Gold ATM: ಎಟಿಎಂಗಳ ಸ್ಥಾಪನೆಯ ಬಳಿಕ ನಮ್ಮ ಬಹುತೇಕ ಆನ್ಲೈನ್ ವಹಿವಾಟುಗಳನ್ನು ಎಟಿಎಂಗಳ ಮೂಲಕವೇ ಮಾಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ, ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಬ್ಯಾಂಕಿಗೆ ಹೋಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ದೂರವಾಗಿದೆ. ದಿನ 24ಗಂಟೆಯೂ ಯಾವ ಸಮಯದಲ್ಲಿ ಬೇಕಾದರೂ ಎಟಿಎಂ ನಿಂದ ಹಣ ಡ್ರಾ ಮಾಡಬಹುದಾಗಿದೆ. ಆದರೆ, ನೀವು ಎಂದಾದರು ಎಟಿಎಂನಿಂದ ಚಿನ್ನದ ನಾಣ್ಯವನ್ನು ಡ್ರಾ ಮಾಡಿದ್ದೀರಾ... ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ...? ಈ ಸುದ್ದಿಯನ್ನೊಮ್ಮೆ ಓದಿ...
ಲಕ್ಷಾಂತರ ಗ್ರಾಹಕರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕುಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಎಟಿಎಂಗಳಿಂದ ವಂಚನೆ ಪ್ರಕರಣದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ, ಎಟಿಎಂ ವಂಚನೆ ಹೆಚ್ಚಾಗಿರುವುದಕ್ಕೆ ನ್ಯಾಯಾಲಯವು ಬ್ಯಾಂಕುಗಳನ್ನು ಖಂಡಿಸಿದೆ.
ಎಟಿಎಂಗಳಿಂದ ಹೆಚ್ಚುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ 10,000 ರೂ.ಗಿಂತ ಹೆಚ್ಚಿನ ವಹಿವಾಟಿಗೆ ಒಟಿಪಿಯನ್ನು ಕಡ್ಡಾಯಗೊಳಿಸಿದೆ.
ಎಟಿಎಂಗೆ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಆರ್ಬಿಐ ಬ್ಯಾಂಕುಗಳನ್ನು ಕೇಳಿದೆ. ಎಕನಾಮಿಕ್ ಟೈಮ್ಸ್ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಈ ವ್ಯಾಯಾಮದಲ್ಲಿ ಭಾಗಿಯಾಗಿರುವವರು ಬ್ಯಾಂಕುಗಳಿಗೆ 110 ಕೋಟಿ ರೂ. ಹೊರೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.