ಚಿಕನ್ ಟಿಕ್ಕಾ+ ಚಹಾ = 2020- ನೂತನ ವರ್ಷಕ್ಕೆ ಏನಿದು ಹೊಸ ಫಾರ್ಮುಲಾ ..?

ಹೌದು, ನೀವು ನಂಬಿದರೆ ನಂಬಿ ಬಿಟ್ರೆ ಬಿಡಿ...ನೂತನ ವರ್ಷವನ್ನು ಸ್ವಾಗತಿಸಿ ನಾಲ್ಕು ದಿನಗಳು ಆಯಿತು,ಆದ್ರೂ ಕೆಲವೊಬ್ಬರು ಇನ್ನು ನ್ಯೂ ಇಯರ್ ಗುಂಗಿನಿಂದ ಇನ್ನೂ ಹೊರಬಂದಿಲ್ಲ.

Last Updated : Jan 4, 2020, 03:44 PM IST
ಚಿಕನ್ ಟಿಕ್ಕಾ+ ಚಹಾ = 2020- ನೂತನ ವರ್ಷಕ್ಕೆ ಏನಿದು ಹೊಸ ಫಾರ್ಮುಲಾ ..?  title=
screen grab

ನವದೆಹಲಿ: ಹೌದು, ನೀವು ನಂಬಿದರೆ ನಂಬಿ ಬಿಟ್ರೆ ಬಿಡಿ...ನೂತನ ವರ್ಷವನ್ನು ಸ್ವಾಗತಿಸಿ ನಾಲ್ಕು ದಿನಗಳು ಆಯಿತು,ಆದ್ರೂ ಕೆಲವೊಬ್ಬರು ಇನ್ನು ನ್ಯೂ ಇಯರ್ ಗುಂಗಿನಿಂದ ಇನ್ನೂ ಹೊರಬಂದಿಲ್ಲ.

ಇಂತಹ ಸಂದರ್ಭದಲ್ಲಿ ನಿಮಗೆ ನಾವು ಒಂದು ಅಚ್ಚರಿಯ ಸಂಗತಿಯೊಂದನ್ನು ಹೇಳುತ್ತಿದ್ದೇವೆ..ಏನಪ್ಪಾ ಅಂದ್ರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನೂತನ ವರ್ಷಕ್ಕೆ ಹೊಸ ರುಚಿ ಸವಿಯಲು ಇಲ್ಲೊಬ್ಬರು ಮಾತ್ರ ಚಿಕನ್ ಜೊತೆ ಚಹಾ ಮಿಶ್ರಣ ಮಾಡಿ ಸವಿಯುತ್ತಿದ್ದಾರೆ.

ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಆರಂಭದಲ್ಲಿ ಚಿಕನ್ ತಂದೂರಿ ಲೆಗ್ ತಿನ್ನಲು ಬಯಸಿರುವುದಾಗಿ ಹೇಳಿದ್ದಾರೆ. ಆದರೆ ಅವರಿಗೆ ಅದರ ಬದಲು ಸಿಕ್ಕಿದ್ದು ಮಾತ್ರ ಚಿಕನ್ ಟಿಕ್ಕಾ, ಈಗ ಇದರ ಜೊತೆ ಚಹಾ ಮಿಕ್ಸ್ ಮಾಡಿ ಬ್ರೇಕ್ ಫಾಸ್ಟ್ ನಂತೆ ಸವಿಯುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.ನೂತನ ವರ್ಷಕ್ಕೆ ನೂತನ ಡಿಶ್ ನ್ನು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದಾರೆ. ಒಂದು ವೇಳೆ ನಿಮಗೂ ಇದು ಒಂದು ವೇಳೆ ಸರಿ ಎನಿಸಿದಲ್ಲಿ ನಮಗೂ ಇದರ ಸವಿರುಚಿ ಬಗ್ಗೆ ಸ್ವಲ್ಪ ಹೇಳಿ...ಆಯ್ತಾ ....!

 

Trending News