ಉಳಿತಾಯದ ಮೊದಲ ನಿಯಮ ಹೇಳಿಕೊಟ್ಟ Piggy Bank ಹಿಂದಿನ ಈ ರೋಚಕ ಕಥೆ ನಿಮಗೆ ತಿಳಿದಿದೆಯೇ?

ಚಿಕ್ಕಂದಿನಿಂದ ಇದುವರೆಗೆ ನೀವು ಹಣ ಉಳಿತಾಯಕ್ಕಾಗಿ ಬಳಸುವ ಕುಡಿಕೆ ಅಥವಾ ಚೀನೀ ಮಣ್ಣದ ಕುಳ್ಳಿಗೆ ವರಾಹದ ರೂಪ ಏಕೆ ನೀಡಲಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ Piggy Bank ಎಂದೇ ಏಕೆ ಕರೆಯಲಾಗುತ್ತದೆ? Lion Bank ಎಂದು ಏಕೆ ಕರೆಯುವುದಿಲ್ಲ? ಇಂತಹ ಎಲ್ಲ ಕೂತುಹಲಕಾರಿ ಪ್ರಶ್ನೆಯ ಉತ್ತರಕ್ಕಾಗಿ ಈ ಲೇಖನ ಓದಿ.  

Last Updated : Apr 28, 2020, 06:39 PM IST
ಉಳಿತಾಯದ ಮೊದಲ ನಿಯಮ ಹೇಳಿಕೊಟ್ಟ Piggy Bank ಹಿಂದಿನ ಈ ರೋಚಕ ಕಥೆ ನಿಮಗೆ ತಿಳಿದಿದೆಯೇ? title=

ಚಿಕ್ಕಂದಿನಲ್ಲಿ ಅಜ್ಜ-ಅಜ್ಜಿ ನಿಮಗೆ ಯಾವಾಗಲಾದರು ಹಣ ನೀಡಿದರೆ ಅದನ್ನು ಕುಡಿಕೆಯಲ್ಲಿ ಸಂಗ್ರಹಿಸಲು ನಿಮ್ಮ ಮನಸ್ಸು ಕೂಡ ಹಂಬಲಿಸಿರಬಹುದು. ಆದರೆ, ದೊಡ್ಡವರಾದ ಬಳಿಕ ನಿಮ್ಮ ಮನದಲ್ಲಿಯ ಆ ಪಿಗ್ಗಿ ಬ್ಯಾಂಕ್ ಜಾಗ ನಿಜವಾದ ಬ್ಯಾಂಕ್ ಗಳು ಆಕ್ರಮಿಸಿವೆ. ಆದರೆ, ಚಿಕ್ಕಂದಿನಿಂದ ಇದುವರೆಗೆ ನಾವು ಹಣ ಉಳಿತಾಯಕ್ಕಾಗಿ ಬಳಸುವ ಕುಡಿಕೆ ಅಥವಾ ಚೀನೀ ಮಣ್ಣದ ಕುಳ್ಳಿಗೆ ವರಾಹದ ರೂಪ ಏಕೆ ನೀಡಲಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ Piggy Bank ಎಂದೇ ಏಕೆ ಕರೆಯಲಾಗುತ್ತದೆ? Lion Bank ಎಂದು ಏಕೆ ಕರೆಯುವುದಿಲ್ಲ? ಅದೇನೇ ಇದ್ದರೂ ಕೂಡ ಪಿಗ್ಗಿ ಬ್ಯಾಂಕ್ ನಲ್ಲಿ ಹಣ ಹಾಕುವ ಅಭ್ಯಾಸ ಉಳಿತಾಯದ ಮೊದಲ ನಿಯಮ ಎಂದೇ  ತಜ್ಞರು ಹೇಳುತ್ತಾರೆ.

