ತೃತೀಯ ರಂಗದ ಒಗ್ಗಟ್ಟು ಹೃದಯಗಳಿಲ್ಲದ ಭೇಟಿಯಂತೆ- ಯೋಗಿ ಆದಿತ್ಯನಾಥ್

     

Last Updated : May 24, 2018, 07:01 PM IST
ತೃತೀಯ ರಂಗದ ಒಗ್ಗಟ್ಟು ಹೃದಯಗಳಿಲ್ಲದ ಭೇಟಿಯಂತೆ- ಯೋಗಿ ಆದಿತ್ಯನಾಥ್  title=

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ  ಸಮಾರಂಭದಲ್ಲಿ ವಿರೋಧ ಪಕ್ಷಗಳ ನಾಯಕರ ಉಪಸ್ಥಿತಿಯ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಂಗವಾಡಿದ್ದಾರೆ.

ಝೀ ನ್ಯೂಸ್ ಸಂದರ್ಶನದಲ್ಲಿ  ಮಾತನಾಡಿದ ಅವರು " ಕೇವಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಸೇರಿವೆ. ಆದರೆ ಅದರಲ್ಲಿ ಯಾವುದೇ ಹೃದಯದ ಭೇಟಿ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಕ್ಷಣೆಯ ಚಿತ್ರಣ ಸಂಪೂರ್ಣ ಬದಲಾಗಿದೆ ಇದು ಮಗುವಿಗೂ ತಿಳಿದಿರುವ ವಿಷಯ" ಎಂದು ತಿಳಿಸಿದರು.ಇನ್ನು ಮುಂದುವರೆದು ಇಂದು ರೈತರು ನಮ್ಮ ಜೊತೆ ಇದ್ದಾರೆ, ಜಾಟರು ನಮ್ಮ ಜೊತೆಗಿದ್ದಾರೆ, ಯಾರಿಗೆಲ್ಲಾ ಶಾಂತಿ ಬೇಕಾಗಿತ್ತೋ ಅವರೆಲ್ಲಾ ಇಂದು ಬಿಜೆಪಿ ಜೊತೆಗಿದ್ದಾರೆ" ಎಂದು ತಿಳಿಸಿದರು.

ನಿನ್ನೆ ನಡೆದ ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರು ಹಾಜರಿದ್ದು ತಮ್ಮ ಶಕ್ತಿ ಪ್ರದರ್ಶನ ತೋರ್ಪಡಿಸಿದರು. ಆ ಮೂಲಕ  ಮುಂಬರುವ 2019 ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ದ ರಣತಂತ್ರ ರೂಪಿಸಲು  ಈ ಕಾರ್ಯಕ್ರಮ ವೇದಿಕೆಯಾಗಿ ಪರಿವರ್ತನೆಯಾಗಿತ್ತು.

 

Trending News