Packaging Rules in India:ಹಾಲು, ಚಹಾ, ಬಿಸ್ಕಿಟ್, ಖಾದ್ಯ ತೈಲಗಳ ಬೆಲೆ ಕುರಿತು ಹೊಸ ನಿಯಮ ಏಪ್ರಿಲ್ 1, 2022ರಿಂದ ಜಾರಿ

Packaging Rules in India: ಮುಂದಿನ ವರ್ಷ ಏಪ್ರಿಲ್‌ನಿಂದ ವಸ್ತುಗಳಿಗೆ ಪ್ಯಾಕೇಜಿಂಗ್‌ನ ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತರಲಿದೆ. ಯಾವುದೇ ಪ್ಯಾಕೇಜ್ ಮಾಡಲಾದ ವಸ್ತುವನ್ನು ಖರೀದಿಸುವ ಮೊದಲು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರನ್ನು ಸಶಕ್ತಗೊಳಿಸುವ ಗುರಿಯನ್ನು ಇದು ಹೊಂದಿದೆ.

Written by - Nitin Tabib | Last Updated : Nov 8, 2021, 10:43 PM IST
  • ಮುಂದಿನ ವರ್ಷ ಏಪ್ರಿಲ್‌ನಿಂದ ವಸ್ತುಗಳಿಗೆ ಪ್ಯಾಕೇಜಿಂಗ್‌ನ ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತರಲಿದೆ.
  • ಯಾವುದೇ ಪ್ಯಾಕೇಜ್ ಮಾಡಲಾದ ವಸ್ತುವನ್ನು ಖರೀದಿಸುವ ಮೊದಲು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರನ್ನು ಸಶಕ್ತಗೊಳಿಸುವ ಗುರಿಯನ್ನು ಇದು ಹೊಂದಿದೆ.
Packaging Rules in India:ಹಾಲು, ಚಹಾ, ಬಿಸ್ಕಿಟ್, ಖಾದ್ಯ ತೈಲಗಳ ಬೆಲೆ ಕುರಿತು ಹೊಸ ನಿಯಮ ಏಪ್ರಿಲ್ 1, 2022ರಿಂದ ಜಾರಿ title=
Packaging Rules in India (File Photo)

Packaging Rules in India: ನಿರಂತರವಾಗಿ  ಖರೀದಿಯ ಸಮಯದಲ್ಲಿ ಮತ್ತು ನಂತರ ಗ್ರಾಹಕರನ್ನು (Indian Consumers) ಹೆಚ್ಚು ಶಕ್ತಿಯುತವಾಗಿಸಲು, ಸರ್ಕಾರವು (Consumer Ministry) ಹೊಸ ಪ್ಯಾಕೇಜಿಂಗ್ ನಿಯಮಗಳನ್ನು ತಂದಿದೆ. ಹೊಸ ಪ್ಯಾಕೇಜಿಂಗ್ ನಿಯಮಗಳು ಏಪ್ರಿಲ್ 1, 2022 ರಿಂದ ಜಾರಿಗೆ ಬರಲಿವೆ. ಈ ನಿಯಮದ ಪ್ರಕಾರ, ಸರಕುಗಳನ್ನು ತಯಾರಿಸುವ ಕಂಪನಿಗಳು MRP ಯೊಂದಿಗೆ ಪ್ಯಾಕೆಟ್‌ನಲ್ಲಿ ಪ್ರತಿ ಯೂನಿಟ್ / ಪ್ರತಿ ಕೆಜಿ ಸರಕುಗಳ ಬೆಲೆಯನ್ನು ಬರೆಯುವುದು ಕಡ್ಡಾಯವಾಗಲಿದೆ. ಹಾಲು (Milk), ಚಹಾ, ಬಿಸ್ಕತ್ತುಗಳು, ಖಾದ್ಯ ತೈಲ (Edible Oil), ಹಿಟ್ಟು, ಬಾಟಲ್ ನೀರು, ಬೇಬಿ ಫುಡ್, ಬೇಳೆಕಾಳುಗಳು ಮತ್ತು ಧಾನ್ಯಗಳು, ಸಿಮೆಂಟ್ ಚೀಲಗಳು, ಬ್ರೆಡ್ ಮತ್ತು ಡಿಟರ್ಜೆಂಟ್‌ಗಳಂತಹ ವಸ್ತುಗಳು ಆಮದು ಮಾಡಿದ ಉತ್ಪನ್ನದ ಮೇಲೆ ಉತ್ಪಾದನಾ ದಿನಾಂಕವನ್ನು ಬರೆಯುವುದು ಅನಿವಾರ್ಯವಾಗಲಿದೆ. 