ಈ ಪಿಗ್ಗಿ ಬ್ಯಾಂಕ್ ಬಳಕೆಗ ಬಂದದ್ದಾದರೂ ಹೇಗೆ?
ಪಿಗ್ಗಿ ಬ್ಯಾಂಕ್ ಈ ಶಬ್ದದ ಬಳಕೆ ಹೇಗೆ ಆರಂಭವಾಯಿತು ಎಂಬುದರ ಕುರಿತು ಹಲವು ಕಥೆಗಳು ಚಾಲ್ತಿಯಲ್ಲಿವೆ. 15ನೇ ಶತಮಾನದಲ್ಲಿ ಯುರೋಪ್ ನಲ್ಲಿ ಪಿಗ್ಗ್ (Pygg) ಹೆಸರಿನ ಒಂದು ಮಣ್ಣಿನಿಂದ ಜನರು ಪ್ಲೇಟ್, ಬಾಟಲಿ ಹಾಗೂ ಇತರೆ ಪಾತ್ರೆಗಳನ್ನು ತಯಾರಿಸುತ್ತಿದ್ದರು. ಅಂದಿನ ಕಾಲದ ಜನರು ತಮ್ಮ ಬಳಿ ಇರುವ ಚಿಲ್ಲರೆ ಹಣವನ್ನು ಹಾಕಲು ಈ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಹೀಗಾಗಿ ಇದಕ್ಕೆ ಪಿಗ್ಗಿ ಬ್ಯಾಂಕ್ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಆದರೆ, ಕಾಲಕ್ರಮೇಣ ಈ Pygg ಶಬ್ದವನ್ನು ತಪ್ಪಾಗಿ Pig ಎಂದು ಅರ್ಥೈಸಲು ಆರಂಭಗೊಂಡಿತು ಹಾಗೂ ಕುಂಬಾರರು ವರಾಹ ರೂಪದ ಕುಡಿಕೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಅದಾದ ಬಳಿಕ 'ಪಿಗ್ಗಿ ಬ್ಯಾಂಕ್ ' ಈ ಹೆಸರು ಜನಮಾನಸದಲ್ಲಿ  ಬಳಕೆಗೆ ಬಂದಿತು.

ಜರ್ಮನಿಯಲ್ಲಿ ಸಿಕ್ಕಿದೆ ಮೊದಲ ಪಿಗ್ಗಿ ಬ್ಯಾಂಕ್
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊಂದಿರುವ ಕೆಲವರು ಜರ್ಮನಿ ದೇಶದ ಜೊತೆಗೆ ಈ ಪಿಗ್ಗಿ ಬ್ಯಾಂಕ್ ಸಂಬಂಧವಿದೆ ಎನ್ನುತ್ತಾರೆ. ಆರಂಭದಲ್ಲಿ ಇಂತಹ ಕುಡಿಕೆಗಳು ಅಲ್ಲಿಯೇ ಪತ್ತೆಯಾಗಿದ್ದವು ಎನ್ನಲಾಗುತ್ತದೆ. 13 ನೇ ಶತಮಾತದಲ್ಲಿ ತಯಾರಿಸಲಾಗಿರುವ ಪಿಗ್ಗಿ ಬ್ಯಾಂಕ್ ಗಳು ಜರ್ಮನಿಯಲ್ಲಿ ದೊರೆತಿವೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಕೆಲವರು ಈ ಪಿಗ್ಗಿ ಬ್ಯಾಂಕ್ ಇಂಡೊನೆಷ್ಯಾ ಜೊತೆಗೆ ಸಂಬಂಧ ಹೊಂದಿದ್ದು, 14ನೇ ಶತಮಾನದಲ್ಲಿ ತಯಾರಾದ ಇಂತಹ ಪಾತ್ರೆಗಳು ಅಲ್ಲಿ ದೊರೆತಿವೆ ಎನ್ನುತ್ತಾರೆ. ಆದರೆ, ಅಂದಿನ ಕಾಲದಲ್ಲಿ ಚೀನಾ, ಇಂಡೊನೆಷ್ಯಾ ಹಾಗೂ ಯುರೋಪ್ ಗಳ ಮಧ್ಯೆ ವ್ಯಾಪಾರಿ ಸಂಬಂಧಗಳಿದ್ದವು ಏನೂ ಕೂಡ ಹೇಳಲಾಗುತ್ತದೆ. ಹೀಗಾಗಿ ಈ ಪಿಗ್ಗಿ ಬ್ಯಾಂಕ್ ಗಳ ಪರಿಕಲ್ಪನೆ ಒಂದು ದೇಶದಿಂದ ಎರಡನೇ ದೇಶಕ್ಕೆ ಹಾಗೂ ಎರಡನೇ ದೇಶದಿಂದ ಮೂರನೇ ದೇಶಕ್ಕೆ ತಲುಪಿರಬಹುದು. ಇಂತಹುದರಲ್ಲಿ ವಿಶ್ವದ ಮೊದಲ ಪಿಗ್ಗಿ ಬ್ಯಾಂಕ್ ಎಲ್ಲಿ ತಯಾರಿಸಲಾಗಿದೆ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟ ಸಾಧ್ಯವೇ ಸರಿ.

