ಸಚಿನ್, ಕೊಹ್ಲಿ ಇವರ್ಯಾರು ಅಲ್ಲ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಭಾರಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಈತ!

double century in Single Test Match: ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ವಿಶ್ವದ 8 ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಲ್ಲಿ ಒಬ್ಬ ಭಾರತೀಯ ಆಟಗಾರ. ಆದರೆ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅಲ್ಲ.. ರನ್ ಮಿಷನ್ ವಿರಾಟ್ ಕೊಹ್ಲಿ ಅಲ್ಲ. ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡ ಅಲ್ಲ. ಹಾಗಾದ್ರೆ ಬೇರೆ ಯಾರು? 

Written by - Savita M B | Last Updated : Sep 4, 2024, 04:01 PM IST
  • ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಶತಕ ಬಾರಿಸಿದ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ..
  • ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಇದನ್ನು ಸಾಧಿಸಿಲ್ಲ.
ಸಚಿನ್, ಕೊಹ್ಲಿ ಇವರ್ಯಾರು ಅಲ್ಲ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಭಾರಿಸಿದ ಲೆಜೆಂಡರಿ ಬ್ಯಾಟ್ಸ್‌ಮನ್ ಈತ!  title=

Sunil gavaskar: ಭಾರತೀಯ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಾ.. ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಅತಿ ಹೆಚ್ಚು ಶತಕ, ಅತಿ ಹೆಚ್ಚು ರನ್, ಅತಿ ಹೆಚ್ಚು ಪಂದ್ಯಗಳು, ದ್ವಿಶತಕ ಹೀಗೆ ಹಲವು ದಾಖಲೆಗಳಿವೆ. ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಶತಕ ಬಾರಿಸಿದ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ.. 

ಆದರೆ, ವಿಶ್ವದ ಅತಿ ಹೆಚ್ಚು ಟೆಸ್ಟ್ ಶತಕಗಳ ದಾಖಲೆ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ 51 ಶತಕಗಳನ್ನು ಗಳಿಸಿದರು. ಅವರು ಏಕದಿನದಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಶತಕ ಸಿಡಿಸುವುದು ಸಾಮಾನ್ಯ ಆದರೆ.. ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಬಾರಿಸುವುದು ಕಷ್ಟ ಸಾಧ್ಯ.. ಆದರೆ ಇದನ್ನು ಸಾಧಿಸಿದ ಆಟಗಾರೊಬ್ಬರಿದ್ದಾರೆ.. 

ಇದನ್ನೂ ಓದಿ-ಸ್ಟಾರ್‌ ನಟಿಯರ ಜೊತೆ ಡೇಟಿಂಗ್‌! ಬಾಲಿವುಡ್‌ ಬೆಡಗಿಯರನ್ನು ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ ಟೀಂ ಇಂಡಿಯಾದ ಆಟಗಾರರು ಯಾರು ಗೊತ್ತಾ?

ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಶತಕದ ಸಾಧನೆ ಮಾಡಿದ ವಿಶ್ವದ 8 ಬ್ಯಾಟ್ಸ್‌ಮನ್‌ಗಳು ಮಾತ್ರ. ಇದರಲ್ಲಿ ಭಾರತೀಯ ಕ್ರಿಕೆಟಿಗರೂ ಸೇರಿದ್ದಾರೆ. ಆದರೆ, ನೀವು ಯೋಚಿಸುವಂತೆ, ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಇದನ್ನು ಸಾಧಿಸಿಲ್ಲ.

ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ಭಾರತದ ಏಕೈಕ ಆಟಗಾರ ಸುನಿಲ್ ಗವಾಸ್ಕರ್. 10,000 ಟೆಸ್ಟ್ ರನ್ ಪೂರೈಸಿದ ಲೆಜೆಂಡ್ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದರು. ಗವಾಸ್ಕರ್ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 124 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 220 ರನ್ ಗಳಿಸಿದ್ದರು. ಆ ಸಮಯದಲ್ಲಿ, ಗವಾಸ್ಕರ್ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದರು.

ಗವಾಸ್ಕರ್ ಅವರ ಸಾಧನೆಗೆ ಎರಡು ವರ್ಷಗಳ ಮೊದಲು, 1969 ರಲ್ಲಿ, ಆಸ್ಟ್ರೇಲಿಯಾದ ದಿಗ್ಗಜ ಡೌಗ್ ವಾಲ್ಟರ್ಸ್ ಸಹ ಇದೇ ಪಂದ್ಯದಲ್ಲಿ ಶತಕ ಮತ್ತು ದ್ವಿಶತಕ ಗಳಿಸಿದರು. ಅವರು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 242 ರನ್ ಗಳಿಸಿದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 103 ರನ್ ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. 

ಇದನ್ನೂ ಓದಿ-ಹಾರ್ದಿಕ್‌ ವಿರುದ್ಧ ಸೇಡು ತೀರಿಸಿಕೊಂಡ ನತಾಶ? Mr.x ಜೊತೆಗಿನ ಜಿಮ್‌ ಫೋಟೋ ವೈರಲ್‌!

ಇನ್ನು ಸುನಿಲ್ ಗವಾಸ್ಕರ್ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು 125 ಪಂದ್ಯಗಳ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ 10122 ರನ್ ಗಳಿಸಿದರು. ಇದರಲ್ಲಿ 34 ಶತಕ ಹಾಗೂ 45 ಅರ್ಧ ಶತಕಗಳೂ ಸೇರಿವೆ. ತಮ್ಮ ವೃತ್ತಿ ಜೀವನದಲ್ಲಿ ಸುನಿಲ್ ಗವಾಸ್ಕರ್ ಅವರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಇದುವರೆಗೆ ಮುರಿಯದ ದಾಖಲೆಗಳ ಪೈಕಿ ಭಾರತ ತಂಡದ ನಾಯಕನಾಗಿ 732 ರನ್ ಗಳಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ ಭಾರತೀಯ ಆಟಗಾರ ಸುನಿಲ್ ಗವಾಸ್ಕರ್. ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News