ಪ್ರತಿ ಗ್ರಾಂ, ಮಿಲಿಲೀಟರ್ ಲೆಕ್ಕಾಚಾರದಲ್ಲಿ ಬೆಲೆ ನಮೂದಿಸಬೇಕು
ಪ್ಯಾಕೇಜ್ ಮಾಡಲಾದ ಐಟಂ ಪ್ರಮಾಣಿತಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದರೆ, ನಂತರ ಬೆಲೆಯನ್ನು ಪ್ರತಿ ಗ್ರಾಂ ಅಥವಾ ಪ್ರತಿ ಮಿಲಿಲೀಟರ್‌ ಲೆಕ್ಕಾಚಾರದಲ್ಲಿ ಬರೆಯಬೇಕು. ಇದೇ ರೀತಿ, ಒಂದು ಪ್ಯಾಕೆಟ್‌ನಲ್ಲಿ 1 ಕೆಜಿಗಿಂತ ಹೆಚ್ಚು ಸರಕುಗಳಿದ್ದರೆ, ಅದರ ದರವನ್ನು 1 ಕೆಜಿ ಅಥವಾ 1 ಲೀಟರ್  ಲೆಕ್ಕಾಚಾರದಲ್ಲಿ ಬರೆಯುವುದು ಸಹ ಅನಿವಾರ್ಯವಾಗಲಿದೆ. ಸಾಮಾನ್ಯವಾಗಿ ಕಂಪನಿಗಳು ಬೆಲೆಗಳನ್ನು ಆಕರ್ಷಕವಾಗಿಸಲು ಕಡಿಮೆ ತೂಕದ ಪ್ಯಾಕೆಟ್‌ಗಳನ್ನು ಮಾರುಕಟ್ಟೆಗೆ ತರುತ್ತಿವೆ. ಸ್ಟ್ಯಾಂಡರ್ಡ್ ಪ್ಯಾಕಿಂಗ್ ಇರಬೇಕು ಎಂದು ಸರ್ಕಾರ (Modi Government) ಅವರಿಗೆ ನಿಯಮ ಮಾಡಿತ್ತು. ಇದೀಗ ಸರಕುಗಳನ್ನು ತಯಾರಿಸುವ ಕಂಪನಿಗಳು ಅವರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ಯಾಕೇಜ್ ಐಟಂಗಳ ಪ್ರಮಾಣವನ್ನು ನಿರ್ಧರಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಲಿವೆ. 

ಆಮದು ಮಾಡಿಕೊಳ್ಳಳಾಗಿರುವ ಪ್ಯಾಕೆಟ್ ಗಳ ಮೇಲೆ ಈ ಮಾಹಿತಿ ಇರಬೇಕು
ಹೊಸ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ, ಆಮದು ಮಾಡಲಾಗುವ ಪ್ಯಾಕೇಜ್ ಐಟಂಗಳ ಮೇಲೆ ತಿಂಗಳು ಅಥವಾ ಉತ್ಪಾದನಾ ವರ್ಷದ ಬಗ್ಗೆ ಮಾಹಿತಿಯನ್ನು ನೀಡುವುದು ಅನಿವಾರ್ಯವಾಗಿರಲಿದೆ. ಪ್ರಸ್ತುತ, ಪ್ಯಾಕೇಜ್ ಐಟಂಗಳ ಆಮದಿನ ಮೇಲೆ ಆಮದು ಮಾಡಿದ ತಿಂಗಳು ಅಥವಾ ದಿನಾಂಕವನ್ನು ಮಾತ್ರ ನೀಡಬೇಕಾಗುತ್ತದೆ. ಒಂದು ಪ್ಯಾಕೆಟ್‌ನಲ್ಲಿ 1 ಕೆಜಿ ಅಥವಾ 1 ಲೀಟರ್‌ಗಿಂತ ಕಡಿಮೆ ಸರಕುಗಳನ್ನು ಪ್ಯಾಕ್ ಮಾಡಿದ್ದರೆ, ಅದರ ಮೇಲೆ ಪ್ರತಿ ಗ್ರಾಂ ಅಥವಾ ಪ್ರತಿ ಮಿಲಿಲೀಟರ್ ಬೆಲೆಯನ್ನು ಬರೆಯಬೇಕಾಗುತ್ತದೆ. ಮತ್ತು ಒಂದು ಪ್ಯಾಕೆಟ್‌ನಲ್ಲಿ 1 ಕೆಜಿಗಿಂತ ಹೆಚ್ಚು ಸರಕುಗಳಿದ್ದರೆ, ಅದರ ದರವನ್ನು ಸಹ 1 ಕೆಜಿ ಅಥವಾ 1 ಲೀಟರ್ ಲೆಕ್ಕದಲ್ಲಿ ಬರೆಯಬೇಕಾಗುತ್ತದೆ. ಅದೇ ರೀತಿಯಲ್ಲಿ, ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಮೀಟರ್ ಅಥವಾ ಸೆಂಟಿಮೀಟರ್ ಲೆಕ್ಕಾಚಾರದಲ್ಲಿ ಬೆಲೆಯನ್ನು ಸಹ ಬರೆಯಬೇಕಾಗುತ್ತದೆ.

