ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ಸಾಕ್ಷ್ಯ ನೀಡಿದ ವಾಯುಪಡೆ

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ನಡೆದ ವಾಯುದಾಳಿಯಲ್ಲಿ ಪಾಕಿಸ್ತಾನಿ ಫೈಟರ್ ಎಫ್ -16 ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ಯಾವುದೇ ಸಾಕ್ಷ್ಯವನ್ನು ಪ್ರಸ್ತುತಪಡಿಸಲು ಭಾರತ ವಿಫಲವಾಗಿದೆ ಎಂದು ಪಾಕಿಸ್ತಾನದ ಸೈನ್ಯ ಸೋಮವಾರ ತಿಳಿಸಿದೆ.

Last Updated : Apr 9, 2019, 09:00 AM IST
ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ಸಾಕ್ಷ್ಯ ನೀಡಿದ ವಾಯುಪಡೆ title=
Pic Courtesy: ANI

ಇಸ್ಲಾಮಾಬಾದ್: ಫೆಬ್ರವರಿ 27ರಂದು ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನಿ ಯುದ್ಧ ವಿಮಾನ ಎಫ್-16 ಅನ್ನು ಹೊಡೆದುರುಳಿಸಿರುವುದಾಗಿ ಭಾರತ ಹೇಳಿತ್ತು. ಆದರೆ ಭಾರತದ ಹೇಳಿಕೆಯನ್ನು ಪಾಕಿಸ್ತಾನ ನಿರಾಕರಿಸಿತ್ತು. ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ನಡೆದ ವಾಯುದಾಳಿಯಲ್ಲಿ ಪಾಕಿಸ್ತಾನಿ ಫೈಟರ್ ಎಫ್ -16 ವಿಮಾನವನ್ನು ಹೊಡೆದುರುಳಿಸಿರುವುದಕ್ಕೆ ಯಾವುದೇ ಸಾಕ್ಷ್ಯವನ್ನು ಪ್ರಸ್ತುತಪಡಿಸಲು ಭಾರತ ವಿಫಲವಾಗಿದೆ ಎಂದು ಪಾಕಿಸ್ತಾನದ ಸೈನ್ಯ ಸೋಮವಾರ ತಿಳಿಸಿದೆ.

'ಭಾರತವು ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ'
'ಸುಳ್ಳನ್ನು ಪದೇ-ಪದೇ ಪುನಾರವರ್ತಿಸಿದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ'. ಎಫ್-16 ಯುದ್ಧ ವಿಮಾನವನ್ನು ಹೊಡೆಡು ಉರುಳಿಸಿರುವುದಕ್ಕೆ ಸಾಕ್ಷಿ ನೀಡುವಲ್ಲಿ ಭಾರತೀಯ ವಾಯುಪಡೆ ವಿಫಲವಾಗಿದೆ ಎಂದು ಪಾಕಿಸ್ತಾನಿ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಭಾರತದಿಂದ  ಫೋಟೋಗಳು ಬಿಡುಗಡೆ:
ಏರ್ ವೈಸ್ ಮಾರ್ಷಲ್ ಆರ್.ಜಿ.ಕಪೂರ್ ಸುದ್ದಿಗೋಷ್ಠಿ ನಡೆಸಿ, ಭಾರತೀಯ ವಾಯು ಪಡೆ ಪಾಕಿಸ್ತಾನಿ ಏರ್ ಫೋರ್ಸ್ F-16 ಫೈಟರ್ ಏರ್ಕ್ರಾಫ್ಟ್ ಅನ್ನು ಭಾರತದ ಗಡಿಯಲ್ಲಿ ಹೊಡೆದುರುಳಿಸಿ ಎಂಬುದಕ್ಕೆ ಸಂಬಂಧಿಸಿದ ರೇಡಾರ್ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು.

ಫೆಬ್ರವರಿ 27 ರ ಏರ್ ಆಪರೇಷನ್ ಸಂದರ್ಭದಲ್ಲಿ, ಪಾಕಿಸ್ತಾನ ವಾಯುಪಡೆಯ ಎಫ್ -16 ವಿಮಾನವನ್ನು ಕಳೆದುಕೊಂಡಿದೆ ಎಂಬುದಕ್ಕೆ ಭಾರತೀಯ ಏರ್ ಫೋರ್ಸ್ ಅತ್ಯಂತ ವಿಶ್ವಾಸಾರ್ಹ ಮಾಹಿತಿ ಮತ್ತು ಸಾಕ್ಷ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಫೆಬ್ರವರಿ 27ರಂದು ಪಾಕಿಸ್ತಾನದ ಎರಡು ಯುದ್ಧ ವಿಮಾನಗಳನ್ನು ಪತನಗೊಂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆರ್.ಜಿ. ಕಪೂರ್ ಸ್ಪಷ್ಟಪಡಿಸಿದರು.  ಇವುಗಳಲ್ಲಿ ಒಂದು ಭಾರತೀಯ ಏರ್ ಫೋರ್ಸ್ನ ಮಿಗ್ -21 ಫೈಟರ್ ವಿಮಾನ ಮತ್ತು ಎರಡನೆಯದು ಪಾಕಿಸ್ತಾನದ F-16 ವಿಮಾನವಾಗಿತ್ತು. ಪಾಕಿಸ್ತಾನದ F-16 ವಿಮಾನವನ್ನು ಅದರ ಎಲೆಕ್ಟ್ರಾನಿಕ್ ಸಹಿ ಮತ್ತು ರೇಡಿಯೋ ನಕಲುಗಳೊಂದಿಗೆ ಗುರುತಿಸಲಾಗಿದೆ. ಭದ್ರತೆ ಮತ್ತು ಗೌಪ್ಯತೆ ಮನಸ್ಸಿನಲ್ಲಿಟ್ಟುಕೊಂಡು, ನಾವು ಈ ಮಾಹಿತಿಯನ್ನು ಸಾರ್ವಜನಿಕವಾಗಿ ಮಾಡಲಿಲ್ಲವೆಂದು ಅವರು ಹೇಳಿದರು.

ಐಎಎಫ್ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿರುವ ಬಗ್ಗೆ ಅನೇಕ ನಂಬಲರ್ಹ ಪುರಾವೆಗಳಿವೆ. ಏರ್ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ (AWACS) ಪಾಕಿಸ್ತಾನಿ ವಿಮಾನವನ್ನು ತಕ್ಷಣವೇ ಸೆಳೆಯಿತು. ಹಾಗಾಗಿ ಪಾಕಿಸ್ತಾನದ ವಿಮಾನದಿಂದ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ಅವರು ಹೇಳಿದರು. 
 

Trending News