ನವದೆಹಲಿ:ಕಳೆದ ಜನವರಿ ತಿಂಗಳಿಂದ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ದ ಮಹಾಭಿಯೋಗದ ಚರ್ಚೆ ನಡೆಯುತ್ತಲೇ ಇತ್ತು,ಆದರೆ ಈಗ ಎಲ್ಲ ಪ್ರತಿಪಕ್ಷಗಳು ಈ ಕ್ರಮಕ್ಕೆ ಮುಂದಾಗಿವೆ.
ಮಹಾಭಿಯೋಗದ ಮೊದಲ ಭಾಗವಾಗಿ ಸುಮಾರು 70 ಸಹಿಗಳನ್ನೋಳಗೊಂಡ ಅರ್ಜಿಯನ್ನು ಇಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಲ್ಲಿಸಲಾಗಿದೆ.ಈ ಅರ್ಜಿಯಲ್ಲಿ ವಿರೋಧ ಪಕ್ಷಗಳು ಮುಖ್ಯನ್ಯಾಯಮೂರ್ತಿಗಳ ವಿರುದ್ದ ಐದು ದೋಷಾರೋಪಪಟ್ಟಿಗಳನ್ನು ಮಾಡಿವೆ.ಇದುವರೆಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಮುಖ್ಯನ್ಯಾಯಮೂರ್ತಿಗಳು ಮಹಾಭಿಯೋಗದ ಶಿಕ್ಷೆಗೆ ಒಳಗಾಗಿಲ್ಲ. ವಿರೋಧ ಪಕ್ಷಗಳು ಸಲ್ಲಿಸಿದ ಅರ್ಜಿಯ ಕುರಿತಾಗಿ ಉಪರಾಷ್ಟ್ರಪತಿಗಳು ಕಾನೂನು ಸಲಹೆಯನ್ನು ಪಡೆದು ಮುಂದಿನ ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
The motion for removal of Chief Justice Mishra has just been delivered to the VP. The fight is just beginning.
— indira jaising (@IJaising) April 20, 2018
ನ್ಯಾಯಮೂರ್ತಿ ಬಿಎಚ್ ಲೋಯಾ ಅವರು 2014 ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ದ ಇರುವ ಮರ್ಡರ್ ಸಂಬಂಧಿತ ಕೇಸ್ ಗಳ ವಿಚಾರಣೆ ನಡೆಸುತ್ತಿದ್ದರು.ಆದರೆ ಸುಪ್ರಿಂ ಕೋರ್ಟ್ ಅವರ ಸಾವು ಇದು ಸ್ವಾಭಾವಿಕ, ಇದಕ್ಕೆ ಯಾವುದೇ ರೀತಿಯ ತನಿಖೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು, ಈ ಹಿನ್ನಲೆಯಲ್ಲಿ ಈಗ ಎಲ್ಲ ವಿರೋಧಪಕ್ಷಗಳು ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ಮಹಾಭಿಯೋಗ ಕ್ರಮಕ್ಕೆ ಮುಂದಾಗಿವೆ.