ನವದೆಹಲಿ: ಎಟಿಎಂಗಳಿಂದ ಹೆಚ್ಚುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ 10,000 ರೂ.ಗಿಂತ ಹೆಚ್ಚಿನ ವಹಿವಾಟಿಗೆ ಒಟಿಪಿಯನ್ನು ಕಡ್ಡಾಯಗೊಳಿಸಿದೆ. ಈ ಸೌಲಭ್ಯದಡಿಯಲ್ಲಿ, ನೀವು ಕೆನರಾ ಬ್ಯಾಂಕಿನ ಎಟಿಎಂನಿಂದ 10,000 ರೂಪಾಯಿ ಅಥವಾ ಹೆಚ್ಚಿನ ಹಣವನ್ನು ಹಿಂಪಡೆಯಲು(ವಿಥ್ ಡ್ರಾ) ಬಯಸಿದರೆ, ಎಟಿಎಂ ವಹಿವಾಟಿನ ಸಮಯದಲ್ಲಿ ನೀವು ನಿಮ್ಮ ಮೊಬೈಲ್ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕಾಗುತ್ತದೆ.
ಎಟಿಎಂ ಪಿನ್‌ನೊಂದಿಗೆ ಒಟಿಪಿ ನಮೂದಿಸಬೇಕು:
ಹೊಸ ವೈಶಿಷ್ಟ್ಯದಡಿಯಲ್ಲಿ, ಕೆನರಾ ಬ್ಯಾಂಕ್ ನಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚಿನ ಎಟಿಎಂನಿಂದ ಹಣವನ್ನು ಹಿಂಪಡೆಯುವಾಗ ಎಟಿಎಂ ಪಿನ್ ಸಂಖ್ಯೆಯೊಂದಿಗೆ ಒಟಿಪಿಯನ್ನು ನಮೂದಿಸುವುದು ಸಹ ಅಗತ್ಯವಾಗಿದೆ. ಎಟಿಎಂ ವಂಚನೆಯನ್ನು ತಡೆಯುವ ಸಲುವಾಗಿ, ದೇಶದ ಅನೇಕ ಬ್ಯಾಂಕುಗಳು ಎಟಿಎಂ ವಹಿವಾಟಿನ ಸಮಯದಲ್ಲಿ ನೋಂದಾಯಿತ ದೂರವಾಣಿ ಸಂಖ್ಯೆಯಲ್ಲಿ ಒಟಿಪಿ ಸಂಖ್ಯೆಯನ್ನು ಸಹ ಕಳುಹಿಸಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸುರೇಶ್ ನಾಯರ್ ಅವರ ಪ್ರಕಾರ, ಎಟಿಎಂ ವಹಿವಾಟಿನ ಬಗ್ಗೆ ಸ್ಟೇಟ್ ಬ್ಯಾಂಕ್ ಒಟಿಪಿಯನ್ನು ಕಡ್ಡಾಯಗೊಳಿಸಲಿದ್ದು, ಇದು ಎಟಿಎಂ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ:
ಇದಲ್ಲದೆ, ಇನ್ನೂ ಅನೇಕ ಬ್ಯಾಂಕುಗಳು ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಿನ್ ಜೊತೆಗೆ ಗ್ರಾಹಕರ ಕಡೆಯಿಂದ ಹೆಚ್ಚುತ್ತಿರುವ ವಂಚನೆ ಪ್ರಕರಣಗಳ ದೂರಿನ ನಂತರ, ಬ್ಯಾಂಕುಗಳಿಂದ ಎಟಿಎಂ ವಹಿವಾಟಿನ ಸಮಯದಲ್ಲಿ ವಂಚನೆಯನ್ನು ತಡೆಗಟ್ಟಲು ಒಟಿಪಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ವಂಚನೆಯನ್ನೂ ಸಹ ನಿಯಂತ್ರಿಸಬಹುದು. ಬ್ಯಾಂಕುಗಳು ಈ ನಿಟ್ಟಿನಲ್ಲಿ ಕಾರ್ಯ ಪೂರ್ಣಗೊಳಿಸಿದ ನಂತರ, ನೀವು ಪಿನ್ ಜೊತೆಗೆ ಮೊಬೈಲ್‌ನಲ್ಲಿ ಬರುವ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. ಇದರ ನಂತರವೇ ನಿಮ್ಮ ವಹಿವಾಟು ಪೂರ್ಣಗೊಳ್ಳುತ್ತದೆ.