಟಿದೆ.ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು 53 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಚುನಾವಣಾ ಸಮೀಕ್ಷೆಗಳು ಬಂದ ನಂತರ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ ಲಾಗ್ ಔಟ್ ಆಗಿ ನಿಮ್ಮ ಟಿವಿ ಗಳನ್ನು ಸ್ವಿಚ್ ಆಫ್ ಮಾಡುವುದು ಒಳ್ಳೆಯದು ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು.ಈಗ ಎಲ್ಲ ಚುನಾವಣಾ ಸಮೀಕ್ಷೆಗಳು ಸುಳ್ಳಾಗುವುದಿಲ್ಲ ಎಂದು ಫಲಿತಾಂಶವನ್ನು ಒಪ್ಪಿಕೊಂಡಿದ್ದಾರೆ.