ಗಜುವಾಕಾ ಮತ್ತು ಭೀಮಾವರಂನಿಂದ ನಟ ಪವನ್ ಕಲ್ಯಾಣ್ ಚುನಾವಣಾ ಕಣಕ್ಕೆ

ಗಜವಾಕಾ ಮತ್ತು ಭೀಮಾವರಂ ಕ್ಷೇತ್ರಗಳಿಂದ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನಟ ಪವನ್ ಕಲ್ಯಾಣ್ ಮಂಗಳವಾರದಂದು ಘೋಷಿಸಿದ್ದಾರೆ.

Last Updated : Mar 19, 2019, 08:44 PM IST
ಗಜುವಾಕಾ ಮತ್ತು ಭೀಮಾವರಂನಿಂದ ನಟ ಪವನ್ ಕಲ್ಯಾಣ್ ಚುನಾವಣಾ ಕಣಕ್ಕೆ  title=

ನವದೆಹಲಿ: ಗಜವಾಕಾ ಮತ್ತು ಭೀಮಾವರಂ ಕ್ಷೇತ್ರಗಳಿಂದ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನಟ ಪವನ್ ಕಲ್ಯಾಣ್ ಮಂಗಳವಾರದಂದು ಘೋಷಿಸಿದ್ದಾರೆ.

ಕೆಲವು ವರ್ಷಗಳ ಹಿಂದಷ್ಟೇ ಜನಸೇನಾ ಪಕ್ಷವನ್ನು ಹುಟ್ಟು ಹಾಕುವ ಮೂಲಕ ಅಧಿಕೃತ ರಾಜಕಾರಣಕ್ಕೆ ಪ್ರವೇಶಿಸಿದ್ದ ಪವನ್ ಕಲ್ಯಾಣ ಈಗ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಲವಾರು ಸಮೀಕ್ಷೆಗಳ ನಂತರ ಪವನ್ ಕಲ್ಯಾಣ ವಿಶಾಖ್ ಪಟ್ಟಣಂ ಜಿಲ್ಲೆಯಲ್ಲಿರುವ ಗಜುವಾಕಾ ಹಾಗೂ ಪಶ್ಚಿಮ ಗೋದಾವರಿಯಲ್ಲಿರುವ ಭೀಮಾವರಂನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಇತ್ತಿಚಿಗಷ್ಟೇ ಬಹುಜನ ಸಮಾಜ ಪಕ್ಷ, ಸಿಪಿಐ ಮತ್ತು ಸಿಪಿಐ (ಎಂ) ಜತೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಜನ ಸೇನೆ ನಿರ್ಧರಿಸಿದೆ. ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಜನಸೇನಾ 140 ವಿಧಾನಸಭಾ ಮತ್ತು 18 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಪಕ್ಷ ತಿಳಿಸಿದೆ.

ಮಾರ್ಚ್ 17 ರಂದು ಪವನ್ ಕಲ್ಯಾಣ್ ಅವರು ಬಿಎಸ್ಪಿ ಮುಖ್ಯಸ್ಥ ಮಾಯಾವತಿ ಅವರನ್ನು ದೇಶದ ಪ್ರಧಾನಿಯಾಗಿ ನೋಡಬೇಕೆಂದು ಹೇಳಿಕೆ ನೀಡಿದ್ದರು.ಏಪ್ರಿಲ್ 3 ರಂದು ಬಿಎಸ್ಪಿ ಮಾಯಾವತಿಯವರು ಜನಸೇನಾ ಪರ ಪ್ರಚಾರ ಮಾಡಲು ಅಮಲಾಪುರಂ ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

Trending News