ಇದನ್ನೂ ಓದಿ-BSNL Diwali Offers ಇನ್ನೂ ಮುಗಿದಿಲ್ಲ, ಈ ಎರಡು ಪ್ಲಾನ್ ಅಡಿ ಸಿಗುತ್ತಿದೆ ಫುಲ್ ಟಾಕ್ ಟೈಮ್

19 ಐಟಂಗಳ ಮೇಲೆ ನಿಯಮ ಅನ್ವಯ
ಸರ್ಕಾರವು ಲೀಗಲ್ ಮೆಟ್ರಾಲಾಜಿ ನಿಯಮಗಳ (ಪ್ಯಾಕೆಟ್ ಸರಕು ನಿಯಮಗಳು) ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ ಹಾಲು, ಚಹಾ, ಬಿಸ್ಕತ್ತುಗಳು, ಖಾದ್ಯ ತೈಲ, ಮೈದಾ, ಬಾಟಲ್ ನೀರು ಮತ್ತು ಪಾನೀಯಗಳು, ಬೇಬಿ ಫುಡ್, ಬೇಳೆ ಕಾಳುಗಳು, ಧಾನ್ಯಗಳು, ಸಿಮೆಂಟ್ ಚೀಲಗಳು, ಬ್ರೆಡ್ ಮತ್ತು ಡಿಟರ್ಜೆಂಟ್ ಮುಂತಾದ 19 ವಸ್ತುಗಳು ಬರಲಿವೆ. 

ಇದನ್ನೂ ಓದಿ-ಮನೆಯಲ್ಲೇ ಕುಳಿತು ಸ್ಮಾರ್ಟ್ ಫೋನ್ ಮೂಲಕ ಸಂಪಾದಿಸಬಹುದು ಲಕ್ಷಾಂತರ ರೂಪಾಯಿ

ಗ್ರಾಹಕರಿಗೆ ಲಾಭ
ಉತ್ಪನ್ನದ ಗುಣಮಟ್ಟವನ್ನು ಅದರ ತಯಾರಿಕೆಯ ದಿನಾಂಕದಿಂದ ನಿರ್ಧರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಆಮದು ಮಾಡಿದ ಉತ್ಪನ್ನದ ಮೇಲೆ ಉತ್ಪಾದನಾ ದಿನಾಂಕವನ್ನು ಬರೆಯುವುದು ಇದೀಗ ಅನಿವಾರ್ಯವಾಗಿರಲಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿಯಮಗಳಲ್ಲಿ ಬದಲಾವಣೆಯನ್ನು ಸೂಚಿಸಿದೆ. ಹೊಸ ನಿಯಮಗಳಲ್ಲಿ ಎರಡು ಪ್ರಮುಖ ಬದಲಾವಣೆಗಳು ಪ್ಯಾಕೆಟ್‌ನಲ್ಲಿರುವ ಸರಕುಗಳ ಪ್ರಮಾಣ ಮತ್ತು ಯೂನಿಟ್ ಬೆಲೆಗೆ ಸಂಬಂಧಿಸಿವೆ. ಪ್ರತಿ ಗ್ರಾಂ ಸರಕುಗಳಿಗೆ ಎಷ್ಟು ಹಣವನ್ನು ಪಾವತಿಸಬೇಕೆಂದು ಗ್ರಾಹಕರು ಇದೀಗ ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.

ಇದನ್ನೂ ಓದಿ-ಸ್ವಂತ ಮನೆಯ ಕನಸಿಗೆ ಹೊಡೆತ, ಗೃಹಸಾಲ ಬಡ್ಡಿದರದಲ್ಲಿ ಹೆಚ್ಚಳ , ಹೊಸ ದರ ಎಷ್ಟಿರಲಿದೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News