ಕೆಲವು ಇತಿಹಾಸಕಾರರು ನೀಡಿರುವ ಮಾಹಿತಿ ಪ್ರಕಾರ ಈ ಪಿಗ್ಗಿ ಬ್ಯಾಂಕ್ ಗಳ ಸಂಬಂಧ ಚೀನಾದ ಕಿಂಗ್ ಸಾಮ್ರಾಜ್ಯದ ಜೊತೆಗಿದೆ ಎನ್ನಲಾಗುತ್ತದೆ. ಆದರೆ ವರಾಹವನ್ನು ಚೀನಾದಲ್ಲಿ ಸಮೃದ್ಧಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಹೀಗಾಗಿ ಅಲ್ಲಿನ ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ವರಾಹದ ಆಕಾರದ ಪಾತ್ರೆಗಳನ್ನು ತಯಾರಿಸಿ ಅದರಲ್ಲಿ ಇಡುತ್ತಿದ್ದರು. ಆದರೆ ಕೆಲ ವಿದ್ವಾಂಸರು ಇದೊಂದು ಕಟ್ಟು ಕಥೆಯಾಗಿದೆ ಎಂದು ಹೇಳುತ್ತಾರೆ. ಅವರು ಹೇಳುವ ಪ್ರಕಾರ 15ನೇ ಶತಮಾನದಲ್ಲಿ ಪಿಗ್ ಕ್ಲೇ ಹೆಸರಿನ ಮಣ್ಣಿನ ಪ್ರಕಾರವೇ ಇರಲಿಲ್ಲ ಎನ್ನಲಾಗುತ್ತದೆ. ಕೆಲ ಇಂಗ್ಲಿಷ್ ನಿಘಂಟುಗಳಲ್ಲಿ pygg ಮತ್ತು pig ಎರಡೂ ಸಮಾನಾರ್ಥಕ ಪದದ ರೂಪದಲ್ಲಿ ಬಳಸಲಾಗಿದೆ. ಇದರ ಅರ್ಥ ಒಂದು ರೀತಿಯ ಸೇರೆಮಿಕ್ ಪದಾರ್ಥದಿಂದ ತಯಾರಿಸಲಾದ ವಸ್ತು ಎಂದರ್ಥ. ಉದಾಹರಣೆಗಾಗಿ 15ನೇ ಶತಮಾನದಲ್ಲಿ ಸ್ಕಾಟ್ಲೆಂಡ್ ನಲ್ಲಿನ ಒಂದು ಮನಿಬಾಕ್ಸ್ ಗೆ 'ಪಾಯರ್ಲಿ ಪಿಗ್' ಎಂದು ಹೆಸರಿಡಲಾಗಿತ್ತು. 

ಆದರೆ, ಇಂದು ಪಿಗ್ಗಿ ಬ್ಯಾಂಕ್ ಎಂದರೆ  ನಾಣ್ಯಗಳನ್ನು ಸಂಗ್ರಹಿಸಿ ಇಡಲು ಬಳಸಲಾಗುವ ವರಾಹ ಆಕಾರದ ಒಂದು ಪಾತ್ರೆ ಎಂದೇ ಬಿಂಬಿಸಲಾಗಿದೆ. ಹೀಗಾಗಿ ಅದು ಮಣ್ಣಿನಿಂದ ಅಥವಾ ಪ್ಲಾಸ್ಟಿಕ್ ನಿಂದ ಅಥವಾ ಇತರೆ ಯಾವುದೇ ಧಾತುಗಳಿಂದ ತಯಾರಿಸಲಾಗಿದ್ದರೂ ಕೂಡ ಅದರ ಹೆಸರು ಮಾತ್ರ ಪಿಗ್ಗಿ ಬ್ಯಾಂಕ್ ಎಂದೇ ಹೇಳಲಾಗುತ್ತದೆ. ಕಾಲಕ್ಕೆ ತಕ್ಕಂತೆ ಪಿಗ್ಗಿ ಬ್ಯಾಂಕ್ ಗಳ ತಯಾರಿಕ, ಆಕಾರ ಮತ್ತು ರೂಪಗಳಲ್ಲಿ ಬದಲಾವಣೆಗಳಾಗಿದ್ದು, ಇಂದಿನ ಕಾಲದ ಕೆಲ ಕುಡಿಕೆಗಳನ್ನು ಒಡೆಯುವ ಅಗತ್ಯತೆ ಕೂಡ ಇಲ್ಲ. ಇಂದಿನ  ಕುಡಿಕೆಗಳಿಗೆ ಮುಚ್ಚಳ ಬಳಸಲಾಗಿದ್ದು, ಮುಚ್ಚಳ ತೆಗೆದು ನೀವು ಅದರಲ್ಲಿನ ಹಣವನ್ನು ಬಳಸಬಹುದಾಗಿದೆ.

Trending News