close

News WrapGet Handpicked Stories from our editors directly to your mailbox

ಪೂಂಚ್ ಜಿಲ್ಲೆಯ ಕ್ರಿಶಾ ಘಾಟಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಪಾಕಿಸ್ತಾನವು, ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪೂಂಚ್ ಜಿಲ್ಲೆಯ ಕ್ರಿಶಾ ಘಾಟಿ ಸೆಕ್ಟರ್‌ನಲ್ಲಿ ಶುಕ್ರವಾರ ಕದನ ವಿರಾಮವನ್ನು ಉಲ್ಲಂಘಿಸಿದೆ. 

Updated: Jul 12, 2019 , 09:52 AM IST
ಪೂಂಚ್ ಜಿಲ್ಲೆಯ ಕ್ರಿಶಾ ಘಾಟಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ
File Image

ಶ್ರೀನಗರ: ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪೂಂಚ್ ಜಿಲ್ಲೆಯ ಕ್ರಿಶಾ ಘಾಟಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಶುಕ್ರವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಭಾರತೀಯ ಸೇನೆ ಪ್ರತಿದಾಳಿ ನಡೆಸುತ್ತಿದೆ.

ಶುಕ್ರವಾರ ಬೆಳಿಗ್ಗೆಯಿಂದ ಎಲ್‌ಒಸಿಯ ಎರಡೂ ಬದಿಗಳಲ್ಲಿ ಮಾರ್ಟರ್ ಶೆಲ್ ದಾಳಿ ನಡೆಯುತ್ತಿದೆ. ಆದರೆ ಈವರೆಗೂ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

ಇದಕ್ಕೂ ಮೊದಲು ಪಾಕಿಸ್ತಾನ ರೇಂಜರ್ಸ್ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಗುಂಡಿನ ದಾಳಿಯಲ್ಲಿ ನಾಗರಿಕರೊಬ್ಬರು ಗಾಯಗೊಂಡಿದ್ದರು.